ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಶಿಷ್ಟ ಕಲ್ಯಾಣ ವರ್ಗ ಮತ್ತು ವಾಲ್ಮಿಕಿ ನಿಗಮದಲ್ಲಿ 25-30 ಕೋಟಿ‌ ಅವ್ಯವಹಾರ ಆರೋಪ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ : ಪರಿಶಿಷ್ಟ ಕಲ್ಯಾಣ ವರ್ಗ ಮತ್ತು ವಾಲ್ಮಿಕಿ ನಿಗಮದಲ್ಲಿ ಸುಮಾರು 30 ಕೋಟಿ ಹಗರಣವಾಗಿದೆ ಎಂದು ಚಿತ್ರನಾಯಕನ ವೇದಿಕೆ ಅಧ್ಯಕ್ಷರಾದ ಪ್ರಶಾಂತ್ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ‌ಮೂರು ಕೋಟಿ‌ ವಿಶೇಷ ಅನುದಾನ ತಾಲೂಕಿನ ಅಭಿವೃದ್ದಿಗೆ ಬಳಕೆಯಾಗಬೇಕಿತ್ತು, ಈ ವಿಶೇಷ ಅನುದಾನದಲ್ಲಿ‌ 57ಜನರಿಗೆ ಸೌಲಭ್ಯ ಸಿಗಬೇಕಿತ್ತು. ಆದರೆ 37 ಜನರಿಗೆ ಮಾತ್ರ ಸಿಕ್ಕಿದೆ. ಅದೂ ಸೌಲಭ್ಯ ಪಡೆದುಕೊಂಡವರು ಕೂಡ ಅರ್ಹ ಫಲಾನುಭವಿಗಳಲ್ಲ, ಇಲಾಖೆಯಲ್ಲಿ‌ ಕೆಲಸ ಮಾಡುತ್ತಿರುವವರೆ ಅವರ ಸಂಬಂಧಿಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ನಕಲಿ‌ ಗೊಬ್ಬರ ಮಾರಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ ರೈತರುನಕಲಿ‌ ಗೊಬ್ಬರ ಮಾರಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ ರೈತರು

ಶ್ರೀರಾಮುಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮೂರು ಕೋಟಿ‌ ಅನುದಾನವನ್ನು ಕೋವಿಡ್ ಗಾಗಿ ತರಲಾಗಿತ್ತು, ಅದರ ಹಂಚಿಕೆಯಲ್ಲೂ ತಾರತಮ್ಯ ಮಾಡಿದ ಹಗರಣವಾಗಿದೆ , ಅದು ಈಗಾಗಲೇ ಪುರಾವೆಗಳು ಸಿಕ್ಕಿವೆ. ಇದರ ಬಗ್ಗೆಯೂ ತಿಳಿದ್ದಿದ್ದರು ಕೂಡ ಯಾರೂ ಚಕಾರ ಎತ್ತುತ್ತಿಲ್ಲ. ಇನ್ನು ಪರಿಶಿಷ್ಟ ವರ್ಗದ ಬಡವರಿಗೆ ಸ್ವಯಂ ಉದ್ಯೋಗ ಮಾಡಲು ಐರಾವತ ಯೋಜನೆಯಡಿಯಲ್ಲಿ 74 ವಾಹನಗಳು ಬಂದಿದ್ದು, ಕೇವಲ ಮೊಳಕಾಲ್ಮೂರಿಗೆ 70ವಾಹನಗಳನ್ನು ಹಂಚಿದ್ದಾರೆ. ಉಳಿದ‌ ನಾಲ್ಕು ಮಾತ್ರ ಜಿಲ್ಲೆಯ ಕೆಲ‌ ತಾಲೂಕುಗಳಿಗೆ ನೀಡಿದ್ದಾರೆ. ಆದರೆ ಅವರು ನೀಡಿರುವ ಫಲಾನುಭವಿಗಳ್ಯಾರು ಕೂಡ ಅರ್ಹರಾಗಿಲ್ಲ, ಇಲ್ಲಿಯೂ ಕೂಡ ಹಗರಣವಾಗಿದೆ. ಇದೆಲ್ಲದಕ್ಕೂ ನೇರ ಹೊಣೆಗಾರರು ಸಚಿವ ಶ್ರೀರಾಮುಲು ಮತ್ತು ಅಪರ ಅಪ್ತ ಸಾಹಾಯಕರಾದ ಪಾಪೇಶ್ ನಾಯ್ಕ್ ಮತ್ತು ಹನುಮಂತರಾಯಪ್ಪ ಎಂದು ಆರೋಪಿಸಿದರು.

