• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗಕ್ಕೂ ತಲುಪಿದ ನಟ ಸೋನು ಸೂದ್ ಸಹಾಯ ಹಸ್ತ!

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಮೇ 13; ಕೊರೊನಾ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನಟ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನರ ಮೆಚ್ಚುಗೆಯನ್ನು ಅವರುಗಳಿಸಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೂ ಅವರು ಸಹಾಯ ಹಸ್ತ ಚಾಚಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ನೆರವಿಗಾಗಿ ಬೇಡಿಕೆ ಬಂದರೆ ಕೂಡಲೇ ಸ್ಪಂದಿಸುತ್ತಾ ಜೀವ ಉಳಿಸುವ ಕೆಲಸ ಮಾಡುತ್ತಿದೆ ನಟ ಸೋನು ಸೂದ್ ತಂಡ. ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಸಹಾಯ ಮಾಡುತ್ತಿದೆ ಈ ತಂಡ. ಕೆಲವು ದಿನಗಳ ಹಿಂದೆ ಕ್ರಿಕೆಟಿಗ ಸುರೇಶ್ ರೈನಾಗೆ ನೆರವಾಗಿದ್ದರು.

ಆಕ್ಸಿಜನ್ ಕೊರತೆ : ಸೋನು ಸೂದ್ ಟ್ರಸ್ಟ್ ನಿಂದ ಆಕ್ಸಿಜನ್ ತರಿಸಿದ ಪೊಲೀಸ್ ಅಧಿಕಾರಿಆಕ್ಸಿಜನ್ ಕೊರತೆ : ಸೋನು ಸೂದ್ ಟ್ರಸ್ಟ್ ನಿಂದ ಆಕ್ಸಿಜನ್ ತರಿಸಿದ ಪೊಲೀಸ್ ಅಧಿಕಾರಿ

ಇದೀಗ ಮತ್ತೊಬ್ಬ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಮನವಿಗೆ ಸ್ಪಂದಿಸಿದ್ದಾರೆ ಸೋನು ಸೂದ್. ಅದರಲ್ಲೂ ಹರ್ಭಜನ್ ಸಿಂಗ್ ಮನವಿ ಮಾಡಿದ್ದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಾಗಿ.

ಯಾದಗಿರಿಯ ಬಡ ದಂಪತಿಗೆ ಮುಂಬೈನಿಂದ ಸೋನು ಸೂದ್ ಸಹಾಯ! ಯಾದಗಿರಿಯ ಬಡ ದಂಪತಿಗೆ ಮುಂಬೈನಿಂದ ಸೋನು ಸೂದ್ ಸಹಾಯ!

ಚಿತ್ರದುರ್ಗದ ಬಸಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ರೆಮಿಡಿಸಿವರ್ ಚುಚ್ಚುಮದ್ದಿನ ಸಹಾಯ ಕೋರಿ ಹರ್ಭಜನ್ ಸಿಂಗ್ ಟ್ವಿಟ್ ಮಾಡಿದ್ದರು. ಜೊತೆಗೆ ಆ ವ್ಯಕ್ತಿಯ ಮಾಹಿತಿ, ದೂರವಾಣಿ ಸಂಖ್ಯೆಯನ್ನು ನೀಡಿದ್ದರು.

ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ ಸಹಾಯ ತಲುಪುತ್ತದೆ ಎಂದು ಹೇಳಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಸೋನು ಸೂದ್ ತಂಡದ ಸಿಬ್ಬಂದಿ ಇಂಜೆಕ್ಷನ್ ತಲುಪಿಸಿ ಸೋಂಕಿತನಿಗೆ ನೆರವು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ನಟ ಸೋನು ಸೂದ್ ತಂಡದ ಸಹಾಯ ಹಸ್ತ ಸಿಕ್ಕಿರುವುದು ಸಂತೋಷದ ಸಂಗತಿಯಾಗಿದೆ.

English summary
Actor Sonu Sood foundation supply the Remdesiver injection to the man who under treatment at hospital in Chitradurga, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X