ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ವಿಷಪೂರಿತ ಮೇವು ಸೇವಿಸಿ 40ಕ್ಕೂ ಹೆಚ್ಚು ಕುರಿಗಳು ಸಾವು

|
Google Oneindia Kannada News

ಚಿತ್ರದುರ್ಗ, ನವೆಂಬರ್ 20: ವಿಷಪೂರಿತ ಮೇವು ಸೇವಿಸಿ ನಲವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸರಸ್ಪತಿಹಟ್ಟಿ, ಹೊಸಹಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಕುರಿ ಮೇಯಿಸಲು ಹೋಗಿದ್ದ ಸಂದರ್ಭ ಸಂಜೆ ವೇಳೆ ಬಿಳಿ ಜೋಳದ ಸೆಪ್ಪೆಯ ಚಿಗುರು ತಿಂದು ಕುರಿಗಳು ಸಾವನ್ನಪ್ಪಿವೆ. ತಾಲ್ಲೂಕು ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸುಮಾರು 300 ಕುರಿಗಳಲ್ಲಿ 250ಕ್ಕೂ ಹೆಚ್ಚು ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಕುರಿಗಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿವೆ. ಗ್ರಾಮದ ಚಿತ್ತಪ್ಪ ಮತ್ತು ಕೆಂಚಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ.

Chitradurga: 40 Sheeps Dies By Eating Poisonous Fodder

 ಶಿವಮೊಗ್ಗ: 36 ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂಧನ ಶಿವಮೊಗ್ಗ: 36 ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂಧನ

Recommended Video

Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada

ಕುರಿಗಳು ಸಾವನ್ನಪ್ಪಿರುವ ವಿಷಯ ತಿಳಿದ ಹಿರಿಯೂರು ತಹಶೀಲ್ದಾರ್ ಜಿ. ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿಗಳನ್ನು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕುರಿಗಾರರ ಜೊತೆ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

English summary
More than 40 sheep have died after eating poisonous fodder in hiriyur of chitradurga district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X