ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್‌ಪೋರ್ಟ್ ಸೇವಾಕೇಂದ್ರ

|
Google Oneindia Kannada News

ಚಿತ್ರದುರ್ಗ, ನವೆಂಬರ್ 20 : ಚಿತ್ರದುರ್ಗದಲ್ಲಿ ಪಾಸ್‌ಪೋರ್ಟ್‌ ಸೇವಾಕೇಂದ್ರ ತೆರೆಯಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. 2019ರ ಜನವರಿಯಿಂದ ಸೇವಾಕೇಂದ್ರ ಕಾರ್ಯಾರಂಭ ಮಾಡಲಿದೆ.

ಚಿತ್ರದುರ್ಗದ ಸಂಸದ ಬಿ.ಎನ್.ಚಂದ್ರಪ್ಪ ಸೋಮವಾರ ನಗರದ ಮುಖ್ಯ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾಕೇಂದ್ರ ಆರಂಭಿಸಲು ಇರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಪಾಸ್ಪೋರ್ಟ್ ಸೇವಾ ಆ್ಯಪ್ ಸೂಪರ್ ಹಿಟ್, 2 ದಿನದಲ್ಲಿ 10 ಲಕ್ಷ ಡೌನ್ಲೋಡ್ಪಾಸ್ಪೋರ್ಟ್ ಸೇವಾ ಆ್ಯಪ್ ಸೂಪರ್ ಹಿಟ್, 2 ದಿನದಲ್ಲಿ 10 ಲಕ್ಷ ಡೌನ್ಲೋಡ್

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, 'ಚಿತ್ರದುರ್ಗಕ್ಕೆ ಪಾಸ್‌ಪೋರ್ಟ್ ಸೇವಾಕೇಂದ್ರ ಬೇಕು ಎನ್ನುವ ಬೇಡಿಕೆ ಈಗ ಈಡೇರಿದೆ. ಪಾಸ್‌ಪೋರ್ಟ್ ಮಾಡಿಸಲು ಹುಬ್ಬಳ್ಳಿ, ಬೆಂಗಳೂರಿಗೆ ಹೋಗುವುದು ತಪ್ಪಲಿದೆ' ಎಂದರು.

ಪಾಸ್‌ಪೋರ್ಟ್: ಇನ್ನುಮುಂದೆ ಪೊಲೀಸ್ ಪರಿಶೀಲನೆ ಅಗತ್ಯ ಇಲ್ಲಪಾಸ್‌ಪೋರ್ಟ್: ಇನ್ನುಮುಂದೆ ಪೊಲೀಸ್ ಪರಿಶೀಲನೆ ಅಗತ್ಯ ಇಲ್ಲ

Chitradurga gets Passport Seva Kendra

ಜನಪ್ರತಿನಿಧಿಗಳ ನಿರಂತರ ಪ್ರಯತ್ನ, ಅಧಿಕಾರಿಗಳ ವರದಿಗಳನ್ನು ಪರಿಶೀಲನೆ ಮಾಡಿರುವ ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯಲು ಒಪ್ಪಿಗೆ ನೀಡಿದೆ. 2019ರ ಜನವರಿಯಿಂದ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಕೇಂದ್ರ ಆರಂಭವಾಗಲಿದೆ.

ದಾವಣಗೆರೆಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭದಾವಣಗೆರೆಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭ

'ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಮಂಜುರು ಮಾಡಿದೆ. ಅಂಚೆ ಕಚೇರಿಯಲ್ಲಿ ಕೇಂದ್ರ ಆರಂಭಿಸಲು ಪರಿಶೀಲನೆ ನಡೆಸಲಾಗಿದೆ. ಜನವರಿ ಮೊದಲ ವಾರದಲ್ಲಿ ಕೇಂದ್ರವನ್ನು ಆರಂಭಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ' ಎಂದು ಸಂಸದ ಚಂದ್ರಪ್ಪ ಹೇಳಿದರು.

English summary
Chitradurga MP B.N. Chandrappa said that, Passport Seva Kendra will start functioning at the Head Post Office in Chitradurga in January 2019. Passport Seva Kendra was a long-pending demand of the people of the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X