ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 10: ಚಿಕ್ಕಮಗಳೂರಿನಲ್ಲಿ ಆಹಾರ ಅರಸಿಕೊಂಡು ಬಂದಿದ್ದ ಕಡವೆಯೊಂದು ಬಾವಿಗೆ ಬಿದ್ದು ನಿತ್ರಾಣಗೊಂಡಿದ್ದು, ಅದನ್ನು ಗ್ರಾಮಸ್ಥರೇ ಸೇರಿ ರಕ್ಷಿಸಿದ್ದಾರೆ.

ಕಳೆ ತೆಗೆಯುವಾಗ ಕಾಣಿಸಿಕೊಂಡ 12 ಅಡಿ ಹೆಬ್ಬಾವುಕಳೆ ತೆಗೆಯುವಾಗ ಕಾಣಿಸಿಕೊಂಡ 12 ಅಡಿ ಹೆಬ್ಬಾವು

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮಕ್ಕೆ ಬಂದ ಕಡವೆಯೊಂದು ಬಾವಿಗೆ ಬಿದ್ದಿದೆ. ಇದರಿಂದ ಅದರ ಒಂದು ಕಾಲು ಮುರಿದಿದ್ದು, ಬಾವಿಯಿಂದ ಮೇಲೆ‌ ಬರಲು ಹರಸಾಹಸ ಪಡುತ್ತಿತ್ತು. ಜೊತೆಗೆ ಹಸಿವಿನಿಂದ ನಿತ್ರಾಣಗೊಂಡಿತ್ತು.

Villagers Rescued Elk In Kogre

ಇದನ್ನು ಕಂಡ ಸ್ಥಳೀಯರು ಭಾರೀ ಗಾತ್ರದ ಕಡವೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಜೊತೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಶು ವೈದ್ಯರಿಂದ ಗಾಯಗೊಂಡ ಕಡವೆಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಕಡವೆ ಚೇತರಿಸಿಕೊಂಡಿದೆ.

English summary
A elk came in search of food and fell into a well in Kogre village of Chikkamagaluru and it was rescued by villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X