ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ಮೋಡ ಕವಿದ ವಾತಾವರಣ, ಕೆಲಕಾಲ ಸುರಿದ ಮಳೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 06; ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕರಾವಳಿ ಹಾಗೂ ಮಲೆನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು. ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಹಾಗೂ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲಕಾಲ ಮಳೆಯಾಗಿದೆ. ಚಿತ್ರದುರ್ಗ ನಗರ ಸೇರಿದಂತೆ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಭಾಗದಲ್ಲಿ ಮಳೆಯಾಗುತ್ತಿದೆ.

ಚಿತ್ರದುರ್ಗ ನಗರದಲ್ಲಿ ತಡರಾತ್ರಿ ಬಿದ್ದ ಮಳೆಯಿಂದಾಗಿ ಜೋಗಿಮಟ್ಟಿ ರಸ್ತೆಯ 4ನೇ ಅಡ್ಡ ರಸ್ತೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಮಹಿಳೆಯರು ಮನೆಗೆ ನುಗ್ಗಿದ ನೀರನ್ನು ಚರಂಡಿ ಹಾಕಲು ಪ್ರಯತ್ನವನ್ನು ಮಾಡುತ್ತಿರುವುದು ಕಂಡುಬಂತು.

ವಿಡಿಯೋ; ಹಾಸನದಲ್ಲಿ ಮಳೆ ಅಬ್ಬರ, ರಸ್ತೆ ಸಂಚಾರ ಬಂದ್ವಿಡಿಯೋ; ಹಾಸನದಲ್ಲಿ ಮಳೆ ಅಬ್ಬರ, ರಸ್ತೆ ಸಂಚಾರ ಬಂದ್

"ಕಳೆದ 4 ವರ್ಷಗಳಿಂದ ಶಾಸಕರು, ಜಿಲ್ಲಾಧಿಕಾರಿಗಳು, ನಗರಸಭೆ ಹಾಗೂ ಸಂಬಂಧಿಸಿದವರಿಗೆಲ್ಲಾ ಅರ್ಜಿ ಕೊಟ್ಟು, ಅಲೆದಾಡಿ ದುರಸ್ಥಿ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಮಳೆ ನೀರು ಮನೆಗೂ ನುಗ್ಗುತ್ತದೆ ಎಂದು ಬೇಡಿಕೊಂಡರೂ ಕೂಡ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ" ಎಂದು ಯುವಕ ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದರು.

 ಮಲೆನಾಡಾದ ಬೆಂಗಳೂರು; ರಾತ್ರಿಯಿಂದ ಸುರಿಯುತ್ತಿರುವ ಮಳೆ! ಮಲೆನಾಡಾದ ಬೆಂಗಳೂರು; ರಾತ್ರಿಯಿಂದ ಸುರಿಯುತ್ತಿರುವ ಮಳೆ!

 Chitradurga District Witness Light Rain Due To Cyclone

ಅರ್ಧ ಗಂಟೆ ಸುರಿದ ಮಳೆ: ಹಿರಿಯೂರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಮಳೆ ಪ್ರಾರಂಭವಾಗಿದ್ದು ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆಯಲು ಹರಸಾಹಸ ಪಡಬೇಕಾಯಿತು. ತರಕಾರಿ ಸೇರಿದಂತೆ ಇತರೇ ವ್ಯಾಪಾರ ವಹಿವಾಟು ನಡೆಸಲು ಸ್ವಲ್ಪ ಕಾಲ ಅಡೆಚಾಣೆ ಉಂಟಾಯಿತು.

ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಈರುಳ್ಳಿ ಕಟಾವು ಮಾಡುತ್ತಿದ್ದು, ಕೆಲಸಕ್ಕೆ ಅಡಚಣೆ ಉಂಟಾಗಲಿದೆ. ಇದೀಗ ಮಳೆ ಸುರಿಯುವುತ್ತಿರುವುದರಿಂದ ಕೆಲ ಬೆಳೆಗಳಿಗೆ ಅನುಕೂಲವಾದರೆ, ಇನ್ನು ಕೆಲವು ಬೆಳೆ ಮಳೆ ಜಾಸ್ತಿಯಾಗಿ ಹಾನಿಯಾಗಬಹುದು ಅಂದಾಜಿಸಲಾಗಿದೆ. ಈಗ ಮಳೆ ಸುರಿದರೆ ಶೇಂಗಾ ಬೆಳೆ ರೈತರ ಕೈಸೇರುವುದು ಅನುಮಾನವಾಗುತ್ತದೆ. ಬೂದಿ ರೋಗ ಕಾಣಿಸಿಕೊಂಡರೆ ಬೆಳೆ ಕೈಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚಿತ್ರದುರ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 45 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಸೆಪ್ಟೆಂಬರ್ 22ರ ಮಾಹಿತಿಯಂತೆ ಜಿಲ್ಲೆಯಲ್ಲಿ ಸುರಿದಿದ್ದು ಕೇವಲ 14 ಮಿ. ಮೀ. ಮಳೆ.

ಮಳೆ ಕೊರತೆಯ ಕಾರಣ ಶೇಂಗಾ, ಮೆಕ್ಕೆಜೋಳ, ರಾಗಿ ಸೇರಿದಂತೆ ವಿವಿಧ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದರು. ಮಳೆ ಇಲ್ಲದ ಕಾರಣ ಶೇಂಗಾ ಬೆಳೆಗೆ ಸುರಳಿ ಪೂಚಿ ಕೀಟಬಾಧೆ ಕಾಣಿಸಿಕೊಂಡಿದೆ. ಬೆಂಕಿ ರೋಗವೂ ತೀವ್ರವಾಗಿ ಹರಡುತ್ತಿದ್ದು, ರೈತರು ಆತಂಕಗೊಂಡರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಪಿ. ರಮೇಶ್ ಕುಮಾರ್ ಮಳೆ ಕೊರತೆ ಬಗ್ಗೆ ಮಾತನಾಡಿದರು,"ಮುಂಗಾರು ಅವಧಿಯಲ್ಲಿ ಕೆಲ ತಿಂಗಳು ವಾಡಿಕೆಗೂ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ. ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದು, ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ" ಎಂದು ಹೇಳಿದ್ದಾರೆ.

Recommended Video

ಧೋನಿ ಮನದ ಮಾತು | Oneindia Kannada

English summary
In the absence of rainfall during monsoon season in Chitradurga district October 5th night district witness for light rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X