ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಓಡಾಡಿದ ಕರಡಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 13: ಮಹಾಮಾರಿ ಕೊರೊನಾ ವೈರಸ್ ನಡುವೆ ಕಾಡು ಪ್ರಾಣಿಗಳು ನಾಡಿನ ಕಡೆ ಮುಖ ಮಾಡಿವೆ. ಬಹುತೇಕ ಕಾಡುಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ನಗರ, ಹಳ್ಳಿ, ಪಟ್ಟಣಗಳ ಕಡೆ ಮುಖ ಮಾಡಿದ್ದು, ಇದೀಗ ಚಿತ್ರದುರ್ಗದಲ್ಲಿ ಕರಡಿಯೊಂದು ರಾಜಾರೋಷವಾಗಿ ಓಡಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆ ಮತ್ತು ಏಕನಾಥೇಶ್ವರಿ ಪಾದಗುಡಿ, ಚಿಕ್ಕಪೆಟೆ ಮತ್ತು ದೊಡ್ಡ ಪೇಟೆಯಲ್ಲಿ ಕರಡಿಗಳು ಅಡ್ಡಾಡಿರುವ ದೃಶ್ಯ ಕಂಡು ಬಂದಿದ್ದು, ಕರಡಿ ಓಡಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 Bear Came From Forest And Roamed In Chitradurga City

 ಉಡುಪಿಯಲ್ಲೂ ಕಾಡುಕೋಣ ಪ್ರತ್ಯಕ್ಷ; ಆತಂಕ ಉಡುಪಿಯಲ್ಲೂ ಕಾಡುಕೋಣ ಪ್ರತ್ಯಕ್ಷ; ಆತಂಕ

ಚಿತ್ರದುರ್ಗ ಜಿಲ್ಲೆಯಲ್ಲಿ ಆಗಾಗ ಕರಡಿ, ಆನೆ, ಚಿರತೆ ಇತರೆ ಕಾಡುಪ್ರಾಣಿಗಳು ನಾಡಿನ ಕಡೆ ಲಗ್ಗೆ ಇಡುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪದೇ ಪದೇ ಕಾಡುಪ್ರಾಣಿಗಳು ಜಿಲ್ಲೆಯೊಳಗೆ ಬರುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

English summary
The video of bear roaming in Chitradurga city viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X