ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗಕ್ಕೆ ಕೋವಿಡ್ ವ್ಯಾಕ್ಸಿನ್ ಆಗಮನ: ಜಿಲ್ಲಾಧಿಕಾರಿಯಿಂದ ಸ್ವಾಗತ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರು 14: ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಕೊರೊನಾ ಲಸಿಕೆ ಆಗಮಿಸಿದ್ದು, ಜಿಲ್ಲಾಧಿಕಾರಿ ಕವಿತಾ, ಡಿಹೆಚ್ಓ ಡಾ.ಪಾಲಾಕ್ಷ ಅವರ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು.

ಚಿತ್ರದುರ್ಗ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ; ಶಾಸಕಿ ದಿಢೀರ್ ಭೇಟಿಚಿತ್ರದುರ್ಗ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ; ಶಾಸಕಿ ದಿಢೀರ್ ಭೇಟಿ

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿಗೆ ಸೇರಿದ ವ್ಯಾಕ್ಸಿನ್ ಅನ್ನು ಚಿತ್ರದುರ್ಗದಲ್ಲಿ ಸಂಗ್ರಹಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ನಾಲ್ಕು ಜಿಲ್ಲೆಗಳಿಗೆ ವ್ಯಾಕ್ಸಿನ್ ರವಾನೆ ಮಾಡಲಾಗುತ್ತದೆ.

Arrival of Corona Vaccine To Chitradurga: Welcome From District Collector

ರೀಜನಲ್ ವ್ಯಾಕ್ಸಿನ್ ಸ್ಟೋರ್ ನಲ್ಲಿ ಕೊರೊನಾ ಲಸಿಕೆ ಸಂಗ್ರಹಿಸಲಾಗಿದೆ. ವ್ಯಾಕ್ಸಿನ್ ವಾಹನಕ್ಕೆ ಪೂಜೆ ಸಲ್ಲಿಸಿ ಲಸಿಕೆಯನ್ನು ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ಬರಮಾಡಿಕೊಂಡರು. ಡಿಹೆಚ್ಓ ಕಚೇರಿಯ ಆಂಜನೇಯ ದೇಗುಲಕ್ಕೆ ಪೂಜೆ, ಆರತಿ ಮಾಡಲಾಯಿತು.

Arrival of Corona Vaccine To Chitradurga: Welcome From District Collector

79,500 ಡೋಸ್ ವ್ಯಾಕ್ಸಿನ್ ಅನ್ನು ವಾಹನ ಹೊತ್ತು ತಂದಿದ್ದು, ಜನವರಿ 16ರಂದು ಹೆಲ್ತ್ ವಾರಿಯರ್ಸ್ ಗೆ ವ್ಯಾಕ್ಸಿನ್ ವಿತರಿಸಲು ಅರೋಗ್ಯ ಇಲಾಖೆ ಸಜ್ಜಾಗಿದೆ. ವ್ಯಾಕ್ಸಿನ್ ಸೆಂಟರ್ ನಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಈಗಾಗಲೇ ಬೆಂಗಳೂರು ಹಾಗೂ ಬೆಳಗಾವಿ ವಿಭಾಗಕ್ಕೂ ಬುಧವಾರ ಕೊರೊನಾ ಲಸಿಕೆ ಆಗಮಿಸಿವೆ. ಇದೇ ಜನವರಿ ೧೬ ರಿಂದ ರಾಜ್ಯ ಹಾಗೂ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆಗೆ ಚಾಲನೆ ಸಿಗಲಿದೆ. ಇಂದಿನಿಂದ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಕೊರೊನಾ ಲಸಿಕೆ ಡೋಸ್ ಗಳು ತಲುಪಲಿವೆ.

English summary
The coronavirus vaccination arrived at the office of the Chitradurga District Health and Family Welfare Department and was welcomed in the presence of District Collector Kavitha, DHO Dr. Palaksha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X