• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಕ್ತದಾನ ಮಾಡಿ, ಜೀವ ಉಳಿಸಿ: ಡಿ.ಸುಧಾಕರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 3: ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕು, ಇದೊಂದು ಜನಪರ ಕಾರ್ಯಕ್ರವಾಗಿದೆ. ಬಡವರಿಗೆ, ನಿರ್ಗತಿಕರಿಗೆ ಸಹಾಯವಾಗಬೇಕೆನ್ನುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಬ್ಬರಿಂದ ಮತ್ತೊಬ್ಬರ ಜೀವ ಉಳಿಸುವ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ಹಿರಿಯೂರು ನಗರದ ಹೊರವಲಯದಲ್ಲಿರುವ ತೋಟದಲ್ಲಿ NSUI‌ ವತಿಯಿಂದ ಹಮ್ಮಿಕೊಂಡಿದ್ದ "ರಕ್ತದಾನ ಶಿಬಿರ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರಿಂದ ನೂರಾರು ಜನರಿಗೆ ರಕ್ತದ ಅವಶ್ಯಕತೆ ಹೆಚ್ಚು ಇದೆ ಎಂದು ತಿಳಿಸಿದರು.

ಇಂತಹ ಸಮಯದಲ್ಲಿ ರಕ್ತದಾನ ತುಂಬಾ ಅವಶ್ಯಕವಾಗಿದೆ, ಜನಪರ ಯೋಜನೆಗಳನ್ನು ರೂಪಿಸುವುದು ನಮ್ಮ ಉದ್ದೇಶ, ಇದು ಹೊಸದೇನಲ್ಲ, ಒಂದು ಜೀವದಿಂದ ಮತ್ತೊಂದು ಜೀವ ಉಳಿಸುವ ಕಾರ್ಯ ಈ ಶಿಬಿರದ ಉದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಪ್ರತಿ ವರ್ಷ ನಮ್ಮ ಕಾರ್ಯಕರ್ತರು ನಡೆಸಿಕೊಂಡು ಬರುತ್ತಿದ್ದು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಹಾಗೂ ಕೊರೊನಾ ಸಂದರ್ಭದಲ್ಲಿ ಇದೊಂದು ವಿಶೇಷ ಕಾರ್ಯಕ್ರಮ ಎಂದು ಹೇಳಿದರು. ನೂರಕ್ಕೂ ಹೆಚ್ಚು ಜನರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಬಿ. ಪಾಪಣ್ಣ, ಆರ್. ನಾಗೇಂದ್ರನಾಯ್ಕ , ಶಶಿಕಲಾ ಸುರೇಶ್ ಬಾಬು, ನಗರಸಭಾ ಸದಸ್ಯ ಗುಂಡೇಶ್ ಕುಮಾರ್, ಬಿ.ಹೆಚ್. ಮಂಜುನಾಥ್, ರಂಗೇಗೌಡ, ಸೂರ್ಯ ಆಸ್ಪತ್ರೆ ಬ್ಲಡ್ ಬ್ಯಾಂಕ್ ನ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

ವಾಸವಿ ಜಯಂತಿ ಪ್ರಯುಕ್ತ ಹಿರಿಯೂರಿನ ಆರ್ಯವೈಶ್ಯ ಮಂಡಳಿ, ಲಯನ್ಸ್ ಕ್ಲಬ್, ಹಾಗೂ ಚಿತ್ರದುರ್ಗ ಜಿಲ್ಲಾ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಕನ್ನಿಕಾ ಮಹಲ್ ನಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

English summary
Blood donation camp was held at Chitradurga district Hiriyur under the leadership of former minister D. Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X