ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ಡೌನ್ ನಿಂದ ಕೊರೊನಾ ಕಂಟ್ರೋಲ್ ಮಾಡೋದು ಕನಸಿನ ಮಾತು- ಆರ್ ಅಶೋಕ್

|
Google Oneindia Kannada News

ಚಿಕ್ಕಮಗಳೂರು, ಜುಲೈ 1: ಲಾಕ್ ಡೌನ್ ಮಾಡಿ ಕಂಟ್ರೋಲ್ ಮಾಡ್ತೀವಿ ಎನ್ನುವುದು ಕನಸಿನ ಮಾತು ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಕೊರೊನಾ ವೈರಸ್‌ ಬಗ್ಗೆ ಆರ್ ಅಶೋಕ್ ಮಾತನಾಡಿದ್ದಾರೆ.

ಕೊರೊನಾ ಪ್ರಕರಣಗಳಿಗೆ ನಿಯಂತ್ರಣ ತರಲು ಆರಂಭದಲ್ಲಿ ನಾವು ಲಾಕ್ ಡೌನ್ ಮಾಡಿದ್ದೀವಿ. ಆಗ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಯ್ತು.

ಆರ್. ಅಶೋಕ ಸಭೆಯಲ್ಲಿದ್ದ ವೈದ್ಯರಿಗೆ ಕೋವಿಡ್ - 19 ಸೋಂಕುಆರ್. ಅಶೋಕ ಸಭೆಯಲ್ಲಿದ್ದ ವೈದ್ಯರಿಗೆ ಕೋವಿಡ್ - 19 ಸೋಂಕು

ಆದರೆ, ಲಾಕ್ ಡೌನ್ ರಿಲ್ಯಾಕ್ಸ್ ಆದ್ಮೇಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೆ ಈಗ ಲಾಕ್ ಡೌನ್ ಮಾಡಿ, ಓಪನ್ ಮಾಡಿದ್ರು ಹೀಗೆ ಆಗುತ್ತೆ ಎಂದು ಆರ್ ಅಶೋಕ್‌ ಹೇಳಿದ್ದಾರೆ.

We Cant Control Coronavirus Only From Lockdown Says R Ashok

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂದಿನ ಆರು ತಿಂಗಳು ಜನರ ಸೇವೆಗೆ ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚೈನ್ ಕಟ್ ಮಾಡೋಕೆ ಯೋಚನೆ ಮಾಡುತ್ತಿದ್ದೇವೆ. ಸದ್ಯ ಎಲ್ಲಾ ಭಾನುವಾರ ಲಾಕ್‌ಡೌನ್‌ಗೆ ತೀರ್ಮಾನ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಂದಹಾಗೆ, ಕರ್ನಾಟಕದಲ್ಲಿ ನಿನ್ನೆ 947 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ. ಈ ವರೆಗೂ 7918 ಜನರು ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 246ಕ್ಕೆ ಏರಿದೆ.

English summary
We can't control coronavirus only from lockdown says minister R Ashok in Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X