ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ ಪಿಡಿಒ ವಿರುದ್ಧ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 28: 14ನೇ ಹಣಕಾಸು ಯೋಜನೆಯಡಿಯಲ್ಲಿ ಬರುವ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಯುವಕರು ಧರಣಿ ನೆಡೆಸುತ್ತಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Recommended Video

Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮ ಪಂಚಾಯತಿ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಹಣ ಬಳಕೆ ಮಾಡದೆ ಹಣವನ್ನು ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಯುವಕರು ಧರಣಿ ಕುಳಿತಿದ್ದಾರೆ.

ಮಗ ಮಾಡಿದ ತಪ್ಪಿಗೆ, ತಂದೆಗೆ ಥಳಿಸಿದ ಹಿರಿಯೂರು ಗ್ರಾಮಾಂತರ ಪಿಎಸ್ಐಮಗ ಮಾಡಿದ ತಪ್ಪಿಗೆ, ತಂದೆಗೆ ಥಳಿಸಿದ ಹಿರಿಯೂರು ಗ್ರಾಮಾಂತರ ಪಿಎಸ್ಐ

ಬೋಚಾಪುರ ಗ್ರಾಮದ ಸರ್ವೇ ನಂಬರ್ 05 ರಲ್ಲಿ ಬರುವ ಗೋಮಾಳದ ಖಾಲಿ ನಿವೇಶಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು, ಕೆಲವು ಪ್ರಭಾವಿ ವ್ಯಕ್ತಿಗಳಿಗೆ ನಾಲ್ಕೈದು ಖಾಲಿ ನಿವೇಶಗಳನ್ನು ಅಕ್ರಮವಾಗಿ ಮಾಡಿ ಕೊಟ್ಟಿದ್ದಾರೆ. ಹಾಗಾಗಿ 2010 ರಿಂದ ಇಲ್ಲಿಯವರೆಗೆ ಹಂಚಿಕೆಯಾಗಿರುವ ನಿವೇಶನಗಳು, ಪ್ರಸ್ತುತ ಉಳಿದಿರುವ ನಿವೇಶನಗಳ ದಾಖಲೆಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು. ಆದರೆ ಪಿಡಿಒ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಸ್ಪಂದಿಸುತ್ತಿಲ್ಲ ಎಂದು ಯುವಕರು ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿದರು.

Chitradurga: Allegation Of Grant Misuse Against Gram Panchayat PDO

2019-20 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ಸುಮಾರು 49 ಲಕ್ಷ ರೂ. ವೆಚ್ಚದ ಕ್ರೀಯಾ ಯೋಜನೆ ತಯಾರಿಸಿದ್ದು, ಅದರಲ್ಲಿರುವಂತೆ ಕಾಮಗಾರಿಗಳು ನಡೆದಿಲ್ಲ. ಪ್ರಸ್ತುತ ಕೇವಲ ಆ ಯೋಜನೆಯಲ್ಲಿ 3 ಸಾವಿರ ಹಣ ಮಾತ್ರ ಉಳಿದಿದೆ. ಅಂದರೆ ಎಸ್ಟಿಮೇಟ್, ಎಂಬಿ ರೆಕಾರ್ಡ್ ಇಲ್ಲದೇ ಹಣ ದುರುಪಯೋಗ ಆಗಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಅದರ ವಿವರ ಕೊಡುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಚಿತ್ರದುರ್ಗದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪಚಿತ್ರದುರ್ಗದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ

ಗ್ರಾಮಗಳ ಅಭಿವೃದ್ಧಿಗಾಗಿ ಬಂದಿದ್ದ ಹಣವನ್ನು ನುಂಗಿದ್ದು, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಆದ್ದರಿಂದ ಪಿಡಿಒ ನಡೆಸಿರುವ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಯುವಕರು ಒತ್ತಾಯಿಸಿದ್ದಾರೆ. ಈ ವಿಷಯ ತಿಳಿದ ತಾಲೂಕು ಪಂಚಾಯತ್ ಇಒ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯುವಕರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಯುವಕರು ಧರಣಿಯಿಂದ ಹಿಂದೆ ಸರಿದರು.

Chitradurga: Allegation Of Grant Misuse Against Gram Panchayat PDO

ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ಟಿ.ಈರಣ್ಣ, ಸಿ.ಪ್ರಸಾದ್, ಟಿ.ಕಾರ್ತಿಕ್, ಆರ್.ತುಳಸಿದಾಸ್, ಟಿ.ಕುಮಾರ್, ಡಿ.ಗೋವಿಂದರಾಜು, ಜಿ.ಮಂಜುನಾಥ್, ದಾದಾಪೀರ್, ಕೆ.ಗಿರೀಶ್, ಎಂ.ಮೋಹನ್ ಇತರರಿದ್ದರು.

English summary
The incident occurred in Chitradurga district, where a youth is protesting against the Panchayati Development Officer (PDO) for alleged misappropriation of funds under the 14th financial plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X