ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮ್ಮರಡಿಯಲ್ಲಿ ಮಸೀದಿಗೆ ದೇವರ ಉತ್ಸವ ಮೂರ್ತಿ ಹೊತ್ತೊಯ್ದ ಯುವಕರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್.21: ಯುವಕರು ದೇವರ ಉತ್ಸವ ಮೂರ್ತಿಯನ್ನು ಹೊತ್ತೊಯ್ದು ಮಸೀದಿ ಪ್ರವೇಶಿಸಿದ ಘಟನೆ ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ ನಡೆದಿದೆ.

ದೇವರ ಉತ್ಸವ ಮೂರ್ತಿ ಹೊತ್ತು ಮಸೀದಿ ಪ್ರವೇಶಿಸುತ್ತಿದ್ದಂತೆ ಎರಡು ಕೋಮಿನ ನಡುವೆ ಗಲಾಟೆ ಶುರುವಾಗಿದೆ. ಆದರೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಎರಡು ಕೋಮಿನ ಮುಖಂಡರ ನಡುವೆ ಸಭೆ ನಡೆಸಿ ಪೊಲೀಸರು ಸಂಧಾನ ಯಶಸ್ವಿಗೊಳಿಸಿದ್ದಾರೆ.

ಮಾತೆ ಮೇರಿಯ ಜಾಗದಲ್ಲಿ ಕೊರಗಜ್ಜನ ಮೂರ್ತಿಯಿಟ್ಟ ಕಿಡಿಗೇಡಿಗಳುಮಾತೆ ಮೇರಿಯ ಜಾಗದಲ್ಲಿ ಕೊರಗಜ್ಜನ ಮೂರ್ತಿಯಿಟ್ಟ ಕಿಡಿಗೇಡಿಗಳು

ವಿಜಯದಶಮಿ ನಂತರದ ದಿನ ಉತ್ಸವ ನಡೆಯುವ ವೇಳೆ ದುರ್ಗಾಂಬ ದೇವಿ ಪಲ್ಲಕ್ಕಿ ಹೊತ್ತ ಯುವಕರು ಮಸೀದಿ ಪ್ರವೇಶಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಹರಿಹರಪುರ ಪೊಲೀಸರ ಭೇಟಿ ನೀಡಿ ಸೂಕ್ತ ಬಂದೂಬಸ್ತ್ ಒದಗಿಸಿದ್ದಾರೆ. ಯುವಕರು ದೇವರ ಉತ್ಸವ ಮೂರ್ತಿ ಹೊತ್ತು ಮಸೀದಿ ಪ್ರವೇಶಿಸಿದ ವೀಡಿಯೋ ಸದ್ಯ ವೈರಲ್ ಆಗಿದೆ.

Young people took the idol of God and entered the mosque

ಕಳೆದ ಎರಡು ದಿನಗಳಿಂದ ಶಬರಿಮಲೆಯಲ್ಲೂ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದ್ದರೂ, ಅಯ್ಯಪ್ಪ ಭಕ್ತರು ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರುಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು

ಇನ್ನೊಂದೆಡೆ, ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತೆಯರ ಮನೆಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ (ಅ.19) ನಡೆದಿತ್ತು.

English summary
Young people took the idol of God and entered the mosque. Incident occurred in Kammaradi at Koppa Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X