ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟೆ ನಾಡಿಗೆ ಡ್ರೋನ್ ಕ್ಯಾಮೆರಾ ಕಣ್ಗಾವಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 24: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದರೂ, ಇದನ್ನು ಅರ್ಥಮಾಡಿಕೊಳ್ಳದ ಜನತೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸುಖಾಸುಮ್ಮನೆ ಬೀದಿಗೆ ಬರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವವರು ಮತ್ತು ಮನೆಯ ಇಕ್ಕೆಲಗಳಲ್ಲಿ ಮನೆಯಿಂದ ಹೊರ ಬಂದು ಕಣ್ಣು ತಪ್ಪಿಸಿ ಸುಖಾಸುಮ್ಮನೆ ಬೀದಿ ಸುತ್ತಾಡುವವರಿಗೆ ಇನ್ಮುಂದೆ ಕಡಿವಾಣ ಬೀಳಲಿದೆ. ಒಂದು ವೇಳೆ ಮನೆಯಿಂದ ಹೊರ ಬಂದರೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಲಿದೆ.

ಚಿತ್ರದುರ್ಗ ಪೊಲೀಸ್ ಇಲಾಖೆಯು, ಬೀದಿಯಲ್ಲಿ ಬೇಕಾಬಿಟ್ಟಿ ತಿರುಗಾಡುವವರನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮಾರಾ ಬಳಸಿದ್ದಾರೆ. ಗೂಡಂಗಡಿಗಳು, ಬೇಕರಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ನಿಲ್ಲುವವರ ಮೇಲೆ ನಿಗಾವಹಿಸಲು ಇದು ಸಹಕಾರಿಯಾಗಿದೆ.

Drone Camera Used By Chitradurga Police

ರಸ್ತೆಯಲ್ಲಿ ಸುತ್ತಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಚಿತ್ರದುರ್ಗ ಪೊಲೀಸರು ಸಿದ್ಧತೆಯಲ್ಲಿದ್ದಾರೆ. ಇದಲ್ಲದೆ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪ್ರಮುಖ ರಸ್ತೆಗೆ, ಸರ್ಕಲ್ ಗಳಿಗೆ ಸೇರುವ ರಸ್ತೆಗಳಿಗೆ ಅಡ್ಡಲಾಗಿ ಕೋಲನ್ನು ಕಟ್ಟಿ ಓಡಾಟಕ್ಕೆ ನಿರ್ಬಂಧಿಸಲಾಗಿದೆ.

Drone Camera Used By Chitradurga Police

ಯಾರಾದರೂ ನಗರದಲ್ಲಿ ಸಂಚರಿಸಿದರೆ, ಮುಖ್ಯ ರಸ್ತೆಯಲ್ಲಿಯೇ ಹೋಗಿ, ಮತ್ತೆ ಅದೇ ರಸ್ತೆಯಲ್ಲಿ ಹಿಂದಿರುಗಿ ಬರಬೇಕು. ಈಗಾಗಲೇ ಜಿಲ್ಲಾಡಳಿತ ಅಂತರ್ ಜಿಲ್ಲಾ ಗಡಿಗಳನ್ನು ಬಂದ್ ಮಾಡಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸೊಂಕಿತರು ಜಿಲ್ಲೆಯೊಳಗೆ ಸುಳಿಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

English summary
The Chitradurga Police Department has used a drone camera to detect people wandering in the street.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X