ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಕೊರೊನಾವೈರಸ್ ರಣಕೇಕೆ; ಒಂದೇ ದಿನ 20 ಸೋಂಕು ಪತ್ತೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 26: ಕೋಟೆ ನಾಡು ಚಿತ್ರದುರ್ಗದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ ಚಿತ್ರದುರ್ಗದಲ್ಲಿ 20 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 25 ವರ್ಷದ P1630 ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೆ ಸೋಂಕು ಕಾಣಿಸಿಕೊಂಡಿದ್ದು, ಚಿತ್ರದುರ್ಗಕ್ಕೆ ಉತ್ತರ ಪ್ರದೇಶದ ಕಾರ್ಮಿಕರು ಕಂಟಕವಾಗಿದ್ದಾರೆಯೇ ಅನ್ನುವ ಪ್ರಶ್ನೆ ಕಾಡುತ್ತಿದೆ.

ಮೇ 21ರಂದು P1630 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ಲಾರಿಯಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಸರಕು ಲಾರಿಯಲ್ಲಿ 58 ಮಂದಿ ಕಾರ್ಮಿಕರು ಚಳ್ಳಕೆರೆ ತಾಲೂಕಿನ ಮೂಲಕ ಪ್ರಯಾಣಿಸುತ್ತಿದ್ದರು. ಪಾವಗಡ ಪರಶುರಾಂಪುರ ನಡುವೆ ಇರುವ ನಾಗಪ್ಪನಹಳ್ಳಿ ಚಕ್ ಪೋಸ್ಟ್ ಬಳಿ ತಪಾಸಣೆ ಮಾಡಿದಾಗ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಇವರನ್ನು ಮೇ 15ರಂದು ಚಳ್ಳಕೆರೆ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ನಲ್ಲಿ ಇರಿಸಿದ್ದರು.

 ಕೋಟೆನಾಡು ಚಿತ್ರದುರ್ಗದಲ್ಲಿ 11ಕ್ಕೇರಿದ ಸೋಂಕಿತರ ಸಂಖ್ಯೆ ಕೋಟೆನಾಡು ಚಿತ್ರದುರ್ಗದಲ್ಲಿ 11ಕ್ಕೇರಿದ ಸೋಂಕಿತರ ಸಂಖ್ಯೆ

20 Laobours Tested Coronavirus Positive Today In Chitradurga

58 ಕಾರ್ಮಿಕರ ಪೈಕಿ ಇಂದು 20 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆ ಆಗಿದೆ. ಒಂದೇ ಹಾಸ್ಟೆಲ್ ನಲ್ಲಿ ಕಾರ್ಮಿಕರಿಗೆ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ 11 ಪಾಸಿಟಿವ್ ಪ್ರಕರಣಗಳಲ್ಲಿ 5 ಮಂದಿ ಗುಣಮುಖವಾಗಿದ್ದಾರೆ. ಈ 57 ಮಂದಿ ಕಾರ್ಮಿಕರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಆರೋಗ್ಯ ಇಲಾಖೆ ರವಾನಿಸಲಾಗಿದ್ದು, ಇದೀಗ 20 ಜನರಿಗೆ ಸೋಂಕು ಪತ್ತೆಯಾಗಿದೆ.

ಗ್ರೀನ್ ಝೋನ್ ನಲ್ಲಿದ್ದ ಚಿತ್ರದುರ್ಗ ಜಿಲ್ಲೆಗೆ ಹೊರರಾಜ್ಯದ ಕಾರ್ಮಿಕರು ಕಂಟಕ ತಂದಿದ್ದು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ 30 ದಾಟಿದೆ.

English summary
20 uttara pradesh based labours quarantined in challakere tested coronavirus positive today. Total 31 cases reported in chitradurga district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X