ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿಕ್ಕಮಗಳೂರಿನಲ್ಲಿ ಸುಳಿದಾಡುತ್ತಾ ಭಯ ತಂದ ಒಂಟಿ ಸಲಗ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 06: ಕಾಡಂಚಿನ ಗ್ರಾಮಗಳಿಗೆ ಆನೆಗಳು ನುಗ್ಗುವುದು ಈ ನಡುವೆ ಸಾಮಾನ್ಯ ಎಂಬಂತಾಗಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಮೂಡಿಗೆರೆ ತಾಲೂಕಿನ‌ ದೇವರಮನೆ, ಕೋಟೆಗುಡ್ಡ, ಕೋಗಿಲೆ ಗ್ರಾಮದ ಸುತ್ತಮುತ್ತ ಸುಳಿದಾಡುತ್ತಿರುವ ಒಂಟಿ ಸಲಗ ಜನರಲ್ಲಿ ಭಯ ಮೂಡಿಸಿದೆ.

ಒಂಟಿ ಸಲಗ ಸುಳಿದಾಡುತ್ತಿರುವುದರಿಂದ ಸುತ್ತಲಿನ‌ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಭತ್ತದ ಗದ್ದೆಗಳಿಗೆ ಆನೆಗಳು ನುಗ್ಗಿ ಧಾಂದಲೆ ನಡೆಸಿ ಬೆಳೆ ಹಾನಿ ಮಾಡಿದ್ದವು. ಈಗ ಭತ್ತದ ಕೊಯ್ಲು ಮುಗಿದಿದ್ದು, ಆನೆಗಳು ಕಾಫಿ ತೋಟಗಳಿಗೆ ನುಗ್ಗುತ್ತಿವೆ.

'ಆರ್ಕಿಮಿಡಿಸ್ ತತ್ವ' ಬಳಸಿ ಬಾವಿಯಿಂದ ಆನೆಮರಿ ರಕ್ಷಣೆ'ಆರ್ಕಿಮಿಡಿಸ್ ತತ್ವ' ಬಳಸಿ ಬಾವಿಯಿಂದ ಆನೆಮರಿ ರಕ್ಷಣೆ

Video Of Elephant In Chikkamagaluru Went Viral

ಹೀಗಾಗಿ ಮಳೆ, ನೆರೆ ಹಾವಳಿಯಿಂದ ಉಳಿದ ಅಲ್ಪಸ್ವಲ್ಪ ಕಾಫಿಯೂ ಆನೆ ಹಾವಳಿಗೆ ತುತ್ತಾಗುವ ಭಯ ರೈತರಲ್ಲಿ ಮನೆಮಾಡಿದೆ. ಇನ್ನು ಒಂಟಿ ಸಲಗದ ಹಾವಳಿಯಿಂದ ಹಗಲು, ರಾತ್ರಿಯ ವೇಳೆ ಜನರು ಓಡಾಡಲು ಭಯ ಪಡುತ್ತಿದ್ದಾರೆ. ಹೊರಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಕೂಡಲೇ ಆನೆಯನ್ನು ಕಾಡಿಗಟ್ಟುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

English summary
For the past four days, the elephant which is raoming in chikkamgaluru brings fear among people. The video of elephant gone viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X