ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಭೂಸ್ವಾಧೀನ ಅಧಿಕಾರಿಗಳು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 14: ಮಹಿಳೆಯೊಬ್ಬರಿಂದ 6 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಭೂಸ್ವಾಧೀನ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.

ಮಹಿಳೆಯ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಬಸವರಾಜ್. ಆರ್. ಮಗದುಮ್ ಹಾಗೂ ಪೊಲೀಸ್ ನಿರೀಕ್ಷಕರುಗಳಾದ ಪ್ರವೀಣ್ ಕುಮಾರ್, ಹಸನ್ ಸಾಬ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಭೂಸ್ವಾಧೀನ ಕಚೇರಿ ಹಾಗೂ ಅಧಿಕಾರಿ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಹಿರಿಯೂರು ಭೂಸ್ವಾಧೀನ ವಿಶೇಷ ಅಧಿಕಾರಿಗಳಾದ ವೀರೇಶ್ ಕುಮಾರ್, ಮ್ಯಾನೇಜರ್ ಮೋಹನ್ ಕುಮಾರ್ ಹಾಗೂ ಕಾರು ಚಾಲಕ ಮನ್ಸೂರ್ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.

Chitradurga: ACB Trap Hiriyur Land Acquisition Officers While Accepting Bribe

ಬೀದರ್‌ನಿಂದ ಹಿರಿಯೂರು ಮೂಲಕ ಶ್ರೀರಂಗಪಟ್ಟಣ ಹಾದು ಹೋಗುವ ಎನ್‌ಎಚ್- 150ಎ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಿರಿಯೂರು ನಗರದ ವಿಎಂಪಿ ಮಹಲ್ ಹೋಟೆಲ್ ಮುಂಭಾಗದ ದೂರು ನೀಡಿರುವ ಮಹಿಳೆಯ ಜಮೀನು ಇದೆ. ಇವರ ಜಮೀನನ್ನು ರಸ್ತೆಗೆ ಭೂಸ್ವಾಧೀನ ಪಡಿಸಿಕೊಂಡು ಜಮೀನಿನ ಪರಿಹಾರ ಹಣ ನೀಡುವುದಕ್ಕೆ 9 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಂತಿಮವಾಗಿ ಕಾರು ಚಾಲಕನ ಮಾತುಕತೆಯ ಮೂಲಕ 6 ಲಕ್ಷ ರೂಪಾಯಿ ಲಂಚ ನೀಡಲು ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಸಂಜೆ 7.30 ಸಮಯದಲ್ಲಿ ಮಹಿಳೆಯಿಂದ ಕಾರು ಚಾಲಕ ಹಣ ಪಡೆದು ಮ್ಯಾನೇಜರ್ ಮೋಹನ್ ಕುಮಾರ್‌ಗೆ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಸಮುದಾಯ ಭವನವನ್ನೇ ವಾಸದ ಮನೆಯನ್ನಾಗಿಸಿಕೊಂಡ ಬಿಜೆಪಿ ಮುಖಂಡೆ
ಸರ್ಕಾರದಿಂದ ಬಡವರಿಗಾಗಿ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, ಈ ಸಮುದಾಯ ಭವನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಬಿಜೆಪಿ ಪಕ್ಷದ ಮಹಿಳಾ ಮುಖಂಡೆಯೊಬ್ಬಳು ಅನಧಿಕೃತವಾಗಿ ಗೃಹಪ್ರವೇಶ ಮಾಡಿ, ವಾಸದ ಮನೆಯನ್ನಾಗಿ ಬಳಸಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

Chitradurga: ACB Trap Hiriyur Land Acquisition Officers While Accepting Bribe

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರ ಗ್ರಾಮದಲ್ಲಿ ಅಲೆಮಾರಿ ಹಾಗೂ ಅಲೆಮಾರಿ ಜನಾಂಗದವರಿಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ರಾಜಕೀಯ ಕೈವಾಡದಿಂದ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಹೊಳಲ್ಕೆರೆ ತಾಲ್ಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಮಹಿಳಾ ಮುಖಂಡೆ ರೂಪ ಎನ್ನುವವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಭವನವನ್ನೇ ಮನೆಯನ್ನಾಗಿ ಮಾಡಿಕೊಂಡು ವಾಸಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

