ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊರೆಸ್ವಾಮಿ ಬಗ್ಗೆ ಮತ್ತೆ ಮಾತು ತೆಗೆದ ಯತ್ನಾಳ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 28: "ರಮೇಶ್ ಕುಮಾರ್ ಇತಿಹಾಸ ಏನು, ಎಷ್ಟು ಭೂ ಕಬಳಿಕೆ ಮಾಡಿದ್ದರೆ ಎಂಬುದು ಎಲ್ಲರಿಗೂ‌ ಗೊತ್ತಿದೆ. ಬಹಳ ಸಾಚಾ ಎಂಬಂತೆ ಅವರು ಮಾತನಾಡುತ್ತಾರೆ. ಅವರು ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ, ನನ್ನ ಬಗ್ಗೆ ಮಾತಾಡುವ ನೈತಿಕತೆ ಅವರಿಗಿಲ್ಲ" ಎಂದು ಮತ್ತೆ ಗುಡುಗಿದ್ದಾರೆ ಶಾಸಕ ಬಸನಗೌಡ ಪಾಟೀಲ.

ಗೋಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿರಲು ನಾಲಾಯಕ್ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿ, "ನನ್ನ ಮೇಲೆ ಯಾವ ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಮಾಡಿರೋ ಕೇಸ್ ಗಳಿಲ್ಲ. ರಮೇಶ್ ಕುಮಾರ್ ರಿಂದ ಯಾವುದೇ ಆದರ್ಶ, ತತ್ವ ಕಲಿಯುವ ಅವಶ್ಯಕತೆಯಿಲ್ಲ. ಹೌದು, ನಾನು ಆರ್ ಎಸ್ಎಸ್ ನವನು ಏನ್ ಮಾಡ್ತಾರೆ? ನಾನೇನು ದೇಶ ವಿರೋಧಿ ಅಲ್ಲ, ಪಾಕಿಸ್ತಾನ್ ಏಜೆಂಟ್ ಅಲ್ಲ" ಎಂದಿದ್ದಾರೆ.

 ದೊರೆಸ್ವಾಮಿಯವರ ಕ್ಷಮೆ ಕೇಳುವ ಬಗ್ಗೆ ಯತ್ನಾಳ್ ತಿರುಗುತ್ತರವೇನು? ದೊರೆಸ್ವಾಮಿಯವರ ಕ್ಷಮೆ ಕೇಳುವ ಬಗ್ಗೆ ಯತ್ನಾಳ್ ತಿರುಗುತ್ತರವೇನು?

"ಮಂಗಳೂರು ಎರಡನೇ ದೆಹಲಿ ಆಗ್ತಿತ್ತು"

"ನಾನು ದೇಶದ ಪರ ಮಾತಾಡ್ತೀನಿ. ಯಾರ ಭಯವೂ ನನಗಿಲ್ಲ. ಪೊಲೀಸರು ಗಟ್ಟಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಮಂಗಳೂರು ಎರಡನೇ ದೆಹಲಿ ಆಗ್ತಿತ್ತು. ದಿಲ್ಲಿಯಲ್ಲಿ ಪೊಲೀಸರಿಗೆ ಬಂದೂಕು ತೋರಿಸ್ತಿದ್ದಾರೆ. ಅದನ್ನು ವಿರೋಧ ಮಾಡೋದ್ ಬಿಟ್ಟು ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು" ಎಂದು ಆಕ್ರೋಶಗೊಂಡರು.

 ದೊರೆಸ್ವಾಮಿಯವರ ಬಗ್ಗೆ ಮತ್ತೆ ಮಾತು

ದೊರೆಸ್ವಾಮಿಯವರ ಬಗ್ಗೆ ಮತ್ತೆ ಮಾತು

"ಸ್ವಾತಂತ್ರ್ಯ ಸಿಕ್ಕಿ 72 ವರ್ಷ ಆಗಿದೆ. ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ರು? ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಟಿ ಏಟು ತಿಂದಿದ್ದಾರಾ?" ಎಂದು ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮತ್ತೆ ಹರಿಹಾಯ್ದರು. "ಪ್ರಧಾನಿ, ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಕೇಳಲಿ. ರಾತ್ರಿ ಒಂದು, ಬೆಳಿಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ" ಎಂದರು.

ಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತವಾಗಿರಬೇಕು: ಸಚಿವ ಈಶ್ವರಪ್ಪಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತವಾಗಿರಬೇಕು: ಸಚಿವ ಈಶ್ವರಪ್ಪ

 ಕುಮಾರಸ್ವಾಮಿ ಮೇಲೆ ಯತ್ನಾಳ್ ವಾಗ್ದಾಳಿ

ಕುಮಾರಸ್ವಾಮಿ ಮೇಲೆ ಯತ್ನಾಳ್ ವಾಗ್ದಾಳಿ

ಕುಮಾರಸ್ವಾಮಿ ಅವರು ದೊರೆಸ್ವಾಮಿ ಹೋರಾಟ ಮಾಡುವಾಗ ಹುಟ್ಟಿದ್ರಾ? ವರ್ಕ್ ಇನ್ಸ್ ಪೆಕ್ಟರ್ ಆಗಿದ್ದ ದೇವೇಗೌಡರ ಮಗನಾಗಿ ಇವರಿಗೆ ಸಾವಿರಾರು ಕೋಟಿ ಎಲ್ಲಿಂದ ಬಂತು? ಅವರು ಸೈನ್ಯಕ್ಕೆ ಸೇರುವವರು ಕೂಳಿಗಾಗಿ ಸೈನ್ಯಕ್ಕೆ ಸೇರ್ತಾರೆ ಅಂತಾರೆ. ನೀವು ರಾಜಕೀಯಕ್ಕೆ ಯಾಕೆ ಸೇರಿದ್ರಿ? ನನ್ನ ಹುಟ್ಟಿನ ಬಗ್ಗೆ ಮಾತನಾಡ್ತೀರಾ, ನಿಮ್ಮ ತಂದೆ ದೇವೇಗೌಡರು ಸ್ವಾತಂತ್ರ್ಯ ಸೈನಿಕರಾ? ರೈತರು ನನ್ನ ಬಗ್ಗೆ ಹೋರಾಟ ಬಿಟ್ಟು ನೀರಾವರಿ ಬಗ್ಗೆ ಹೋರಾಟ ಮಾಡಲಿ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

 ನಾರಾಯಣಗೌಡರಿಗೆ ಬೆಂಬಲ ನೀಡಿದ ಯತ್ನಾಳ್

ನಾರಾಯಣಗೌಡರಿಗೆ ಬೆಂಬಲ ನೀಡಿದ ಯತ್ನಾಳ್

"ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ರಲ್ಲಿ ತಪ್ಪೇನಿದೆ? ದೇಶದ ಒಂದು ಭಾಗಕ್ಕೆ ಜೈಕಾರ ಹಾಕಿದ್ದಾರೆ, ಅವರು ಪಾಕಿಸ್ತಾನಕ್ಕೆ ಜೈ ಅಂದಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಕನ್ನಡಪರ ಹೋರಾಟಗಾರರು ಯಾಕೆ ದನಿ ಎತ್ತಿಲ್ಲ? ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಈ ಲ್ಯಾಂಡ್ ಮಾಫಿಯಾಗಳು ಎಲ್ಲಿ ಹೋಗಿದ್ರು?" ಎಂದು ಪ್ರಶ್ನಿಸಿದರು.

English summary
Basanagouda Yatnal again speak about doreswamy in chitradurga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X