ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯವರಿಗೆ ನಿದ್ದೆಯಲ್ಲೂ ಸಿದ್ದರಾಮಯ್ಯನ ಭೀತಿ ಉಂಟಾಗಿದೆ: ಹೆಚ್. ಆಂಜನೇಯ ಲೇವಡಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 2022 : ಅಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಪಾದಯಾತ್ರೆ ಹಮ್ಮಿಕೊಂಡಿದ್ದರು, ಇಂದು ಅವರ ಜನ್ಮದಿನ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದು ಬಿಜೆಪಿಯವರಿಗೆ ನಿದ್ದೆಯಲ್ಲೂ ಸಿದ್ದರಾಮಯ್ಯನವರ ಭೀತಿ ಶುರುವಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಟೀಕಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿ ವ್ಯಕ್ತಿಯ ಜೀವನದಲ್ಲಿ 25 ವರ್ಷ, 50 ವರ್ಷ, 75, 100ನೇ ವರ್ಷದ ಜನ್ಮದಿನ ಸಂಭ್ರಮದ ವಿಷಯ. ಈ ನೆಲೆಗಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜನನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ಅಭಿಮಾನಿಗಳು, ಬೆಂಬಲಿಗರು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯರ ಜನ್ಮದಿನ ಆಚರಣೆ ಬಿಜೆಪಿಗರಲ್ಲಿ ನಡುಕು ಉಂಟು ಮಾಡಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಹೆಸರು ಕೇಳಿದರೆ ನಿದ್ದೆಗೆಟ್ಡು ಬೆಚ್ಚುಬೀಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೋಮು ಹಿಂಸಾಚಾರ; ಬಿಜೆಪಿಗರಿಂದ ಸುಳ್ಳು ಮಾಹಿತಿ ಆರೋಪಕೋಮು ಹಿಂಸಾಚಾರ; ಬಿಜೆಪಿಗರಿಂದ ಸುಳ್ಳು ಮಾಹಿತಿ ಆರೋಪ

ಜನಧನ್ ಅಕೌಂಟ್, ಉಜ್ವಲ ಯೋಜನೆ ಮೂಲಕ ಬಡಜನರ ಬದುಕನ್ನು ಉತ್ತಮದತ್ತ ಕೊಂಡೊಯ್ಯೊತ್ತೇವೆ ಎಂದು ಹೇಳಿ, ಈಗ ಜನರನ್ನು ಸಂಕಷ್ಟ ಸಿಲುಕಿಸಲಾಗಿದೆ. ಸಿಲಿಂಡರ್ ಬೆಲೆ ಏರಿಕೆ ಆಗಿ ಜನ ಕಟ್ಟಿಗೆ ಒಲೆ ಕಡೆ ಹೋಗುತ್ತಿದ್ದಾರೆ. ಬೇಳೆಕಾಳು, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪ್ರತಿವರ್ಷಕ್ಜೆ ಎರಡು ಕೋಟಿ ಉದ್ಯೋಗದ ಆಸೆ ತೋರಿಸಿದ್ದ ಬಿಜೆಪಿ, ಪ್ರತಿವರ್ಷ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಉದ್ಯೋಗ ಕಡಿತ ಮಾಡುತ್ತಿದೆ. ಅಚ್ಚೇದಿನ್ ಅಂದರೇ ಇದೆನಾ ಎಂದು ಜನರು ಬಿಜೆಪಿ, ಮೋದಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವನ್ನು ಜನ ಸ್ಮರಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ತರಲು ಜನ ಉತ್ಸಾಹ

ಕಾಂಗ್ರೆಸ್ ಸರಕಾರ ತರಲು ಜನ ಉತ್ಸಾಹ

ಬಡವರ ವಿರೋಧಿ, ಶ್ರೀಮಂತರ ಪರ ಸರ್ಕಾರ ಆಗಿರುವ ಬಿಜೆಪಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರಕಾರ ತರಲು ಜನ ಉತ್ಸಾಹಕರಾಗಿದ್ದಾರೆ. ಜನರ ನಾಡಿಮಿಡಿತವನ್ನು ಆಂತರಿಕ ಸರ್ವೇ ಮೂಲಕ ಅರಿತು ಹಾಗೂ ಈ ಮಧ್ಯೆ ಸಿದ್ದರಾಮಯ್ಯ ಜನ್ಮದಿನಕ್ಕೆ ಲಕ್ಷಾಂತರ ಜನ ಸೇರುವುದರಿಂದ ಬಿಜೆಪಿ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಲೇವಡಿ ಮಾಡಿದರು.

