ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ತಬ್ಬಿಕೊಂಡು "ಎಚ್ಚರ" ಎಂದು ಪಿಸುಗುಟ್ಟಿದ ವಿನಯ್ ಗುರೂಜಿ, ಏನಿದರ ಒಳ ಅರ್ಥ?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಯಡಿಯೂರಪ್ಪನನ್ನು ತಬ್ಬಿಕೊಂಡು ವಿನಯ್ ಗುರೂಜಿ ಹೇಳಿದ್ದೇನು ಗೊತ್ತಾ..? | Vinay Guruji | Oneindia Kannada

ಚಿಕ್ಕಮಗಳೂರು, ಸೆಪ್ಟೆಂಬರ್ 14: ಮೊನ್ನೆ ಗುರುವಾರ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ, ತಮ್ಮ ಕುರ್ಚಿಗೆ ಯಾವುದೇ ಕಂಟಕ ಎದುರಾಗದಿರಲಿ ಇರಲಿ ಎಂದು ಸಿಎಂ ವಿಶೇಷ ಹೋಮ ಹವನಗಳನ್ನು ನಡೆಸಿದ್ದರು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ಅಧಿಕಾರ ಮುಂದುವರೆಯಲಿ ಎಂದು ಕೇಳಿಕೊಂಡು ಸ್ವರ್ಣಪೀಠಿಕೇಶ್ವರಿ ಆಶ್ರಮದಲ್ಲಿ ಶತರುದ್ರಯಾಗವನ್ನೂ ನಡೆಸಿದರು.

ಸುಮಾರು ಆರು ಗಂಟೆಗಳ ನಂತರ ಹೋಮ ಹವನಗಳೆಲ್ಲವೂ ಮುಗಿದ ಮೇಲೆ ವಿನಯ್ ಗುರೂಜಿ ಸಿಎಂ ಅವರನ್ನು ಬೀಳ್ಕೊಡುವಾಗ ಕಾರಿನ ಬಳಿ ಅವರನ್ನು ತಬ್ಬಿಕೊಂಡು ಮುತ್ತಿಟ್ಟು "ಎಚ್ಚರದಿಂದ ಹೆಜ್ಜೆ ಇಡಿ" ಎಂದು ಹೇಳಿದ್ದಾರೆ. ಈ ಮಾತು ಈಗ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಸಿಎಂಗೆ ಮುಂದೆ ಒದಗಿರಲಿರುವ ಕಷ್ಟವನ್ನು ವಿನಯ್ ಗುರೂಜಿ ಸೂಕ್ಷ್ಮವಾಗಿ ಹೇಳಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿವೆ.

ಕುರ್ಚಿ ಕಾಲು ಗಟ್ಟಿಯಾಗಿದ್ರೆ ಸಾಕು; ಕುಮಾರಣ್ಣನ ಹಾದಿಯಲ್ಲಿ ಯಡಿಯೂರಪ್ಪ?ಕುರ್ಚಿ ಕಾಲು ಗಟ್ಟಿಯಾಗಿದ್ರೆ ಸಾಕು; ಕುಮಾರಣ್ಣನ ಹಾದಿಯಲ್ಲಿ ಯಡಿಯೂರಪ್ಪ?

ವಿನಯ್ ಗುರೂಜಿಯ ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ, ಶತರುದ್ರಯಾಗ, ವಿಷ್ಣು ಸಹಸ್ರ ನಾಮ, ಮೃತ್ಯುಂಜಯ ಹೋಮ, ಲಲಿತ ಸಹಸ್ರನಾಮ ಹಾಗೂ ಗಣಪತಿ ಹೋಮ ನಡೆಸಿದರು. ವಿನಯ್ ಗುರೂಜಿ ನೇತೃತ್ವದಲ್ಲಿ ಪುರೋಹಿತರು ಹೋಮ ಹವನಗಳನ್ನು ನಡೆಸಿದರು.

Vinay Guruji Warned CM Yediyurappa In Chikkamagaluru

ಆದರೆ ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಹೀಗೆ ಒಂದು ಎಚ್ಚರಿಕೆಯ ಮಾತನ್ನು ಹೊರಹಾಕಿದ್ದಾರೆ.

ವಿನಯ್ ಗುರೂಜಿ ಮೊರೆ ಹೋದ ಸಿಎಂ; ಯಡಿಯೂರಪ್ಪ ಕಟ್ಟಿಕೊಂಡಿದ್ದ ಹರಕೆ ಏನು?ವಿನಯ್ ಗುರೂಜಿ ಮೊರೆ ಹೋದ ಸಿಎಂ; ಯಡಿಯೂರಪ್ಪ ಕಟ್ಟಿಕೊಂಡಿದ್ದ ಹರಕೆ ಏನು?

ಯಡಿಯೂರಪ್ಪ ಅವರ ಹಾದಿಯಲ್ಲಿ ಕಷ್ಟಗಳು ಎದುರಾಗುವುದನ್ನು ಹೀಗೆ ಪರೋಕ್ಷವಾಗಿ ತಿಳಿಸಿದ್ದಾರಾ? ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಆ ಕಾರಣಕ್ಕೇ ಹೀಗೆ ಹೇಳಿದರಾ? ಅಥವಾ ಇನ್ನಾವ ದೃಷ್ಟಿಯಲ್ಲಿ ಈ ಮಾತನ್ನು ಹೇಳಿರಬಹುದು? ಮುಂದೆ ಏನಾಗಲಿದೆ ಎಂಬುದನ್ನು ತಿಳಿದೇ ಹೀಗೊಂದು ಎಚ್ಚರಿಕೆ ನೀಡಿದರಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

English summary
Vinay Guruji hugged CM and kissed him and also warned him to step carefully. This has sparked suspicions that he has subtly told the CM the difficulty of getting ahead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X