• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್-19: ಚಿತ್ರದುರ್ಗದಲ್ಲಿ ರಸ್ತೆಗೆ ಬೇಲಿ, ಊರುಗಳಿಗೆ ದಿಗ್ಬಂಧನ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಮಾರ್ಚ್ 26: ಮಾರಕ ಕೊರೊನಾ ವೈರಸ್‌ಗೆ ಸಾಮಾಜಿಕ ಅಂತರ ಪರಿಣಾಮಕಾರಿ ಮದ್ದು ಎಂಬುದನ್ನು ಮನಗಂಡಿರುವ ಜಿಲ್ಲೆಯ ಜನರು, ಒಬ್ಬರಿಂದ ಒಬ್ಬರು ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಸ್ವಇಚ್ಛೆಯಿಂದ ಮಾಡುತ್ತಿದ್ದಾರೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಗೊಲ್ಲರಹಟ್ಟಿಗಳು ಹಾಗೂ ಹಳ್ಳಿಗಳಲ್ಲಿ ರಸ್ತೆಗೆ ಬೇಲಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಕಡೆ ಹಾಗೂ ಹಿರಿಯೂರು ತಾಲೂಕಿನ ಗೊಲ್ಲರಹಟ್ಟಿಗಳಲ್ಲಿ ಕೊರೋನಾ ಎಫೆಕ್ಟ್ ನಿಂದಾಗಿ ಬೇರೆ ಜನರಿಂದ ಅಂತರವನ್ನು ಕಾಯ್ದು ಕೊಳ್ಳಲು ಈ ಕೆಲಸಕ್ಕೆ ಮುಂದಾಗಿದ್ದಾರೆ. ಅದರಂತೆ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹಿರಿಯೂರಿನ ಕೋಡಿಹಳ್ಳಿ ಗೊಲ್ಲರಹಟ್ಟಿ, ಜೂಲಯ್ಯನಹಟ್ಟಿ, ಯರಬಳ್ಳಿ ಗೊಲ್ಲರಹಟ್ಟಿ, ದೇವರು ಕೊಟ್ಟ, ಚಿತ್ರದುರ್ಗದ ಇಂಗಾದಳ್, ದಂಡಿನ ಕುರಬರಹಟ್ಟಿ, ಚಳ್ಳಕೆರೆ ತಾಲೂಕಿನ ಹಳ್ಳಿಗಳು, ಹೊಸದುರ್ಗದ ಹಳ್ಳಿಗಳ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಅನ್ಯರ ಪ್ರವೇಶದ ಮಾಡಿದಂತೆ ಅವರ ಮೇಲೆ ನಿಯಂತ್ರಣ ಹೇರಿ ಬೇಲಿಯ, ರಸ್ತೆಗೆ ಕಲ್ಲುಗಳು ಸುರಿದು, ದಿಗ್ಬಂಧನ ಹಾಕಿದ್ದಾರೆ.

ಸಹಕಾರ ಸಾರಿಗೆ ಮುಷ್ಕರ; ಕೆಎಸ್ಆರ್‌ಟಿಸಿಯಿಂದ ಬಸ್ ಸೇವೆ

ಹಳ್ಳಿಗಳಿಗೆ ಬೇಲಿ ಹಾಕಿ ದಿಗ್ಬಂಧನ

ಹಳ್ಳಿಗಳಿಗೆ ಬೇಲಿ ಹಾಕಿ ದಿಗ್ಬಂಧನ

ಕೋಡಿಹಳ್ಳಿ ಗೊಲ್ಲರಹಟ್ಟಿ ಮೂಲಕ ಹಾದು ಹೋಗಿ ಶಿರಾ ಗಡಿ ಭಾಗದ ರಸ್ತೆಗೆ ಹೊಂದಿಕೊಂಡಿರುವ ಹಳ್ಳಿಗಳು ರಸ್ತೆಗಳಿಗೆ ಬೇಲಿ ಹಾಕಿ, ಜೆಸಿಬಿ ಮೂಲಕ ಟ್ರೆಂಚ್ ಹೊಡೆಸಿ, ಎರಡೂ ಬದಿಯ ರಸ್ತೆಗಳನ್ನು ಸಂಪೂರ್ಣ ದಿಗ್ಬಂಧನ ಮಾಡಲಾಗಿದೆ. ಮಹಾಮಾರಿ ಕೋವಿಡ್-19 ಕಳವಳದಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಬೇರೆ ಊರುಗಳಿಂದ ಯಾರೂ ಬರದಂತೆ ಹಾಗೂ ಊರಿನಿಂದ ಯಾರೂ ಸಹ ಹೊರ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಗ್ರಾಮಗಳಲ್ಲಿ ದಿಗ್ಬಂಧನ ಹೇರಲಾಗಿದ್ದು ಅಂತಹ ಗ್ರಾಮದಲ್ಲಿ ಯಾರಾದರೂ ಪ್ರವೇಶ ಮಾಡಿದರೆ ಅಂತವರಿಗೆ ದಂಡ ವಿಧಿಸಲಾಗುವುದು ಹಾಗೂ ಧರ್ಮದೇಟು ಬೀಳುತ್ತವೆಂದು ಬೋರ್ಡ್ ಹಾಕಿದ್ದಾರೆ.

