• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳ ನಿರ್ಭೀತಿಯ ಓಡಾಟ

|
Google Oneindia Kannada News

ಚಿಕ್ಕಮಗಳೂರು, ಮೇ 17: ಕೊರೊನಾ ವೈರಸ್ ಆತಂಕದಿಂದ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಓಡಾಟ ಕಡಿಮೆಯಾದ ಹಿನ್ನೆಲೆಯಲ್ಲಿ ಗ್ರಾಮಗಳ ಅಂಚಿಗೆ ಬರುತ್ತಿದ್ದ ಕಾಡಾನೆಗಳು ಹಾಗೂ ಕಾಡುಪ್ರಾಣಿಗಳು ಈಗ ಗ್ರಾಮದೊಳಕ್ಕೆ ಬರುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾನಹಳ್ಳಿಯಲ್ಲಿ ನಡೆದಿದೆ.
ಗ್ರಾಮದೊಳಗೆ ಬಂದಿರುವ ಕಾಡಾನೆಗಳ ಹಾವಳಿಯಿಂದ ಬಾನಹಳ್ಳಿಯಲ್ಲಿ ಕಾಫಿ ಮತ್ತು ಬಾಳೆ ಬೆಳೆ ಕೂಡ ನಾಶವಾಗಿದೆ. ಮೂಡಿಗೆರೆ ತಾಲ್ಲೂಕಿನ ಹತ್ತಾರು ಹಳ್ಳಿಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದಲೂ ಕೂಡ ಕಾಡಾನೆ ಹಾವಳಿ ಮಿತಿ ಮೀರಿದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಸಿ.ಟಿ ರವಿ ಚಾಲೆಂಜ್
ಕೆಲವೆಡೆ ಒಂಟಿಸಲಗದ ಕಾಟವಿದ್ದರೆ, ಇನ್ನು ಹಲವೆಡೆ ಕಾಡಾನೆಗಳ ಹಿಂಡು ಮಲೆನಾಡಿಗರ ನಿದ್ದೆಗೆಡಿಸಿದೆ. ಇತ್ತೀಚೆಗೆ ಬಾನಹಳ್ಳಿಯಲ್ಲೂ ಎರಡು ಕಾಡಾನೆಗಳು ತೋಟದಲ್ಲಿ ಓಡಾಡಿದ್ದು ಕಾಫಿ ಹಾಗೂ ಬಾಳೆ ಬೆಳೆ ನಾಶವಾಗಿದೆ.

ಕೊರೊನಾ ವೈರಸ್ ಆತಂಕದಿಂದ ದೇಶವೇ ಲಾಕ್ ಡೌನ್ ಆದ ಮೇಲೆ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಜನಸಾಮಾನ್ಯರ ಓಡಾಟ ಕಡಿಮೆಯಾಗಿತ್ತು. ಹೀಗಾಗಿ ಗ್ರಾಮಗಳ ಅಂಚಿನಲ್ಲಿ ಓಡಾಡುತ್ತಿದ್ದ ಕಾಡಾನೆಗಳು ಗ್ರಾಮಗಳ ಒಳಗೆ ಬಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಾಡುತ್ತಿವೆ.

ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತಿರುವ ಕಾಡಾನೆಗಳಿಂದ ಕಾಫಿ ತೋಟ ಕೂಡ ಹಾಳಾಗಿವೆ. ಮೂಡಿಗೆರೆಯ ಬಾನಹಳ್ಳಿ, ಭಾರತೀಬೈಲು, ಬೆಳಗೋಡ, ಗೌಡಹಳ್ಳಿ, ದೇವರಮನೆ, ಊರುಬಗೆ, ಸಾರಗೋಡು, ಕೆಂಜಿಗೆ ಸೇರಿದಂತೆ ಸುತ್ತಮುತ್ತ ಕಾಡಾನೆಗಳ ಹಾವಳಿಗೆ ಕಾಫಿನಾಡಿನ ಜನತೆ ಆತಂಕದಿಂದ ಬದುಕುವಂತಾಗಿದೆ.

English summary
wild animals are now coming into the village at Banahalli, Moodigere Taluk in the Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X