2017-18ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಅಲೆಮಾರಿ ಹಾಗೂ ಅಲೆಮಾರಿ ಜನಾಂಗದ ಅಲೆಮಾರಿ ಹೇಳವ ವೇದಿಕೆ ಸಮುದಾಯ ಭವನಕ್ಕೆ 15 ಲಕ್ಷ ರೂಪಾಯಿ ಖರ್ಚು ಮಾಡಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ.

ಕಾಮಗಾರಿಯ ಕಟ್ಟಡ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ 7.50 ಲಕ್ಷ ಬಿಡುಗಡೆ ಮಾಡಿದ್ದಾರೆ. ಈ ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ ಮೊದಲ ಕಂತಿನಲ್ಲಿ ಸಂಸ್ಥೆಯವರಿಗೆ 3.75 ಲಕ್ಷ ಬಿಡುಗಡೆ ಮಾಡಿದ್ದು, ಉಳಿದ 3.75 ಅನುದಾನವನ್ನು ಸದರಿ ಕಾಮಗಾರಿ ನಿರ್ಮಾಣಕ್ಕಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ.

Chitradurga: ACB Trap Hiriyur Land Acquisition Officers While Accepting Bribe

ಕಾಮಗಾರಿ ಪೂರ್ಣಗೊಂಡು ಸುಮಾರು 15 ತಿಂಗಳು ಕಳೆದಿದ್ದು, ಒಂದು ವರ್ಷದಿಂದ ಸಮುದಾಯ ಭವನದಲ್ಲಿ ರೂಪ ವಾಸವಾಗಿದ್ದಾರೆ. ಫೋಟೋದಲ್ಲಿ ಮನೆಯ ಬಾಗಿಲಿನ ಮುಂಭಾಗದಲ್ಲಿ ಸೈಕಲ್, ಚಪ್ಪಲಿಗಳು, ಪಾತ್ರೆ ತೊಳೆಯುವ ಜಾಗದಲ್ಲಿ ಪಾತ್ರೆ, ಬಾಗಿಲಿಗೆ ತೋರಣ ಹಾಗೂ ಮನೆಯ ಮೇಲಿನ ಭಾಗದಲ್ಲಿ ಟಿವಿಯ ಡಿಶ್ ಬುಟ್ಟಿ ಗಮನಿಸಬಹುದಾಗಿದೆ.

ಏನೇ ಆಗಲಿ ಬಡವರಿಗೆ ನಿರ್ಮಿಸಿರುವ ಸಮುದಾಯ ಭವನವನ್ನೇ ಅನಧಿಕೃತವಾಗಿ ಬಳಸಿಕೊಂಡಿರುವುದು ಎಷ್ಟು ಸರಿ? ಬಿಜೆಪಿ ಶಾಸಕ ಎಂ. ಚಂದ್ರಪ್ಪ ಗಮನಕ್ಕೆ ಬಂದಿಲ್ವಾ? ಒಂದು ವೇಳೆ ಶಾಸಕರಿಗೆ ಗೊತ್ತಿದ್ದರೂ ತನ್ನ ಪಕ್ಷದ ಮುಖಂಡೆ ಎಂದು ಅಸಡ್ಡೆ ತೋರಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡತೊಡಗಿದೆ.

Recommended Video

ಹಸರಂಗನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ ವಿರಾಟ್ ! | Oneindia Kannada

ಸಮುದಾಯ ಭವನದೊಳಗೆ ಅನಧಿಕೃತವಾಗಿ ವಾಸಮಾಡುತ್ತಿರುವ ಬಿಜೆಪಿ ಮುಖಂಡೆ ರೂಪ ಮೇಲೆ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬ ಯಕ್ಷ ಪ್ರಶ್ನೆಯಾಗಿದೆ.

English summary
ACB officials have attacked on Land Acquisition Officers While Accepting Bribe at Hiriyuru Of Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X