ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವೈರಸ್ ಗೆದ್ದ ಚಿತ್ರದುರ್ಗದ 96 ವರ್ಷಗಳ ಅಜ್ಜಿ!

|
Google Oneindia Kannada News

ಚಿತ್ರದುರ್ಗ, ಜು. 07: ಕೊರೊನಾ ವೈರಸ್‌ ಸೋಂಕು ತಗುಲಿದರೆ ಸಾವು ನಿಶ್ಚಿತ ಎಂಬಂತಹ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಕೆಲವು ವೈದ್ಯರೂ ಕೂಡ ಕೋವಿಡ್-19 ವಾರ್ಡ್‌ನಲ್ಲಿ ಕೆಲಸ ಮಾಡಲೂ ಒಪ್ಪುತ್ತಿಲ್ಲ. ಅಷ್ಟೊಂದು ಆತಂಕವನ್ನು ಆ ರೋಗ ಸೃಷ್ಟಿಸಿದೆ. ಆದರೆ ಕೋವಿಡ್ ಅಥವಾ ಕೊರೊನಾ ವೈರಸ್ ತೀರಾ ಭಯಾನಕವಾದ ರೋಗ ಅಲ್ಲ ಎಂಬುದನ್ನು ಚಿತ್ರದುರ್ಗದ ಅಜ್ಜಿಯೊಬ್ಬರು ತೋರಿಸಿದ್ದಾರೆ. ಚಿತ್ರದುರ್ಗದಲ್ಲಿ 65 ವರ್ಷಗಳ ಮಗನಿಂದ ಸೋಂಕಿಗೆ ತುತ್ತಾಗಿದ್ದ 96 ವರ್ಷಗಳ ಅಜ್ಜಿಯೊಬ್ಬರು ಇದೀಗ ಸಂಪೂರ್ಣ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Recommended Video

ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

ಆ ಮೂಲಕ ಕೊರೊನಾ ವೈರಸ್ ಸೋಂಕಿತರಲ್ಲಿ ಧೈರ್ಯವನ್ನು ಆ ಅಜ್ಜಿ ತುಂಬಿದ್ದಾರೆ. ಆತ್ಮವಿಶ್ವಾಸದಿದಂದ ಇದ್ದರೆ ಕೊರೊನಾ ವೈರಸ್‌ನ್ನು ಜಯಿಸಬಹುದು ಅಜ್ಜಿ ತೋರಿಸಿದ್ದಾರೆ. ಕೊರೊನಾ ಬಂದರೂ ಏನೂ ಆಗಲ್ಲಪ್ಪ. ಗುಣ ಆಗ್ತೀರಾ ಎಂದು ಸುತ್ತಲಿನ ಜನರಿಗೆ ಆತ್ಮವಿಶ್ವಾಸ ತುಂಬುತ್ತಲೇ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಬ್ಬಂದಿಗೆ ಸೋಂಕು; ಬೆಂಗಳೂರಿನ ಕೋವಿಡ್ ಪರೀಕ್ಷೆ ಲ್ಯಾಬ್‌ಗೆ ಬೀಗಸಿಬ್ಬಂದಿಗೆ ಸೋಂಕು; ಬೆಂಗಳೂರಿನ ಕೋವಿಡ್ ಪರೀಕ್ಷೆ ಲ್ಯಾಬ್‌ಗೆ ಬೀಗ

ಆಸ್ಪತ್ರೆಯಿಂದ ಬಿಡುಗಡೆ

ಆಸ್ಪತ್ರೆಯಿಂದ ಬಿಡುಗಡೆ

ಕೊರೊನಾ ವೈರಸ್ ದೃಢಪಟ್ಟಿದ್ದರಿಂದ ಜೂ.27 ರಂದು ಹಿರಿಯೂರು ಮೂಲದ 96 ವರ್ಷದ ಅಜ್ಜಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಚಿಕಿತ್ಸೆಯ ಬಳಿಕ ಇಳಿ ವಯಸ್ಸಿನಲ್ಲೂ ಅಜ್ಜಿ ಕೊರೊನಾ ವೈರಸ್ ವಿರುದ್ಧ ಜಯಿಸಿದ್ದಾರೆ.

ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ಪಾಲಾಕ್ಷ ಅವರು ಮಾಹಿತಿ ಕೊಟ್ಟಿದ್ದಾರೆ. 10 ದಿನಗಳ ಕಾಲ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ನಂತರ ಸೋಂಕಿನ ಯಾವುದೇ ಲಕ್ಷಣಗಳನ್ನು ಅಜ್ಜಿ ತೋರ್ಪಡಿಸಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದ ಡಾ. ಪಾಲಾಕ್ಷ ತಿಳಿಸಿದ್ದಾರೆ.

ಮಗನಿಂದ ಸೋಂಕು

ಮಗನಿಂದ ಸೋಂಕು

ಹಿರಿಯೂರಿನ 96 ವರ್ಷಗಳ ಅಜ್ಜಿಗೆ 65 ವರ್ಷಗಳ ಮಗನಿಂದ ಸೋಂಕು ತಗುಲಿತ್ತು. 65 ವರ್ಷದ ಸೋಂಕಿತ ಮಗನ ಪ್ರಾಥಮಿಕ ಸಂಪರ್ಕದಿಂದ ಅಜ್ಜಿಗೆ ಸೋಂಕು ತಗುಲಿತ್ತು. ಹಿರಿಯೂರಿನ ವೇದಾವತಿ ಬಡವಾಣೆಯ ವರ್ತಕ ಗೋವರ್ಧನ್ ಶೆಟ್ಟಿ ಅವರ ತಾಯಿ ಗೋವಿಂದಮ್ಮ ಈ ವೃದ್ಧೆ.