70ರ ವೃದ್ದನಿಂದ ಕೊರೊನಾ ಜಾಗೃತಿ

70ರ ವೃದ್ದನಿಂದ ಕೊರೊನಾ ಜಾಗೃತಿ

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಂ ಟಂ ಮೂಲಕ ಗ್ರಾಮಗಳಲ್ಲಿ 70 ರ ವೃದ್ದನಿಂದ ಕೊರೊನಾ ಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿತು. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗ್ರಾಮದ ಅಜ್ಜಪ್ಪ ಎಂಬ ಇಳಿ ವಯಸ್ಸಿನಲ್ಲಿ ಟಿ.ಬಿ.ಗೊಲ್ಲರಹಟ್ಟಿ, ಚಿತ್ರದೇವರಹಟ್ಟಿ, ಮಸ್ಕಲ್, ಮಲ್ಲೇಣು, ಮಟ್ಟಿ ಗ್ರಾಮಗಳಲ್ಲಿ ಸುಡು ಬಿಸಿಲಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಬಂದಿದೆ, ಬರ ಬಂದಿದೆ 21 ದಿನ ಮನೆಯಲ್ಲಿ ಇರಿ ಯಾರು ಹೊರ ಬರಬೇಡಿ, ಭಯದಿಂದ ಇರಿ, ತಮ್ಮ ಜೀವವನ್ನು ಕಾಪಾಡಿಕೊಳ್ಳಿ ಬೆಂಗಳೂರಿನಿಂದ ಬಂದವರನ್ನು ಸ್ನಾನ ಮಾಡಿಸಿ ಒಳಗೆ ಕರೆದುಕೊಳ್ಳಿ, ಮಕ್ಕಳಿಗೆ ಗೋಬಿ ಮಂಚೂರಿ ಎಗ್, ರೈಸ್, ಮಕ್ಕಳಿಗೆ ಊಟಕ್ಕೆ ತಂಗಳಾಮ್ರಾ, ತಂಗಳು ಮುದ್ದೆ ಇಡಬೇಡಿ ಎಂದು ಜಾಗೃತಿ ಮೂಡಿಸಿದ್ದಾರೆ.

ನೈಋತ್ಯ ರೈಲ್ವೆ ಪ್ರಕಟಣೆ; ಹಲವು ರೈಲುಗಳ ಸಂಚಾರ ರದ್ದು

ಹಿರಿಯೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ

ಹಿರಿಯೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ

ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಹಿರಿಯೂರು ನಗರದ ಸಾರ್ವಜನಿಕ ಸ್ಥಳಗಳಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಆಸ್ಪತ್ರೆ, ನೆಹರೂ ಮಾರುಕಟ್ಟೆ, ತಾಲೂಕು ಕಛೇರಿ, ನಗರಸಭೆ, ಮಾಟನ್ ಮಾರ್ಕೆಟ್ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳ ಮೂಲಕ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.

ಅಧಿಕಾರಿಗಳೊಂದಿಗೆ ಶಾಸಕಿ ಕೆ. ಪೂರ್ಣಿಮಾ ಸಭೆ

ಅಧಿಕಾರಿಗಳೊಂದಿಗೆ ಶಾಸಕಿ ಕೆ. ಪೂರ್ಣಿಮಾ ಸಭೆ

ಕೋವಿಡ್ -19 ಹಿನ್ನೆಲೆಯಲ್ಲಿ ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅಧಿಕಾರಿಗಳೊಂದಿಗೆ ಕೊರೊನಾ ಬಗ್ಗೆ ಸಭೆ ನಡೆಸಿ ಕೊರೊನಾ ಸೋಂಕು ತಡೆಗಟ್ಟಲು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ನಂತರ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಪಿಎಸ್ಐ ಪರಮೇಶ, ನಗರಸಭೆ ಆಯುಕ್ತ ಶಿವಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕೊರೊನಾ ಜಾಗೃತಿ ಮೂಡಿಸಿ ಎಲ್ಲರಂತೆ ಸಾಲಿನಲ್ಲಿ ನಿಂತ ತಹಶೀಲ್ದಾರ್

English summary
ChitraDurga Luckdown: Chitradurga district villages have been blocked to outsiders for fear of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X