ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: 6 ತಿಂಗಳ ನಂತರ ತೋಪಿನ ಗೊಲ್ಲಳಮ್ಮನ ದೇವಸ್ಥಾನ ಬಾಗಿಲು ತೆರೆದಿದೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 20: ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ದೇವಸ್ಥಾನದ ಪೂಜೆ ವಿಚಾರದಲ್ಲಿ ಆರು ತಿಂಗಳ ಹಿಂದೆ ಗಲಾಟೆ ನಡೆದಿದ್ದು, ಎರಡು ಗುಂಪಿನವರು ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ. ಗೊಲ್ಲಹಳ್ಳಿ ಗ್ರಾಮದ ನಡೆದಿತ್ತು.

ಈ ಎರಡು ಗುಂಪಿನ ಗಲಾಟೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಪೂಜಾ ಕಾರ್ಯಕ್ರಮ ನಡೆಯಲು ಅನುಮತಿ ನೀಡಿದೆ. ಅಂದು ಬಾಗಿಲು ಹಾಕಿದ ದೇವಸ್ಥಾನ, ಸುಮಾರು 6 ತಿಂಗಳ ನಂತರ ತೋಪಿನ ಗೊಲ್ಲಳಮ್ಮನ ದೇವಸ್ಥಾನದ ಪೂಜಾರಿಕೆಯ ಕುಟುಂಬಸ್ಥರು, ಗ್ರಾಮಸ್ಥರ ಸಂಧಾನದೊಂದಿಗೆ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.

ಈ ದೇವಸ್ಥಾನ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿ ಇದೆ. ದೇವಿಗೆ ಪೂಜೆ, ಪುನಸ್ಕಾರ ಮಾಡಲು ಅನುಮತಿ ನೀಡಲಾಗಿದೆ. ರಂಗಪ್ಪರನ್ನು ಅರ್ಚಕನನ್ನಾಗಿ ನೇಮಿಸಲಾಗಿದೆ. ದೇವಸ್ಥಾನದ ಯಜಮಾನ ಸಣ್ಣ ರಂಗಪ್ಪ ಎಂಬುವರಿಗೆ ದೇವಸ್ಥಾನ ಉಸ್ತುವಾರಿ ನೋಡಿಕೊಳ್ಳಲು ಕೊಡಲಾಗಿದೆ. ನ್ಯಾಯಾಲಯದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯೂರು ತಹಶೀಲ್ದಾರ ಶಿವಕುಮಾರ್ ತಿಳಿಸಿದರು. ಈ ವೇಳೆ ವೃತ ನಿರೀಕ್ಷಕ ರಾಘವೇಂದ್ರ, ಪಿಎಸ್ಐ ಪರುಶುರಾಮ. ಎನ್. ಲಮಾಣಿ, ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ದೇವಿಯ ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಪೂಜಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳ ಭಾಗವಹಿಸಿದ್ದರು.

Chitradurga: After 6 Months Topina Gollalamma Temple Door Opened


ಭಕ್ತಾದಿಗಳ ಒತ್ತಾಯ
ತೋಪಿನ ಗೊಲ್ಲಳಮ್ಮನ ದೇವಿಯ ಸನ್ನಿಧಿಯ ಬಾಗಿಲು ಮುಚ್ಚಿದ್ದರಿಂದ ಪ್ರಕರಣವನ್ನು ಸುಖಾಂತ್ಯಗೊಳಿಸಿ, ದೇವಸ್ಥಾನ ಬಾಗಿಲು ತೆರೆಯುವಂತೆ ಭಕ್ತಾದಿಗಳು ಒತ್ತಾಯಿಸಿದ್ದರು. ದೇವಸ್ಥಾನದ ಬಾಗಿಲು ಹಾಕಿದ ನಂತರ ಪೂಜೆ, ಪುನಸ್ಕಾರ ನಡೆಯುತ್ತಿರಲಿಲ್ಲ. ದೂರದಿಂದ ಬಂದ ಭಕ್ತಾದಿಗಳು ಬಾಗಿಲು ಮುಂದೆಯೇ ಪೂಜೆ ಮುಗಿಸಿ, ದೇವಿಯ ದರ್ಶನ ಪಡೆಯದೇ ವಾಪಸ್ ಆಗುತ್ತಿದ್ದರು. ಬಾಗಿಲು ತೆರೆಯಲು ಒತ್ತಾಯಿಸಿದ್ದರು. ಇದೀಗ ದೇವಸ್ಥಾನದ ಬಾಗಿಲು ತೆರೆದಿದ್ದು, ದೇವಿಯು ಅಪಾರ ಭಕ್ತರನ್ನು ಹೊಂದಿರುವುದರಿಂದ ನಾಳೆ ಅಂದರೆ ಮಂಗಳವಾರ ದೇವಿಯ ವಾರ ಆಗಿರುವುದರಿಂದ ಸಾಕಷ್ಟು ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆಯುವ ಸಾಧ್ಯತೆ ಇದೆ.

