ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರಿನ ಹೊಲದಲ್ಲಿ ಕೊಳೆತ ಖರ್ಬೂಜ ತಿಂದು 50 ಕುರಿಗಳ ಸಾವು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 25: ಖರ್ಬೂಜ ಹಣ್ಣು ಮತ್ತು ಅದರ ಬಳ್ಳಿ ತಿಂದು ಸುಮಾರು 50 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡದ ಗೊಲ್ಲರಹಟ್ಟಿಯಲ್ಲಿ ಇಂದು ನಡೆದಿದೆ.

ರಾಮಕೃಷ್ಣಪ್ಪ ಮತ್ತು ಸುನಿಲ್ ಎಂಬುವರಿಗೆ ಈ ಕುರಿಗಳು ಸೇರಿವೆ. ರಾಮಕೃಷ್ಣಪ್ಪ ತನ್ನ ಹೊಲದಲ್ಲಿ ಖರ್ಬೂಜ ಹಣ್ಣು ಬೆಳೆದಿದ್ದು, ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆದರೆ ಅವನ್ನು ತಿಂದ ಕುರಿಗಳು ಸಾವನ್ನಪ್ಪಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುರಿ/ಮೇಕೆ ಸಾವು ಪರಿಹಾರ ರದ್ದುಪಡಿಸದಂತೆ ಸಿಎಂಗೆ ಶಾಸಕಿ ಪತ್ರಕುರಿ/ಮೇಕೆ ಸಾವು ಪರಿಹಾರ ರದ್ದುಪಡಿಸದಂತೆ ಸಿಎಂಗೆ ಶಾಸಕಿ ಪತ್ರ

Fifty Sheeps Died By Eating Rotten Muskmelon In Hiriyuru

50 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಖರ್ಬೂಜದ ಕೊಳೆತ ಬಳ್ಳಿ ಮತ್ತು ಬೂಸ್ಟ್ ಬಂದ ಹಣ್ಣು ತಿಂದಿದ್ದರಿಂದ ಕುರಿಗಳಿಗೆ ಫುಡ್ ಪಾಯ್ಸನ್ ಆಗಿ ಸಾವನ್ನಪ್ಪಿವೆ ಎಂದು ಹಿರಿಯೂರು ಪಶು ವೈದ್ಯಾಧಿಕಾರಿ ಹನುಮಪ್ಪ ತಿಳಿಸಿದ್ದಾರೆ.

English summary
Fifty sheeps died by eating rotten muskmelon and its veins in gollarahatti of Hiriyuru in chitradurga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X