ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಪಿಎಸ್ ಸಿ ಪರೀಕ್ಷೆ; ಕಡೂರಿನ ಯಶಸ್ವಿನಿಗೆ 71ನೇ rank

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 04: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ಯಶಸ್ವಿನಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 71ನೇ rank ಪಡೆದುಕೊಂಡಿದ್ದಾರೆ.

25 ವರ್ಷದ ಯಶಸ್ವಿನಿ ಈ ಬಾರಿ ನಡೆದ ಯುಪಿಎಸ್ ‍ಸಿ ಪರೀಕ್ಷೆಯಲ್ಲಿ 71ನೇ ಸ್ಥಾನ ಪಡೆದು ಜಿಲ್ಲೆಯ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಅಂಕೋಲಾ ತಾಲೂಕಿನಿಂದ ನಾಲ್ವರು ತೇರ್ಗಡೆಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಅಂಕೋಲಾ ತಾಲೂಕಿನಿಂದ ನಾಲ್ವರು ತೇರ್ಗಡೆ

ಶಿಕ್ಷಕ ವೃತ್ತಿಯಲ್ಲಿರುವ ಬಸವರಾಜಪ್ಪ ಹಾಗೂ ಇಂದಿರಾ ಎಂಬುವರ ಮಗಳಾಗಿರುವ ಯಶಸ್ವಿನಿ ಕಡೂರಿನಲ್ಲಿ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಶಿವಮೊಗ್ಗದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ.

Yashaswini From Kadur Got 71st Rank In UPSC Exam

ನಂತರ ದೆಹಲಿಯ ರವಿ ಅಂಡ್ ವಾಜೀ ಇನ್‌ ಸ್ಟಿಟ್ಯೂಟ್‌ ನಲ್ಲಿ ಕೇಂದ್ರ ಸೇವಾ ಆಯೋಗದ ಪರೀಕ್ಷೆಗೆ 9 ತಿಂಗಳು ಕೋಚಿಂಗ್ ಪಡೆದು 2018-19ರಲ್ಲಿ ಮೊದಲ ಪರೀಕ್ಷೆ ಎದುರಿಸಿ 293ನೇ rank ಪಡೆದುಕೊಂಡು ಇಂಡಿಯನ್ ಡಿಫೆನ್ಸ್ ಆಫ್ ಸ್ಟೇಟ್ ಸರ್ವಿಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ನಡುವೆ 2019ನೇ ಸಾಲಿನ ಪರೀಕ್ಷೆಯನ್ನು ಮತ್ತೊಮ್ಮೆ ಪರೀಕ್ಷೆ ಬರೆದಿದ್ದು, ಈ ಬಾರೀ 71ನೇ rank ಪಡೆದುಕೊಂಡಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

ಯಶಸ್ವಿನಿ ಅವರ ತಂದೆ ಬಸವರಾಜಪ್ಪ ಗುಬ್ಬಿಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ. ಆಕೆಯ ಕಠಿಣ ಶ್ರಮ ಹಗೂ ನಿಯಮಿತ ಗುರಿಯಿಂದಲೇ ಈ ಸಾಧನೆ ಮಾಡಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Yashaswini From Kadur Of Chikkamagaluru District Got 71st Rank In UPSC Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X