ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರು: ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಕೆ.ಪೂರ್ಣಿಮಾ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 17: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಿಕ್ಕ ಮಗುವೊಂದು ನಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿದ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಮಗುವನ್ನು ಎತ್ತಿಕೊಂಡು ತಾಯಿಯ ಬಳಿ ಸೇರಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆದಿವಾಲ ಬಳಿ ಘಟನೆ ನಡೆದಿದೆ.

ಕಾರ್ಯ ನಿಮಿತ್ತವಾಗಿ ಅದೇ ರಸ್ತೆಯಲ್ಲಿ ಬಂದ ಶಾಸಕರು ಮಗು ಒಂಟಿಯಾಗಿ ನಡೆದುಕೊಂಡು ಹೋಗುವುದನ್ನು ಗಮನಿಸಿ ಮಗುವನ್ನು ಮಾತನಾಡಿಸಿದ್ದಾರೆ. ಪುಟ್ಟ ಮಗುವಿನ ಜೊತೆ ಶಾಸಕರು ನಿನ್ನ ಹೆಸರು ಏನು, ಯಾವ ಊರು, ಮನೆ ಎಲ್ಲಿ ಬರುತ್ತದೆ ಅಂತ ಕೇಳಿದರು.

ಕೊರೊನಾ ಕೊಟ್ಟ ಕಷ್ಟ; ತಾಯಿ ಉಳಿಸಿಕೊಳ್ಳಲು ಶಿಕ್ಷಕಿಯ ಹೋರಾಟಕೊರೊನಾ ಕೊಟ್ಟ ಕಷ್ಟ; ತಾಯಿ ಉಳಿಸಿಕೊಳ್ಳಲು ಶಿಕ್ಷಕಿಯ ಹೋರಾಟ

ಮಗು ಮನೆಯ ವಿಳಾಸ ಹೇಳಲು ಆ ಕಡೆ, ಈ ಕಡೆ ಎಂದು ತಡವರಿಸಿದಾಗ ಶಾಸಕರು ಏಯ್! ಮಗು ಕಳೆದ ಹೋಗಿದೆ ಎತ್ಕೊಳ್ಳಪ್ಪ ಎಂದು ಅವರ ಆಪ್ತ ಸಹಾಯಕನಿಗೆ ಹೇಳುತ್ತಾ, ಮಗುವಿಗೆ ಚಾಕಲೇಟ್ ಕೊಡಿಸುವೆ ಬಾ ಎಂದು ಮಗುವನ್ನು ಎತ್ತಿಕೊಂಡು ಮಗುವಿನ ಜೊತೆ ಮಾತನಾಡಿದರು.

 Chitradurga: Hiriyuru MLA Purnima Srinivas Has Protect Child In Adivala

Recommended Video

122 ಉಗ್ರರ ಬಂಧನ, ರಾಜ್ಯದಲ್ಲಿ ರಕ್ಕಸರ ಹಾವಳಿ | Oneindia Kannada

ದೂರದಲ್ಲಿ ಇದ್ದ ಮಗುವಿನ ಪೋಷಕರನ್ನು ಕರೆದು, ""ಚಿಕ್ಕ ಮಕ್ಕಳನ್ನು ಹೀಗೆ ಹೊರಗಡೆ ಕಳಿಸಿದರೆ ಹೇಗೆ, ಮನೆಯ ಗೇಟ್ ಹಾಕಿಕೊಳ್ಳಬೇಕು ಅಲ್ವಮ್ಮ, ಮಕ್ಕಳ ಕಡೆ ಗಮನ ಹರಿಸಬೇಕು, ರಸ್ತೆ ಬದಿಯಲ್ಲಿ ನಡೆಯುವಾಗ ಮೊರಿಯಲ್ಲಿ ಬಿದ್ದರೆ ಏನ್ ಗತಿ, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ'' ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಶಾಸಕರ ಈ ಮಾನವೀಯತೆ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Hiriyuru MLA K. Purnima Srinivas has Protect Child and handed over to mother this incident happened in Adivala village in hiriyuru taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X