ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯು ಫಲಿತಾಂಶದಲ್ಲಿ ಚಿತ್ರದುರ್ಗಕ್ಕೆ ಕೊನೇ ಸ್ಥಾನ ಬರಲು ಕಾರಣವೇನು?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 17:ಜಿಲ್ಲೆಯು ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಪ್ರಸ್ತುತ ಚಿತ್ರದುರ್ಗದಲ್ಲಿ ಒಟ್ಟು 120 ಪಿಯು ಕಾಲೇಜುಗಳಿದ್ದು, ಅದರಲ್ಲಿ 15,546 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಇವರಲ್ಲಿ 7,250 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.51.45ಫಲಿತಾಂಶ ದೊರೆತಿದೆ.

ಆದರೆ ಈ ಬಾರಿ 12,848 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, 6,607 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಹಾಗೆಯೇ ಪರೀಕ್ಷೆಗೆ ಕುಳಿತ 15,546 ವಿದ್ಯಾರ್ಥಿಗಳಲ್ಲಿ ಶೇ.41.14% ಹುಡುಗರು ಮತ್ತು ಶೇ.51.15% ಹುಡುಗಿಯರು ಪಾಸಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಡಿಪಿಐ ಶೋಭಾ ಮಾತನಾಡಿ, ನಮ್ಮ ಕಾಲೇಜುಗಳಲ್ಲಿ ಉತ್ತಮ ಉಪನ್ಯಾಸಕರಿದ್ದು, ಪಾಠ ಪ್ರವಚನಗಳು ಚೆನ್ನಾಗಿ ನೆಡೆದಿವೆ. ಉತ್ತಮ ಫಲಿತಾಂಶಕ್ಕಾಗಿ ನಾವು ಸಾಕಷ್ಟು ಶ್ರಮವಹಿಸಿದ್ದೆವು. ಚಿತ್ರದುರ್ಗದಲ್ಲಿ ಬಡವರ ಮಕ್ಕಳೂ ಇದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಶ್ರೀಮಂತರ ಮಕ್ಕಳು ಉಡುಪಿ, ಮೂಡಬಿದರೆ, ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಮಂಗಳೂರು, ಮೈಸೂರು, ಇಂತಹ ಕಡೆ ಹೋಗಿ ಹೊರ ಜಿಲ್ಲೆಗಳಿಗೆ ಹೆಸರು ತರುತ್ತಾರೆ ಎಂದರು.

Chitradurga DDPI Shobha has spoken about lowest pass percentage

ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳುದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು

ವಿದ್ಯಾರ್ಥಿಗಳು ಪರೀಕ್ಷೆ ಉತ್ತಮವಾಗಿ ಬರೆದಿದ್ದರೂ ಫಲಿತಾಂಶ ಕಡಿಮೆಯಾಗಿದ್ದು ನಮಗೂ ಕೂಡ ನೋವಾಗಿದೆ. ಪೋಷಕರು ಕೂಡ ಮಕ್ಕಳ ಕಡೆ ಹೆಚ್ಚು ಗಮನಹರಿಸಬೇಕು. ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಚೆನ್ನಾಗಿ ಓದಬೇಕು ಎಂದು ಶೋಭಾ ಅವರು ತಿಳಿಸಿದರು.

English summary
PUC Results announced on 15/04/2019.Chitradurga had the lowest pass percentage.Chitradurga DDPI Shobha has spoken about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X