ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಮದ ವೇಳೆ ವಿಷ್ಣು ವಿಗ್ರಹದ ಎಡಕ್ಕೆ ಬಿದ್ದ ನಾಮ; ಬಿಎಸ್ ವೈಗೆ ಅದೃಷ್ಟವೆ?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 15: ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆ ಆಶ್ರಮದಲ್ಲಿ ದೇವರ ಹಣೆಯ ನಾಮವು ಕೆಳಗೆ ಬಿದ್ದಿದ್ದು, ಈ ರೀತಿಯ ವಿಚಿತ್ರ ಪ್ರಸಾದವನ್ನು ಶುಭವೋ -ಅಶುಭವೋ ಎಂದು ಚರ್ಚೆ ಆರಂಭಿಸಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಇದರಿಂದ ಶುಭ ಆಗುತ್ತದೆ ಎಂದು ಹಲವರು, ಅಶುಭ ಎಂದು ಮತ್ತಷ್ಟು ಮಂದಿ ಚರ್ಚೆ ನಡೆಸುತ್ತಿದ್ದಾರೆ.

ವಿಷ್ಣು ಸಹಸ್ರನಾಮದ ವೇಳೆ ಬಿ. ಎಸ್. ಯಡಿಯೂರಪ್ಪ ಅವರಿಗೆ ಪ್ರಸಾದದ ರೂಪದಲ್ಲಿ ದೇವರಿಗೆ ಹಾಕಿದ್ದ ನಾಮವು ಕೆಳಕ್ಕೆ ಬಿದ್ದಿತು. ಗುರುವಾರದಂದು ವಿನಯ ಗುರೂಜಿ ನೇತೃತ್ವದಲ್ಲಿ ‌ವಿಷ್ಣು ಸಹಸ್ರನಾಮ ಯಾಗ ನಡೆದಿತ್ತು. ಗೌರಿಗದ್ದೆ ಆಶ್ರಮದಲ್ಲಿರುವ ವಿಷ್ಣು ವಿಗ್ರಹಕ್ಕೆ ಮಂಗಳರಾತಿ ಮಾಡುವ ವೇಳೆ ದೇವರ ವಿಗ್ರಹ ಮುಖ ಮಾಡಿರುವ ಎಡಭಾಗಕ್ಕೆ ವಿಗ್ರಹದ ನಾಮ ಬಿದ್ದಿತು.

ಸಿಎಂ ತಬ್ಬಿಕೊಂಡು ಸಿಎಂ ತಬ್ಬಿಕೊಂಡು "ಎಚ್ಚರ" ಎಂದು ಪಿಸುಗುಟ್ಟಿದ ವಿನಯ್ ಗುರೂಜಿ, ಏನಿದರ ಒಳ ಅರ್ಥ?

ವಿಗ್ರಹದಿಂದ ನಾಮ ಬಿದ್ದ ಪರಿಣಾಮವಾಗಿ ಚರ್ಚೆ ಶುರುವಾಗಿತ್ತು. ಬಿಎಸ್ ವೈಗೆ ಒಳ್ಳೆಯ ಶುಕುನವೆಂದು ಕೆಲವರು, ಮತ್ತೆ ಕೆಲವರು ಅಪಶುಕನ ಎನ್ನುವ ರೀತಿಯಲ್ಲಿ ಚರ್ಚೆ ನಡೆದಿತ್ತು. ನಾಮ ಬಿದ್ದ ತಕ್ಷಣ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಬಳಿಗೆ ಬಂದ ವಿನಯ್ ಗುರೂಜಿ, ಇಬ್ಬರ ಕಿವಿಯಲ್ಲೂ ಏನೋ ಹೇಳಿ, ಮತ್ತೆ ಪೂಜೆಗೆ ತೆರಳಿದ್ದರು.

Vishnu State Prasadam; Lucky Or Unlucky To Yeddyurappa?

ಸುಭದ್ರ ಸರಕಾರಕ್ಕಾಗಿ ಯಡಿಯೂರಪ್ಪ ಅವರು ಗೌರಿಗದ್ದೆಯಲ್ಲಿ ಹೋಮ- ಹವನ ನಡೆದ್ದಾರೆ. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ, ಶೃಂಗೇರಿ ಶಾಸಕ ರಾಜೇಗೌಡ ಅವರು ಯಡಿಯೂರಪ್ಪ ಅವರ ಜತೆಗೆ ಇದ್ದರು.

English summary
CM Yeddyurappa recently performed homam in Gourigadde ashram in Chikkamagaluru. During that time Vishnu prasadam led many questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X