ಘಟನೆ ವಿವರ:
ದೇವರಿಗೆ ಪೂಜೆ ಮಾಡುವ ವಿಚಾರದಲ್ಲಿ ಎರಡು ಎರಡು ಗುಂಪುಗಳ ನಡುವೆ ಗೊಲ್ಲಳಮ್ಮನ ಜಾತ್ರೆ ಸಂದರ್ಭದಲ್ಲಿ ಮಾರ್ಚ್ 7ರಂದು ದೊಡ್ಡ ಗಲಾಟೆ ನಡೆದಿತ್ತು. ಈ ಗಲಾಟೆ ಪ್ರಕರಣ ಅಬ್ಬಿನಹೊಳೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮಾರ್ಚ್ 7ರಂದು ದೇವಸ್ಥಾನ ಬಾಗಿಲು ಹಾಕಲಾಗಿತ್ತು. ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಾಗಿ, ಜೈಲು ಸೇರಿದ್ದರು.

Chitradurga: After 6 Months Topina Gollalamma Temple Door Opened

ಅತ್ಯಾಚಾರ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹ
ಮಾತು ಬಾರದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ನಾಗರಾಜನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ DEAF ಸಂಘದವರು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕಿವುಡ ಮತ್ತು ಮೂಕ ಮಹಿಳೆಯರಿಗೆ ರಕ್ಷಣೆ ನೀಡಲು ಒತ್ತಾಯಿಸಿದರು.

Recommended Video

ಅಧಿಕಾರ ತ್ಯಜಿಸಿದ ಭಾಸ್ಕರ್ ರಾವ್ | Oneindia Kannada
Chitradurga: After 6 Months Topina Gollalamma Temple Door Opened

ಘಟನೆ ವಿವರ:
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತುಪ್ಪದಳ್ಳಿ ಲಂಬಾಣಿ ಹಟ್ಟಿಯ ಮಾತು ಬಾರದ ಮಹಿಳೆಯೊಬ್ಬಳು ದಾವಣಗೆರೆಯ ತನ್ನ ಅಣ್ಣನ ಮನೆಗೆ ಹೋಗಿ ರಾತ್ರಿ ಕೊನೆಯ ಬಸ್ ಹತ್ತಿಕೊಂಡು ತನ್ನ ಊರಾದ ಲಂಬಾಣಿ ಹಟ್ಟಿಗೆ ಹಿಂತಿರುಗುತ್ತಿದ್ದಳು. ನಾಗರಾಜ ಎಂಬ ಆರೋಪಿಯು ಸಹ ಕಡೂರಿನಿಂದ ತುಪ್ಪದಹಳ್ಳಿಗೆ ಅದೇ ಸಮಯದಲ್ಲಿ ಬಂದಿದ್ದನು. ಮಹಿಳೆ ಒಬ್ಬಳೇ ಇರುವುದನ್ನು ನೋಡಿ ನಾಗರಾಜ ಎಂಬುವವನು ಮಹಿಳೆಯನ್ನು ಅಡಿಕೆ ತೋಟಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಕಳೆದ ಒಂದು ವಾರದ ಹಿಂದೆ ನಡೆದಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈತನಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

English summary
Six months later Topina Gollalamma Temple in T. Gollahalli village of Hiriyur Taluk in Chitradurga district the door has been opened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X