ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಉಕ್ಕಿ ಹರಿವ ನೀರಿನ ನಡುವೆ ಜೀಪು ಚಲಾಯಿಸಿ ದುಸ್ಸಾಹಸ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌07: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಿಸುತ್ತಿದೆ. ಮಳೆಯ ಅಬ್ಬರಕ್ಕೆ ಮಲೆನಾಡಿಗರು ಬೆಚ್ಚಿ ಬೀಳುವಂತಾಗಿದೆ.

Recommended Video

ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಅದಾಗಲೇ ಗುಡ್ಡ ಕುಸಿತ ಸಂಭವಿಸಿದೆ. ರಸ್ತೆಯಲ್ಲೇ ಬೃಹತ್ ಕಲ್ಲುಗಳು, ಮಣ್ಣಿನ ರಾಶಿ ತುಂಬಿಕೊಂಡಿದೆ. ಇನ್ನಷ್ಟು ಅಪಾಯಗಳ ಮುನ್ಸೂಚನೆಯೂ ದೊರೆತಿದೆ. ಆದರೆ ಇಂಥ ಸಮಯದಲ್ಲಿ ರಭಸವಾಗಿ ಹರಿಯುವ ನೀರಿನ ನಡುವೆಯೇ ಜೀಪು ಚಲಾಯಿಸುವ ದುಸ್ಸಾಹಸಕ್ಕೆ ಮುಂದಾಗಿರುವ ಸಂಗತಿ ನಡೆದಿದೆ.

Chikkamagaluru: Video Of Riding Jeep Inbetween Water In Koppa

 ಚಾರ್ಮಾಡಿ ಘಾಟ್ ನಲ್ಲಿ ಬಿರುಕು ಬಿಟ್ಟ ರಸ್ತೆ; ಸಂಚಾರ ಬಂದ್ ಚಾರ್ಮಾಡಿ ಘಾಟ್ ನಲ್ಲಿ ಬಿರುಕು ಬಿಟ್ಟ ರಸ್ತೆ; ಸಂಚಾರ ಬಂದ್

ಜಿಲ್ಲೆಯ ಕೊಪ್ಪ ತಾಲೂಕಿನ ಕೂವೆ ಎಸ್ಟೇಟ್ ಸಮೀಪ ಗುಡ್ಡದಿಂದ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಆ ರಭಸವಾಗಿ ಹರಿಯುವ ನೀರಿನ ನಡುವೆಯೇ ಕೆಲ ಯುವಕರು ಜೀಪು ಚಲಾಯಿಸಿ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಒಂದಷ್ಟು ಆಯ ತಪ್ಪಿದರೂ ಪ್ರಪಾತಕ್ಕೆ ಬೀಳುವ ಅಪಾಯವಿದೆ. ಹೀಗಿದ್ದೂ ಅಲ್ಲೇ ಜೀಪು ಚಲಾಯಿಸಿದ್ದಾರೆ. ನೀರಿನ ನಡುವೆ ಜೀಪು ಚಲಾಯಿಸುವ ಈ ವಿಡಿಯೋ ನೋಡುವುದೇ ಭಯಾನಕವೆನಿಸುತ್ತದೆ.

code:

English summary
Some youths ride a jeep inbetween water at chikkamagaluru koppa taluk estate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X