• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ಸಾವು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 15: ಆಂಬ್ಯುಲೆನ್ಸ್ ಮತ್ತು ಸ್ಕೂಟಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಹೊರವಲಯದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿ ರಾತ್ರಿ ನಡೆದಿದೆ.

ಸೋಮವಾರ ರಾತ್ರಿ ವೇಳೆ ಹೊಳಲ್ಕೆರೆ ಕಡೆಯಿಂದ ಬರುತ್ತಿದ್ದ ಸ್ಕೂಟಿಗೆ, ಚಿತ್ರದುರ್ಗ ನಗರ ಕಡೆಯಿಂದ ಹೋಗುತ್ತಿದ್ದ ಆಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಗುದ್ದಿದ ರಭಸಕ್ಕೆ ಮೂವರು ಯುವಕರ ದೇಹ ಒಂದೊಂದು ಕಡೆ ಬಿದ್ದಿವೆ. ಇದೇ ವೇಳೆ ಸ್ಕೂಟಿ ಸಂಪೂರ್ಣ ಜಖಂ ಆಗಿದೆ.

ಸಾವನ್ನಪ್ಪಿದ ಕಾಂತರಾಜ (22), ಶ್ರೀಕಾಂತ (20), ನಂಜುಂಡ (20) ವರ್ಷದ ಯುವಕರು ಎಂದು ಗುರುತಿಸಲಾಗಿದೆ. ಆಂಬ್ಯುಲೆನ್ಸ್ ಚಾಲಕ ಅರುಣ್ ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಸ್ಕೂಟಿಯಲ್ಲಿ ಮೂವರು ಯುವಕರು ತ್ರಿಬಲ್ ರೈಡಿಂಗ್ ಮೂಲಕ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತಪಟ್ಟ ಮೂರು ಜನ ಯುವಕರು ಚಿತ್ರದುರ್ಗ ನಗರದವರಾಗಿದ್ದು, ಮೂವರು ಯುವಕರು ಹೊಳಲ್ಕೆರೆಯಿಂದ ಕೆಲಸ ಮುಗಿಸಿಕೊಂಡು ಚಿತ್ರದುರ್ಗ ಕಡೆ ಬರುವಾಗ, ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ಆಂಬ್ಯುಲೆನ್ಸ್ ಹೋಗುವಾಗ ಈ ಘಟನೆ ನಡೆದಿದೆ. ಈ ಅಪಘಾತಕ್ಕೆ ಆಂಬ್ಯುಲೆನ್ಸ್ ಚಾಲಕ ಅತಿವೇಗ ಕಾರಣ ಎಂದು ತಿಳಿದು ಬಂದಿದೆ.

   ಬ್ರಾಹ್ಮಣರನ್ನು ಅಪಮಾನಿಸಿದ್ದಕ್ಕೆ ಚೇತನ್ ವಿರುದ್ಧ FIR ದಾಖಲಿಸಿದ ಪೊಲೀಸ್ | Oneindia Kannada

   ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   English summary
   Three died on the spot as a result accident between ambulance and Scooty on Holalkere Road on the outskirts of Chitradurga.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X