Allegation of 25-30 crores scam in Scheduled Caste Welfare and Valmiki Corporation

ಇದಕ್ಕೆ ಸಚಿವ ಶ್ರೀರಾಮುಲು ಉತ್ತರ ನೀಡಬೇಕು, ನಮ್ಮ ಸಮೂದಾಯದ ಅಗ್ರಗಣ್ಯ ನಾಯಕ‌ ಶ್ರೀರಾಮುಲು ನಾವು ಇದನ್ನು ಒಪ್ಪುತ್ತೇವೆ. ಆದರೆ ಅದೇ ಸಮೂದಾಯದ ಕಟ್ಟ ಕಡೆಯ ಜನರ ಹಸಿವ‌ನ್ನು ಕಿತ್ತು ತಿನ್ನುತ್ತಿದ್ದಾರೆ.‌ ಇದನ್ನು ನಾವು ಹೇಗೆ ಸಹಿಸುವುದು ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಶ್ರೀರಾಮುಲು ಮತ್ತು ಅವರ ಪಿಎಗಳು ಉತ್ತರ ಕೊಡಬೇಕು, ಹೆಚ್ಚಿನ ತನಿಖೆ‌ ಆಗಬೇಕು, ನಾವು ಇದರ ಮೇಲೆ ಲೋಕಾಯುಕ್ತಕ್ಕೆ‌ ದೂರು‌‌ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ಟಿಎಸ್ಪಿ ಅನುದಾನವನ್ನು ಮೊಳಕಾಲ್ಮೂರಿನ ಗಢಿ‌ಭಾಗದಲ್ಲಿ ಹಂಚಿಕೊಂಡಿದ್ದು, ಪಿಆರ್ ಇಡಿ ಮತ್ತು ಪಿಡಬ್ಲೂ ಡಿ ಇಲಾಖೆ ಅಡಿಯಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗಿದೆ.‌ ಆದರೆ ಹಿಂದೆ ಆಗಿರುವ ಕಾಮಗಾರಿಗೆ ತೇಪೆ ಹಾಕಲಾಗಿದೆ. ಇದರಲ್ಲಿಯೂ ಕೂಡ ಬೋಗಸ್ ಆಗಿರುವುದು ಕಂಡು ‌ಬಂದಿದೆ. ಇನ್ನು ಮೊಳಕಾಲ್ಮೂರು ಕ್ಷೇತ್ರದ ಚಳ್ಳಕೆರೆ ಭಾಗದ ಗ್ರಾಮಗಳಲ್ಲಿ‌ ನಡೆದಿರುವ ಕಾಮಗಾರಿಗಳಲ್ಲಿ ಕೂಡ ಕಳಪೆಯಾಗಿದ್ದು, ಅದನ್ನು ಕೂಡ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Recommended Video

Dinesh Karthik ಭಾರತ ಕಂಡ ಶ್ರೇಷ್ಠ 360° ಆಟಗಾರ | *Cricket | OneIndia Kannada

English summary
Prashanth, president of Chitranayaka Vedike, has alleged that there is a scam of around 30 crores in Scheduled Welfare Category and Valmiki Corporation in Chitradurga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X