ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ 27ಕ್ಕೆ ಚಳ್ಳಕೆರೆಯಲ್ಲಿ ರಾಜ್ಯಮಟ್ಟದ ಬಿಜೆಪಿ ಎಸ್‌ಟಿ ಸಮಾವೇಶ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಮಾರ್ಚ್ 24: ಜನಾಶೀರ್ವಾದ ಯಾತ್ರೆ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಉತ್ತರ ಕರ್ನಾಟಕದ ಎಸ್‌ಟಿ ಸಮಾವೇಶ ಏರ್ಪಡಿಸಿತ್ತು. ಆದರೆ ಆಗಿರಲಿಲ್ಲ ಅದನ್ನು ಈಗ ಬಿಜೆಪಿ ಕೈಗೆತ್ತುಕೊಂಡಿದ್ದು, ಚಳ್ಳಕೆರೆಯಲ್ಲಿ ಎಸ್‌ಟಿ ಸಮಾವೇಶ ಆಯೋಜಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ತಳವಾರ ಮತ್ತು ಪೂರಕ ಜಾತಿಗಳನ್ನು ಕೇಂದ್ರ ಸರ್ಕಾರದ ವಾಲ್ಮೀಕಿ ಮೀಸಲಾತಿ ಪಟ್ಟಿಗೆ ಅನುಮೋದನೆ ಪಡೆದ ನಂತರ, ಬಿಜೆಪಿಯು ಕರ್ನಾಟಕದಲ್ಲಿ ಎಸ್‌ಟಿಗಳ ಮತಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಹಾಗಾಗಿಯೇ ಎಸ್‌ಟಿ (ವಾಲ್ಮೀಕಿ) ಸಮುದಾಯಕ್ಕಾಗಿಯೇ ಪ್ರತ್ಯೇಕ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ. ಚಳ್ಳಕೆರೆಯಲ್ಲಿ ಮಾರ್ಚ್ 27 ಈ ಸಮಾವೇಶ ನಡೆಯಲಿದೆ.

ರಾಯಚೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಸಂಧಾನ ಯತ್ನ ರಾಯಚೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಸಂಧಾನ ಯತ್ನ

ಹೊಸಪೇಟೆಯಲ್ಲಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿ, ಕೈಬಿಟ್ಟ ವಾಲ್ಮೀಕಿ (ಎಸ್‌ಟಿ) ಸಮಾವೇಶಕ್ಕೆ ಪರ್ಯಾಯವಾಗಿ ಈ ಸಮಾವೇಶ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಮಾರ್ಚ್ 27ರ ಮಂಗಳವಾರ ಸಮಾವೇಶ ಏರ್ಪಟ್ಟಿದೆ.

ಜಾರಕಿಹೊಳಿ ಸಹೋದರರ ಬಿಗಿ ಮುಷ್ಠಿಯಲ್ಲಿರುವ ಎಸ್‌ಟಿ ಸಮುದಾಯದ ಮತಗಳಿಗೆ ಶ್ರೀರಾಮುಲು ಮತ್ತು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) ಅವರ ಕಡೆಯಿಂದ ಪೆಟ್ಟು ಕೊಡಿಸಲೆಂದೇ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂಬುದು ಒಳಗಿನ ಮಾತು.

BJP ST rally in Challakere on March 27

ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮಾವೇಶದ ಮುಖ್ಯ ಅತಿಥಿ. ಸಿಟಿ ರವಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಳ್ಳಾರಿ ಸಂಸದ ಬಿ. ಶ್ರೀರಾಮುಲು, ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) ಸೇರಿದಂತೆ ಅನೇಕ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಇರುವ ವಾಲ್ಮೀಕಿ ಮತದಾರರನ್ನು ಈ ಸಭೆಗೆ ಕರೆದುಕೊಂಡು ಬರಲು ಸ್ಥಳೀಯ ನಾಯಕರು ವಾಹನ, ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲಿಕ್ಕಾಗಿಯೇ ಎಸ್‌ಟಿ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

English summary
BJP organizing ST rally in Chitradurga's Challakere on March 27. State president Yeddyurappa, Sriramulu, BJP ST morcha president Raju Gowda will be center of attraction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X