ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರಕಯಾತನೆ ಅನುಭವಿಸಿ ಕಾರ್ಮಿಕರಿಗೆ ಚಿತ್ರದುರ್ಗ ಪೊಲೀಸರು ಸಹಾಯ

|
Google Oneindia Kannada News

ಚಿತ್ರದುರ್ಗ, ಮೇ 29: ಚಿತ್ರದುರ್ಗದಲ್ಲಿ 58 ಕಾರ್ಮಿಕರು ಊಟ - ನೀರು ಇಲ್ಲದೆ ಸಂಕಷ್ಟದಲ್ಲಿ ಇದ್ದರು. ಕಂಟೈನರ್‌ನಲ್ಲಿದ್ದ ಇವರು ಹಸಿವಿನಿಂದ ಪರಡಾಡುತ್ತಿದ್ದರು. ಈಗ ಇವರ ಸಹಾಯಕ್ಕೆ ಪೊಲೀಸರು ಬಂದಿದ್ದಾರೆ.

ಈ ಕಾರ್ಮಿಕರು ತಮಿಳುನಾಡಿನ ಚೆನ್ನೈನಿಂದ ಉತ್ತರ ಪ್ರದೇಶದತ್ತ ಹೊರಟಿದ್ದರು. ಆದರೆ, ಇವರಿಗೆ ಸರ್ಕಾರದ ಅನುಮತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಕಂಟೈನರ್‌ನಲ್ಲಿ ಉತ್ತರ ಪ್ರದೇಶದ ಕಡೆಗೆ ಹೋಗುತ್ತಿದ್ದರು. ಮುಚ್ಚಿದ ಕಂಟೈನರ್‌ನಲ್ಲಿ ಉಸಿರು ಬಿಗಿಹಿಡಿದು ಕಾರ್ಮಿಕರು ಕುಳಿತಿದ್ದರು.

'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ

ಊಟ, ನೀರು, ಗಾಳಿ, ಬೆಳಕು ಯಾವುದೂ ಇಲ್ಲದೆ ನರಕಯಾತನೆ ಅನುಭವಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕಂಟೈನರ್ ನಲ್ಲಿ ಒಬ್ಬರ ಮೇಲೊಬ್ಬರು ಕುಳಿತು ಈ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಕಂಟೈನರ್ ಒಳಗಿನ ದೃಶ್ಯ ತೋರಿಸಿ ಕಾರ್ಮಿಕರು ತಮ್ಮ ವಿಡಿಯೋ ತಾವೇ ಮಾಡಿದ್ದರು.

Chitradurga Police Helped Migrant Workers Who Travelling From Chennai To Uttar Pradesh

ಈ ವಿಡಿಯೋ ವೈರಲ್ ಆಗ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆ ಎಚ್ಚೆತ್ತಿದೆ.
ಜಿಲ್ಲಾ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ತಕ್ಷಣ ಸ್ಥಳೀಯ ಪೊಲೀಸರು ಜಾಗೃತರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಕಂಟೈನರ್ ತಡೆದು ಕಾರ್ಮಿಕರ ರಕ್ಷಣೆ ಮಾಡಲಾಗಿತ್ತು.

ಇವರನ್ನು ಸ್ಥಳೀಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅದರಲ್ಲಿ ಈಗಾಗಲೆ 27 ಜನರಿಗೆ ಕರೊನಾ ಪಾಸಿಟಿವ್ ದೃಢವಾಗಿದೆ. ಅಕಸ್ಮಾತ್ ಪೊಲೀಸರಿಗೆ ಈ ವಿಷಯ ತಿಳಿಯದೆ ಇದ್ದರೆ, ಕಾರ್ಮಿಕರು ಕಂಟೈನರ್ ನಲ್ಲೇ ಪ್ರಾಣ ಬಿಡಬೇಕಿತ್ತು.

English summary
Chitradurga police helped migrant workers who travelling from chennai to uttar pradesh. police shifted their into quarantine center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X