ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರು: ವೃದ್ಧನಿಂದ ಮತ್ತೆ ಮೂವರಿಗೆ ಕೊರೊನಾ ವೈರಸ್ ಸೋಂಕು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 29: ಚಿತ್ರದುರ್ಗ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ಇಂದು ಕೂಡಾ ಆರ್ಭಟಿಸಿದ್ದು, ಜಿಲ್ಲೆಯಲ್ಲಿ ಮತ್ತೆ 4 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ.

Recommended Video

Congress Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada

ಚಿತ್ರದುರ್ಗದ ಓರ್ವ ಆಟೋ ಡ್ರೈವರ್ ಮತ್ತು ಹಿರಿಯೂರಿನ ಸೋಂಕಿತ ಕಿರಾಣಿ ಅಂಗಡಿ ಮಾಲೀಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ಮಗ ಹಾಗೂ ಸಂಬಂಧಿಕರ ಇಬ್ಬರು ಯುವಕರು ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತನಿದ್ದ ಆಂಬುಲೆನ್ಸ್ ತಡೆದು ನಿಲ್ಲಿಸಿದ ಗ್ರಾಮಸ್ಥರುಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತನಿದ್ದ ಆಂಬುಲೆನ್ಸ್ ತಡೆದು ನಿಲ್ಲಿಸಿದ ಗ್ರಾಮಸ್ಥರು

65 ವರ್ಷದ ವೃದ್ಧನ ಸಂಪರ್ಕದಲ್ಲಿದ್ದ ಮಗ ಮತ್ತು ಸಂಬಂಧಿಕರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ನಿನ್ನೆ ಹಿರಿಯೂರು ತಾಲ್ಲೂಕಿನ ಭರಮಗಿರಿಯ ವ್ಯಕ್ತಿಯು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು.

4 New Coronavirus Infection Cases Reported In Chitradurga District

33 ವರ್ಷದ ಬಸ್ ಕಂಡಕ್ಟರ್ ಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ದೃಢಪಟ್ಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ, ತಂದೆ, ಹಾಗೂ ಸಹೋದರನನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಮತ್ತೆ 7 ಕೊರೊನಾ ವೈರಸ್ ಪ್ರಕರಣ ದೃಢಚಿತ್ರದುರ್ಗದಲ್ಲಿ ಮತ್ತೆ 7 ಕೊರೊನಾ ವೈರಸ್ ಪ್ರಕರಣ ದೃಢ

ಹಿರಿಯೂರಿನಲ್ಲಿ ಒಟ್ಟು ಸೋಂಕಿತ ಸಂಖ್ಯೆ 18 ಏರಿಕೆಯಾಗಿದ್ದು, ಇಬ್ಬರು ಗುಮುಖವಾಗಿದ್ದಾರೆ. 16 ಸಕ್ರೀಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 62 ಕ್ಕೆ ಏರಿಕೆಯಾಗಿದೆ. 43 ಸೋಂಕಿತರು ಗುಣಮುಖರಾಗಿದ್ದು, 19 ಸಕ್ರೀಯ ಪ್ರಕರಣಗಳಿವೆ.

English summary
coronavirus is still raging in Chitradurga district today, there are four coronavirus cases Detected in the district again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X