ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ಜಿಲ್ಲೆಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 15: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮುಖ ಅಗ್ನಿಶಾಮಕ ಡಿ.ಟಿ. ಮರುಳಸಿದ್ದಪ್ಪ ಹಾಗೂ ಅಗ್ನಿಶಾಮಕ ವಾಹನ ಚಾಲಕ ಸಿದ್ದಪ್ಪ ರಾಮಪ್ಪ ಉಪ್ಪಾರರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

ಡಿ.ಟಿ. ಮರುಳಸಿದ್ದಪ್ಪ ಮತ್ತು ಸಿದ್ದಪ್ಪ ರಾಮಪ್ಪ ಉಪ್ಪಾರರು ಅಗ್ನಿಶಾಮಕ ಕರೆ, ವಿಶೇಷ ಕರೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ಪ್ರಾಣದ ಹಂಗು ತೊರೆದು ಸಾರ್ವಜನಿಕರ ಆಸ್ತಿ- ಪಾಸ್ತಿ ಮತ್ತು ಪ್ರಾಣ ರಕ್ಷಣೆ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಕಾರಣ 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ಡಿ.ಟಿ. ಮರುಳಸಿದ್ದಪ್ಪವರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದಂಡಿಗನಹಳ್ಳಿ ಗ್ರಾಮದವರಾಗಿದ್ದಾರೆ. ಸಿದ್ದಪ್ಪ ರಾಮಪ್ಪ ಉಪ್ಪಾರವರು ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕು ಜಾವೂರು ಗ್ರಾಮದವರಾಗಿದ್ದಾರೆ.

Chitradurga: Chief Ministers Medal For Two Firefighters Staff Of Holalkere Taluk

ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಡಿ.ಟಿ. ಮರುಳಸಿದ್ದಪ್ಪ ಮತ್ತು ಸಿದ್ದಪ್ಪ ರಾಮಪ್ಪ ಉಪ್ಪಾರರಿಗೆ ದೊರೆತ ಅತ್ಯುನ್ನತ ಗೌರವಕ್ಕೆ ದಾವಣಗೆರೆ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಮತ್ತು ಚಿತ್ರದುರ್ಗ ಜಿಲ್ಲೆಯ ಅಗ್ನಿಶಾಮಕ ಅಧಿಕಾರಿ ಹಾಗೂ ದಾವಣಗೆರೆ ವಲಯದ ಎಲ್ಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Recommended Video

ದೊಡ್ಡವರ ಮಾತು ಕಥೆ, ಸತ್ಯ ಯಾವ್ದು..? ಸುಳ್ಳು ಯಾವ್ದು..? | Indrajit Lankesh vs Darshan | Oneindia Kannada

English summary
The chief minister's medal has been awarded to the Siddappa Ramappa Uppara And DT Marulasiddappa of Chitradurga District Holalkere Firefighter Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X