ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿತ್ರದುರ್ಗ, ರಸ್ತೆ ಬದಿಯಲ್ಲಿ ನೂರಾರು ಆಧಾರ್ ಕಾರ್ಡ್ ಪತ್ತೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 27; ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿ. ಎಲ್ಲಿ ಹೋದರೂ ಆಧಾರ್ ಕಾರ್ಡ್ ಇದೆಯೇ? ಎಂದು ಕೇಳುತ್ತಾರೆ. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಖಾಸಗಿ ಲೇಔಟ್‍ನಲ್ಲಿ ನೂರಾರು ಆಧಾರ್ ಕಾರ್ಡ್‍ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.

ಚಳ್ಳಕೆರೆಯ ಸೋಮಗುದ್ದು ರಸ್ತೆಯಲ್ಲಿವ ಕಂದಾಯ ನೌಕರರ ಬಡವಾಣೆಯ ಸಮೀಪದ ಖಾಲಿ ಜಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಆಧಾರ್ ಕಾರ್ಡ್‍ಗಳು ರಸ್ತೆ ಪಕ್ಕದಲ್ಲಿ ಸಿಕ್ಕಿವೆ. ಕಾರ್ಡ್‍ನಲ್ಲಿನ ವಿಳಾಸ ಅಂಬೇಡ್ಕರ್ ನಗರ, ಜನತಾ ಕಾಲೋನಿ, ಚಿತ್ರಯ್ಯನಹಟ್ಟಿಗೆ ಸಂಬಂಧಿಸಿದವು. ಈ ಕಾರ್ಡ್ 2016ರಲ್ಲಿ ಮುದ್ರಣಗೊಂಡಿವೆ.

ಲೋಕಸಭೆ: ಮತದಾರರ ಪಟ್ಟಿಗೆ 'ಆಧಾರ್' ಜೋಡಣೆ ಮಸೂದೆ ಮಂಡನೆಲೋಕಸಭೆ: ಮತದಾರರ ಪಟ್ಟಿಗೆ 'ಆಧಾರ್' ಜೋಡಣೆ ಮಸೂದೆ ಮಂಡನೆ

ರಸ್ತೆ ಬದಿಯಲ್ಲಿ ಹೀಗ ನೂರಾರು ಆಧಾರ್ ಕಾರ್ಡ್ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರತಿಯೊಂದು ಸೌಲಭ್ಯಕ್ಕೂ, ಶಾಲಾ ದಾಖಲಾತಿಗೂ, ಸರಕಾರದ ವಸತಿ ಯೋಜನೆಗೂ, ಪಿಂಚಣಿ, ಬ್ಯಾಂಕ್‍ ಖಾತೆ, ಬೆಳೆವಿಮೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ಹೀಗೆ ಅಗತ್ಯವಿರುವ ಕಾರ್ಡ್ ರಸ್ತೆ ಬದಿ ಬಂದಿದ್ದು ಹೇಗೆ? ಎಂಬುದು ಪ್ರಶ್ನೆ.

ಕೊನೆಗೂ ಕರ್ನಾಟಕ ಆಧಾರ್‌ ಕಾಯ್ದೆ ಜಾರಿ, ಯಾವ ಯೋಜನೆಗಳಿಗೆ ಕಡ್ಡಾಯಕೊನೆಗೂ ಕರ್ನಾಟಕ ಆಧಾರ್‌ ಕಾಯ್ದೆ ಜಾರಿ, ಯಾವ ಯೋಜನೆಗಳಿಗೆ ಕಡ್ಡಾಯ

