ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಎಸಿಬಿ ದಾಳಿ ಇಬ್ಬರು ಅರೆಸ್ಟ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 09: ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಚಿತ್ರದುರ್ಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಮ್.ಪಿ ರಾಯಚೂರ್, ಸಹಾಯಕ ಇಂಜಿನಿಯರ್ ಎಂ.ಬಿ.ರವಿ ಅವರನ್ನು ಹಣ ಪಡೆಯುತ್ತಿರುವ ವೇಳೆ ದಾಳಿ ನಡೆಸಿ ಬಂಧಿಸಿ, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದ ಪಿ.ಜಿ ಮಂಜುನಾಥಾಚಾರಿ ಮಠದ ಅವರ ಕುರುಬರಹಟ್ಟಿ ವ್ಯಾಪ್ತಿಗೆ ಸೇರಿದ ಮಲ್ಲನಕಟ್ಟೆ ಸರ್ವೇ ನಂಬರ್ 24/4 ರಲ್ಲಿ 1 ಎಕರೆ 6 ಗುಂಟೆಯಲ್ಲಿ ವಸತಿ ವಿನ್ಯಾಸಗೊಳಿಸಿ, ಅಂದಾಜು ಪಟ್ಟಿ ತಯಾರಿಸಲು 30,000 ರೂ, ಲಂಚ ನೀಡುವಂತೆ ಕೇಳಿದ್ದರು.

ACB attacks in Chitradurga, Two Officers Arrest

ಈ ಹಣವನ್ನು ಜನವರಿ 8 ರಂದು ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಲ್ಲಿ ಎರಡನೇ ಆರೋಪಿ ಎಂ.ಬಿ.ರವಿಯವರಿಗೆ ಎಮ್.ಪಿ ರಾಯಚೂರ್ ಅವರು 10,000 ರೂ. ಕೊಟ್ಟಿದ್ದರು.

ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮತ ಹಾಕದೆ ದ್ರೋಹ: ಮಾಜಿ ಸಂಸದ ಚಂದ್ರಪ್ಪಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮತ ಹಾಕದೆ ದ್ರೋಹ: ಮಾಜಿ ಸಂಸದ ಚಂದ್ರಪ್ಪ

ಎಸಿಬಿ ಡಿವೈಎಸ್ ಪಿ ನರಸಿಂಹ ವಿ. ತಾಮ್ರ ಧ್ವಜ ಹಾಗೂ ಎಸಿಬಿ ಪೊಲೀಸ್ ನಿರೀಕ್ಷಕ ಪ್ರಹ್ಲಾದ್ ಆರ್. ಚನ್ನಗಿರಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಲಾಗಿದೆ.

English summary
Anti Corruption Bureau has attacked the Karnataka City Water Supply and Drainage Board In Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X