ಐಟಿ, ಇಡಿ, ಸಿಬಿಐ ಮೂಲಕ ಪ್ರತಿಪಕ್ಷವನ್ನು ಬೆದರಿಸಲು ಯತ್ನಿಸುತ್ತಿರುವ ಬಿಜೆಪಿ ಸರಕಾರ, ಸಿದ್ದರಾಮಯ್ಯ ವಿರುದ್ಧ ಏನು ಮಾಡಲಾಗದೆ ಮೈ ಮರಚಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನಡೆದರು, ಕುಂತ್ರು, ನಿಂತ್ರು, ಮಾತನಾಡಿದರು, ಸುಮ್ಮನಿದ್ದರು ಟೀಕೆ ಮಾಡುವ ಕೆಟ್ಟ ಹವ್ಯಾಸ ಬೆಳೆಸಿಕೊಂಡಿರುವ ಬಿಜೆಪಿಗರು, ಈಗ ಅಭಿಮಾನಿಗಳು ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ ಜನ್ಮದಿನ ಸಂಭ್ರಮದ ಮೇಲೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯರನ್ನು ಮಾತ್ರ ಟೀಕಿಸುತ್ತಿದ್ದಾರೆ

ಸಿದ್ದರಾಮಯ್ಯರನ್ನು ಮಾತ್ರ ಟೀಕಿಸುತ್ತಿದ್ದಾರೆ

ಈ ಹಿಂದೆ ಅನೇಕ ನಾಯಕರು 50, 60, 75 ಹೀಗೆ ವಿಶೇಷ ಸಂದರ್ಭ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡಿದ್ದಾರೆ. ಈಗಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಸೇರಿ ಅನೇಕ ಮುತ್ಸದ್ಧಿಗಳ ಜನ್ಮದಿನಕ್ಕೆ ನಾವೆಲ್ಲರೂ ಪಕ್ಷಾತೀತವಾಗಿ ಶುಭ ಕೋರುತ್ತೇವೆ. ಆದರೆ, ಬಿಜೆಪಿಗರು ಸಿದ್ದರಾಮಯ್ಯ ಜನ್ಮದಿನದ ಆಚರಣೆಗೆ ಮಾತ್ರ ಟೀಕಿಸುತ್ತಿರುವುದು ಅವರ ಸಣ್ಣ, ಕೆಟ್ಟ ಮನಸ್ಥಿತಿ ಹಾಗೂ ಭೀತಿಗೆ ಒಳಗಾಗಿರುವುದಕ್ಕೆ ಹಿಡಿದ ಕನ್ನಡಿ ಆಗಿದೆ ಎಂದರು

ಅಮೃತ ಮಹೋತ್ಸವ ಡಬಲ್‌ ಇಂಜಿನ್‌ ಸರಕಾರಕ್ಕೆ ಭೀತಿ ತಂದಿದೆ

ಅಮೃತ ಮಹೋತ್ಸವ ಡಬಲ್‌ ಇಂಜಿನ್‌ ಸರಕಾರಕ್ಕೆ ಭೀತಿ ತಂದಿದೆ

ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಬಿಜೆಪಿಯ ಆಡಳಿತವನ್ನು ಕಿತ್ತು ಹಾಕಿದ್ದರು. ಈಗ ಶಿಕ್ಷಣ ಕಾಶಿ, ದಾನಧರ್ಮ, ಹೋರಾಟದ ನೆಲ ಎಂದೇ ಖ್ಯಾತಿ ಗಳಿಸಿರುವ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನ ಆಚರಣೆಯು ಕೆಟ್ಟು ನಿಂತಿರುವ ಡಬಲ್ ಇಂಜಿನ್ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಮುನ್ನುಡಿ ಬರೆಯಲಿದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ ಕುರಿತು ಬಿಜೆಪಿ ನಾಯಕರು ಭಯಭೀತಿಗೆ ಒಳಗಾಗಿ ಅಧಾರರಹಿತ ಟೀಕೆ ಮಾಡುತ್ತಿದ್ದಾರೆ ಎಂದರು.

