• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ತಿ ಆಸೆಗಾಗಿ ಚಿಕ್ಕಪ್ಪನಿಂದಲೇ ಕೊಲೆಯಾದ 7 ವರ್ಷದ ಬಾಲಕ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮಾರ್ಚ್ 06: ಆಸ್ತಿಯ ಆಸೆಯಿಂದ ಸ್ವಂತ ಚಿಕ್ಕಪ್ಪನೇ ತನ್ನ ಅಣ್ಣನ ಮಗನಾದ ಏಳು ವರ್ಷದ ಬಾಲಕನನ್ನು ಕೊಲೆ ಮಾಡಿ ಹಳ್ಳಕ್ಕೆ ಬಿಸಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ರಂಗಸ್ವಾಮಿಯ ಪುತ್ರ ಏಳು ವರ್ಷದ ಗೋವಿಂದ್ ತನ್ನ ಸ್ವಂತ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿಯಾಗಿದ್ದಾನೆ.

ಹಿರಿಯೂರು ಪೊಲೀಸರ ಕಾರ್ಯಾಚರಣೆ: ಅಂತರಾಜ್ಯ ಕಳ್ಳರ ಬಂಧನಹಿರಿಯೂರು ಪೊಲೀಸರ ಕಾರ್ಯಾಚರಣೆ: ಅಂತರಾಜ್ಯ ಕಳ್ಳರ ಬಂಧನ

ರಂಗಸ್ವಾಮಿ ಸಹೋದರ ಚಿರಂಜೀವಿಯು ಗೋವಿಂದನಿಗೆ ಪಾರಿವಾಳ ತೋರಿಸಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಗ್ರಾಮದ ಹೊರವಲಯದ ಹಳ್ಳದಲ್ಲಿ ಬಿಸಾಕಿದ್ದಾನೆ.

ಚಿರಂಜೀವಿ ಹಾಗೂ ರಂಗಸ್ವಾಮಿಯ ತಂದೆ ಕೋಪದಲ್ಲಿ ನಿಮಗೆ ಆಸ್ತಿ ಕೊಡುವುದಿಲ್ಲ, ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದಿದ್ದರು, ಹೀಗಾಗಿ ಆಸ್ತಿ ಕೈ ತಪ್ಪುತ್ತದೆ ಎಂಬ ಭಯದಿಂದ ಅಣ್ಣನ ಮಗ ಗೋವಿಂದನನ್ನು ಕೊಲೆ ಮಾಡಿದ್ದಾನೆ ಎಂದು ಗೋವಿಂದ್ ತಂದೆ ರಂಗಸ್ವಾಮಿ ಹೇಳಿದ್ದಾನೆ.

ಬಳ್ಳಾರಿಯ ಅಂತರ್ಜಾತಿ ಪ್ರೇಮಿಗಳಿಗೆ ವಿವಾಹ ಮಾಡಿಸಿದ ಚಳ್ಳಕೆರೆ ಗ್ರಾಮಸ್ಥರುಬಳ್ಳಾರಿಯ ಅಂತರ್ಜಾತಿ ಪ್ರೇಮಿಗಳಿಗೆ ವಿವಾಹ ಮಾಡಿಸಿದ ಚಳ್ಳಕೆರೆ ಗ್ರಾಮಸ್ಥರು

ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

English summary
Chiranjeevi killed his Brothers Son seven year old boy and thrown him into a ditch this incident in Chitradurga district Bosedevarahatti village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X