Aadhaar Card

ಆಧಾರ್ ಕಾರ್ಡ್ ಅನಾಥವಾಗಿ ಬಿದ್ದಿರುವುದನ್ನು ನೋಡಿದೆರೆ ಯಾವುದೋ ದಂಧೆ ಮಾಡಲು, ದಂಧೆ ಕೊರರು ಈ ಆಧಾರ್ ಕಾರ್ಡ್‌ ಬಳಸಿದ್ದಾರೆ ಅಥವಾ ಅಂಚೆ ಕಛೇರಿಯಿಂದ ವಿತರಿಸಬೇಕಾದ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ವಿತರಣೆ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಭಾರತದಲ್ಲಿ ಕೊವಿಡ್-19 ಲಸಿಕೆಗೆ ಆಧಾರ್ ಕಾರ್ಡ್ ಕಡ್ಡಾಯವೇ? ಭಾರತದಲ್ಲಿ ಕೊವಿಡ್-19 ಲಸಿಕೆಗೆ ಆಧಾರ್ ಕಾರ್ಡ್ ಕಡ್ಡಾಯವೇ?

ಆಧಾರ್ ಕಾರ್ಡ್‍ನಲ್ಲಿ ಹೆಚ್ಚಿನವು ಮಕ್ಕಳ ಹೆಸರಿನಲ್ಲಿವೆ. ಇನ್ನೂ ಕೇವಲ ಮೂರು ವಾರ್ಡ್‍ಗಳ ಸಾರ್ವಜನಿಕರ ಆಧಾರ್ ಕಾರ್ಡ್‍ಗಳು ಇಲ್ಲಿ ಸಿಕ್ಕಿರುವುದು ಹೇಗೆ? ಎಂಬುದು ಜನರ ಪ್ರಶ್ನೆಯಾಗಿದೆ. ಕಾರ್ಡ್‌ ಬಿದ್ದಿರುವ ಕುರಿತು ಮಾಹಿತಿ ಪಡೆದು ಭಗತ್ ಸಿಂಗ್ ಹಿತರಕ್ಷಣಾ ಮತ್ತು ಸಮಗ್ರಾಭಿವೃದ್ದಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ತಿಪ್ಪೆಸ್ವಾಮಿ, ನಾಗೇಂದ್ರ, ಇತರರು ಪರಿಶೀಲಿಸಿದರು.

ಆಧಾರ್ ಕಾರ್ಡ್‍ನಲ್ಲಿರುವ ವಿಳಾಸ ಪತ್ತೆ ಮಾಡಿ ವಿಚಾರ ತಿಳಿಸಿದಾಗ ನೈಜ ಫಲಾನುಭವಿಗಳಿಗೆ ಅನುಮಾನ ಶುರುವಾಗಿದೆ. ನಮಗೆ ಈಗಾಗಲೇ ಆಧಾರ್ ಕಾರ್ಡ್ ಬಂದಿದೆ. ಆದರೆ ಮತ್ತೆ ಆಧಾರ್‌ ಕಾರ್ಡ್ ಅಲ್ಲಿ ಬಿದ್ದಿರುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

Recommended Video

Ashes : Australia ಮೂರನೇ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada

ಈ ಕುರಿತು ಮಾತನಾಡಿದ ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ, "ಇಷ್ಟೊಂದು ಪ್ರಮಾಣದಲ್ಲಿ ಆಧಾರ್ ಕಾರ್ಡ್‍ಗಳು ಖಾಲಿ ಜಾಗದಲ್ಲಿರುವ ಕುರಿತು ಮಾಧ್ಯಮಗಳಿಂದ ತಿಳಿಯಿತು. ಕೂಡಲೇ ಪರಿಶೀಲನೆ ನಡೆಸಿ, ಈ ಘಟನೆ ಯಾರಿಂದ ಆಗಿದೆ, ಎಲ್ಲಿ ಲೋಪವಾಗಿದೆ ಎಂದು ತಿಳಿದು ಕ್ರಮ ಕೈಗೊಳ್ಳಲಾಗುತ್ತದೆ"ಎಂದು ಹೇಳಿದ್ದಾರೆ.

English summary
Hundreds of aadhaar card found in empty site road in Challakere, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X