• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮರಿಯನ್ನು ರಕ್ಷಿಸಲು ಜೀವವನ್ನೂ ಲೆಕ್ಕಿಸಲಿಲ್ಲ ಈ ಕೋತಿ: ವೈರಲ್ ವಿಡಿಯೋ

|

ಚಿತ್ರದುರ್ಗ, ಜೂನ್ 23: ತಮ್ಮ ಮಕ್ಕಳನ್ನು ಅಪಾಯದಿಂದ ರಕ್ಷಿಸಲು ಪ್ರಾಣಿಗಳು ಎಷ್ಟೆಲ್ಲ ಸಾಹಸಕ್ಕೆ ಕೈ ಹಾಕುತ್ತವೆ. ಮರಿಗಳನ್ನು ರಕ್ಷಿಸಲು ಕೆಲವು ಪ್ರಾಣಿಗಳು ತನಗಿಂತ ಬಲಿಷ್ಠವಾದ ಪ್ರಾಣಿಗಳ ವಿರುದ್ಧ ಸೆಣಸಾಟಕ್ಕೂ ನಿಲ್ಲುತ್ತವೆ. ಇನ್ನು ಕೆಲವು ಅಸಹಾಯಕತೆ ಎದುರಾದಾಗ ಕಣ್ಣೀರಿಡುತ್ತವೆ.

ಮನುಷ್ಯ ಭಾವುಕ ಜೀವಿ ಎಂದು ಹೇಳಿಕೊಂಡರೂ ನಮಗಿಂತ ಪ್ರಾಣಿಗಳೇ ಹೆಚ್ಚು ಭಾವುಕ ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ.

ಯುಎಇಯಲ್ಲಿ ಭಾರತೀಯರ ಪ್ರಾಣ ಉಳಿಸುತ್ತಿರುವ ಎಸ್ಪಿ ಸಿಂಗ್ ಖಾತೆ 93*

ರಸ್ತೆಯಲ್ಲಿ ಅಪಘಾತಕ್ಕೀಡಾಗಿ ನರಳಾಡುವವರಿಗೆ ನೆರವಾಗಲು ಮುಂದಾಗದ, ಅವರ ನರಳಾಟದ ವಿಡಿಯೋ ಮಾಡಿ ಇತರರಿಗೆ ಕಳುಹಿಸುವ ಅಮಾನವೀಯತೆಯ ಉದಾಹರಣೆಗಳೇ ಹೆಚ್ಚು.

ಅವುಗಳ ನಡುವೆ ಪ್ರಾಣಿಗಳ ಕುಟುಂಬದ ಈ ಪ್ರೀತಿ ಮನಮುಟ್ಟುತ್ತದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಮರಿಯನ್ನು ಕೋತಿಯೊಂದು ಪ್ರಾಣದ ಹಂಗು ತೊರೆದು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.

ಚಿತ್ರದುರ್ಗದ ಎಸ್ ಜೆ ಎಂ ಡೆಂಟಲ್ ಕಾಲೇಜು ಆವರಣದಲ್ಲಿದ್ದ ಮರದಲ್ಲಿ ತನ್ನ ಕಪಿಸೈನ್ಯದ ಜತೆ ಆಡುತ್ತಿದ್ದ ಮರಿ ಕೋತಿಯೊಂದು ಕೆಳಗಿದ್ದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಮೇಲೆ ಆಯ ತಪ್ಪಿ ಬಿದ್ದುಬಿಟ್ಟಿತು.

ಅದೃಷ್ಟವಶಾತ್ ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಸಿಲುಕದ ಕಾರಣ ಅದಕ್ಕೆ ಅಪಾಯವಾಗಲಿಲ್ಲ. ಆದರೆ, ಅದರಿಂದ ಹೊರಬರಲಾರದೆ ಮರಿ ಕೋತಿ ಕಂಗೆಟ್ಟಿತ್ತು. ಬಹುಶಃ ವಿದ್ಯುತ್ ಪರಿವರ್ತಕದಿಂದ ಹೊರಡುವ ಬಿಸಿ ಅದನ್ನು ಸುಡುತ್ತಿತ್ತು.

ತನ್ನ ಬಳಗದ ಯಾರಾದರೂ ಸಹಾಯ ಮಾಡುತ್ತಾರೇನೋ ಎಂದು ನಡುಗುತ್ತಾ, ಕಿರುಚುತ್ತಾ, ಅತ್ತಿತ್ತ ನೋಡುತ್ತಾ ಕುಳಿತಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆದರೂ ವಿದ್ಯುತ್ ಶಾಕ್‌ಗೆ ಮರಿ ಬಲಿಯಾಗುವ ಅಪಾಯವಿತ್ತು.

ತಾಯಿ ಕೋತಿ ಸೇರಿದಂತೆ ವಾನರ ಕುಟುಂಬದ ಬಹುತೇಕ ಹಿರಿಯ ಸದಸ್ಯರು 'ರಕ್ಷಣಾ ಕಾರ್ಯಾಚರಣೆ'ಗೆ ಮುಂದಾಗಿದ್ದರು. ಟ್ರಾನ್ಸ್ ಫಾರ್ಮರ್‌ನ ಕಂಬಿಯನ್ನು ಆಧಾರವಾಗಿಟ್ಟುಕೊಂಡು ಮರಿ ಇದ್ದಲ್ಲಿಗೆ ತಲುಪಿ ಅದನ್ನು ಎತ್ತಿಕೊಳ್ಳುವ ಪ್ರಯತ್ನಗಳನ್ನು ನಡೆಸಿದ್ದವು.

ತುಂಬಾ ಸಮಯ ಈ ಪ್ರಯತ್ನ ನಡೆಸಿದರೂ ಫಲಕೊಡಲಿಲ್ಲ. ಟ್ರಾನ್ಸ್‌ಫಾರ್ಮರ್ ಬೇಲಿಯ ಮೇಲೆ ಕುಳಿತಿದ್ದ ಕೋತಿಯೊಂದು ಕೊನೆಗೂ ಧೈರ್ಯ ಮಾಡಿ ಮುನ್ನಗ್ಗಿತು. ಪೆಟ್ಟಿಗೆ ಮೇಲೆ ಇಳಿದು ಎರಡೂ ಕೈಗಳಿಂದ ಮರಿಯನ್ನು ಎಳೆದುಕೊಂಡಿತು.

ಈ ವೇಳೆಗೆ ಪಕ್ಕದಲ್ಲಿದ್ದ ಇನ್ನೊಂದು ಕೋತಿ ಮರಿಯನ್ನು ಎತ್ತಲು ಸಹಾಯ ಮಾಡಿತು. ಮರಿಯನ್ನು ಅಪ್ಪಿ ಹಿಡಿದ ಮಂಗ ಸರಸರನೆ ಅಲ್ಲಿಂದ ಓಡಿ ತನ್ನ ಗುಂಪನ್ನು ಸೇರಿಕೊಂಡಿತು.

ಇತ್ತ ಮುಂದೇನಾಗುವುದು ಎಂಬ ಕುತೂಹಲದಿಂದ ನೋಡುತ್ತಾ, ವಿಡಿಯೋ ಮಾಡುತ್ತಿದ್ದ ಜನರು ಹರ್ಷೋದ್ಗಾರ ಮಾಡಿದರು.

English summary
In a heart touching incident a baby monkey fell on electrical transformer was rescued by other monkeys in Chitradurga district. A video of the monkeys 'rescue operation' goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X