ಜೊತೆಗೆ ಸೊಸೆ ಹಾಗೂ ಮೊಮ್ಮಕ್ಕಳಿಗೂ ಸೋಂಕು ತಗುಲಿತ್ತು. ಸತತ ಚಿಕಿತ್ಸೆಯ ಬಳಿಕ ಇಳಿ ವಯಸ್ಸಿನಲ್ಲೂ ಕೊರೊನಾ ವೈರಸ್ ಸೋಂಕನ್ನು ಅಜ್ಜಿ ಗೆದ್ದಿದ್ದಾರೆ. ಗುಣಮುಖರಾದ ಅಜ್ಜಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಆ್ಯಂಬುಲೆನ್ಸ್‌ನಲ್ಲಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಅಜ್ಜಿಯ ಕೈಗೆ ಕ್ವಾರಂಟೈನ್ ಸೀಲು ಹಾಕಿ ಮನೆಯಲ್ಲಿಯೇ ಇರಲು ಸೂಚನೆ ಕೊಡಲಾಗಿದೆ.

ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು 'ಗಂಭೀರ' ಕೊರೊನಾ ಪ್ರಕರಣಗಳುಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು 'ಗಂಭೀರ' ಕೊರೊನಾ ಪ್ರಕರಣಗಳು

ಮೊಮ್ಮಕ್ಕಳಿಗೆ ಚಿಕಿತ್ಸೆ

ಮೊಮ್ಮಕ್ಕಳಿಗೆ ಚಿಕಿತ್ಸೆ

ಅಜ್ಜಿಯ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳಿಗೆ ಕೊರೋನಾ ಸೋಂಕು ದೃಡಪಟ್ಟಿತ್ತು. ಒಂದೇ ಮನೆಯಲ್ಲಿದ್ದ ಈ ಐದು ಜನರಿಗೆ ಕೊರೊನಾ ವೈರಸ್ ಸೋಂಕು ಬಂದಿತ್ತು. ಸದ್ಯಕ್ಕೆ ಅಜ್ಜಿ, ಅಜ್ಜಿಯ ಮಗ ಮತ್ತು ಸೊಸೆ ಗುಣಮುಖರಾಗಿದ್ದಾರೆ. ಕೋವಿಡ್‌ನ್ನು ಒಂದೇ ಕುಟುಂಬದ ಮೂವರು ಗೆದ್ದು ಬಂದಿದ್ದಾರೆ.


ಆದರೆ ಇಬ್ಬರು ಮೊಮ್ಮಕ್ಕಳಿಗೆ ಧರ್ಮಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್-19 ಸೋಂಕಿಗೆ ತುತ್ತಾಗಿದ್ದರೂ ದೇಹಾರೋಗ್ಯ ಹಾಗೂ ಆತ್ಮವಿಶ್ವಾಸದಿಂದ ಅಜ್ಜಿ ಸೋಂಕು ಗೆದ್ದಿದ್ದಾರೆ. ಜೊತೆಗೆ ಇತರ ಸೋಂಕಿತರಿಗೆ ಅಜ್ಜಿ ಸೋಂಕಿನಿಂದ ಗುಣಮುಖರಾಗಿರುವುದು ಸ್ಪೂರ್ತಿ ತಂದಿದೆ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಸೋಂಕಿಗಿಂತ ಆತಂಕವೇ

ಸೋಂಕಿಗಿಂತ ಆತಂಕವೇ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರೆಗೆ 89 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ ಈಗಾಗಲೇ 48 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದಂತೆ 41 ಜನರಿಗೆ ಚಿಕಿತ್ಸೆ ಮುಂದುವರೆದಿದೆ.

ಕೊರೊನಾ ವೈರಸ್‌ಗಿಂದ ಅದು ಸೃಷ್ಟಿಸಿರುವ ಆತಂಕದಿಂದಲೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆಂದು ತಜ್ಞರೂ ಹೇಳಿದ್ದಾರೆ. ಸೋಮಕಿನ ಬಗ್ಗೆ ವಿಪರೀತವಾದ ಆತಂಕದಿಂದಲೂ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹೀಗಾಗಿ ಯುವಕರೂ ಕೂಡ ಸಾವನ್ನಪ್ಪುವ ಸಾಧ್ಯತೆಗಳಿವೆ. ಹಾಗಾಗಿ ಸೋಂಕು ತಗುಲಿದರೂ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದರೇ ಗುಣಮುಖರಾಗುವುದು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು. ಜೊತೆಗೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸಾವಿನ ಪ್ರಮಾಣ ಕೂಡ ತೀರಾ ಕಡಿಮೆಯಿದೆ.

English summary
A 96-year-old grandmother who was infected by a 65-year-old son in Chitradurga is now in complete remission. That grandmother is full of courage in those infected with the corona virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X