ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಟ್ಟಿಗೆ ಹಾರದಲ್ಲಿ ವಾಹನಗಳು ಫುಲ್ ಜಾಮ್; ಎಸ್ಪಿ, ಡಿಸಿ ಮನವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 24: ಕೊರೊನಾ ವೈರಸ್ ಭೀತಿ ಹಿನ್ನೆಲೆ ಎಲ್ಲೆಡೆ ಜನರು ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಜನರ ಓಡಾಟ ಇನ್ನೂ ನಿಂತಿಲ್ಲ.

ದಕ್ಷಿಣ ಕನ್ನಡ, ಚಿಕ್ಕಮಗಳೂರು ಸಂಪರ್ಕ ರಸ್ತೆ ಕೊಟ್ಟಿಗೆ ಹಾರದಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ತಡೆ ಹಾಕಿದ್ದರು. ಇದರ ಪರಿಣಾಮ ಊರುಗಳಿಗೆ ತೆರಳಲು ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು.

ಭಟ್ಕಳದ ಇಬ್ಬರಲ್ಲಿ ಕೊರೊನಾ ಸೋಂಕು ಕನ್ಫರ್ಮ್ಭಟ್ಕಳದ ಇಬ್ಬರಲ್ಲಿ ಕೊರೊನಾ ಸೋಂಕು ಕನ್ಫರ್ಮ್

ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಲಾಗಿದ್ದು, ಮುಂಜ್ರಾಗತಾ ಕ್ರಮವಾಗಿ ವಾಹನಗಳನ್ನು ಪೊಲೀಸರು ತಡೆಹಿಡಿಯುತ್ತಿದ್ದರು. ಹೀಗಾಗಿ ಕೊಟ್ಟಿಗೆ ಹಾರದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Vehicles Que In Kottigehara Due To Lockdown

ಲಾಕ್ ಡೌನ್ ಆಗಿದ್ದರೂ ಚಿಕ್ಕಮಗಳೂರಿನಲ್ಲಿ ಶೇಕಡಾ 30ರಷ್ಟು ಜನ ಹೊರಗೆ ಓಡಾಡುತ್ತಿದ್ದಾರೆ. ಇದನ್ನು ತಡೆಯಲು ರಸ್ತೆಗಿಳಿದ ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಹಾಗೂ ಡಿಸಿ ಬಗಾದಿ ಗೌತಮ್ ಜನರಲ್ಲಿ ತಿಳಿವಳಿಕೆ ಮೂಡಿಸಲು ಪ್ರಯತ್ನಿಸಿದರು.

ಮಲ್ಲಂದೂರು ರಸ್ತೆಯಲ್ಲಿ ಜನರಿಗೆ ಅಧಿಕಾರಿಗಳು ತಿಳಿ ಹೇಳಿದರು. ಮನೆಯಿಂದ ಹೊರಬಾರದಂತೆ ಜನಸಾಮಾನ್ಯರಿಗೆ ಮನವಿ ಮಾಡಿದರು.

English summary
Chikkamagaluru police are stopping vehicles in kottigehara. Also dc and sp are requesting people not to come out of house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X