ಯಡಿಯೂರಪ್ಪ ಗುಭಣ ಬೆಳೆಸಿಕೊಳ್ಳಲಿ

ಯಡಿಯೂರಪ್ಪ ಗುಭಣ ಬೆಳೆಸಿಕೊಳ್ಳಲಿ

ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪರನ್ನು ಕಡು ಟೀಕೆ ಮಾಡುತ್ತಲೇ ಅವರ 75ನೇ ವರ್ಷದ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯಡಿಯೂರಪ್ಪ ಅವರಿಗೆ ಆಯಸ್ಸು, ಆರೋಗ್ಯ, ನೆಮ್ಮದಿ ನೀಡಲಿ ಎಂದು ಹಾರೈಸಿದ ಹೃದಯವಂತ ಸಿದ್ದರಾಮಯ್ಯ. ಈ ಪ್ರೀತಿಯನ್ನು ಯಡಿಯೂರಪ್ಪ ಕೂಡ ಹೊಂದಿದ್ದು, ಇದೇ ಕಾರಣಕ್ಕೆ ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮವನ್ನು ಟೀಕಿಸದಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿರುವುದು ಹಾಗೂ ನಾಡಿನ ಮತ್ಸದ್ಧಿ ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ಶುಭಾಶಯ ಕೋರಿರುವ ಯಡಿಯೂರಪ್ಪ ಅವರ ದೊಡ್ಡತನ ಮೆಚ್ಚುವಂತಹದ್ದಾಗಿದೆ . ಬಿಜೆಪಿ ಇತರೆ ನಾಯಕರು ಇದನ್ನು ಪಾಲಿಸುವ ಗುಣ ಬೆಳೆಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಈ ಕಾರ್ಯಕ್ರದಿಂದ ಕಾಂಗ್ರೆಸ್‌ಗೆ ಬಲ

ಈ ಕಾರ್ಯಕ್ರದಿಂದ ಕಾಂಗ್ರೆಸ್‌ಗೆ ಬಲ

ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮ ಪಕ್ಷದ ಬಲವರ್ಧನೆಗೆ ಹೆಚ್ಚು ಸಹಕಾರಿಯಾಗಲಿದೆ. ಜೊತೆಗೆ ಭವಿಷ್ಯದ ಪ್ರಧಾನಮಂತ್ರಿ ಎಂದೇ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ, ದೂರದೃಷ್ಠಿ ಯುವ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಜನ್ಮದಿನಕ್ಕೆ ಶುಭಾಶಯ ಕೋರಲು ದೆಹಲಿಯಿಂದ ಆಗಮಿಸುತ್ತಿರುವುದು ಕಾರ್ಯಕ್ರಮಕ್ಕೆ ಆನೆಬಲ ತರುತ್ತಿದೆ. ಜೊತೆಗೆ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಹೆಚ್ಚು ಉತ್ಸಾಹ ಉಂಟು ಮಾಡಿದೆ. ಈ ಕಾರ್ಯಕ್ರಮ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನ ಹಾಗೂ ಪಕ್ಷದ ಕಾರ್ಯಕರ್ತರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ ಎಂದರು.

Recommended Video

ರಾಜ್ಯದಲ್ಲಿರೋದು ನಿರ್ವೀರ್ಯ ಸರ್ಕಾರ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಕ್ರವರ್ತಿ ಸೂಲಿಬೆಲೆ ತರಾಟೆ | OneIndia Kannada

English summary
Siddaramaiah's 75 Amrit Mahotsava created fear in State BJP leaders, claimed Farmer minister H Anjaneya in Chitradurga Siddaramaiah Amrit Mahotsav was created real fear for BJP leaders,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X