ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರ್ಮಾಡಿ ಘಾಟ್ ಮಧ್ಯೆ ವಾಹನ ನಿಲ್ಲಿಸಿದರೆ ಕೇಸ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 4: ಮಳೆಯ ನಡುವೆ ಘಾಟ್ ನಲ್ಲಿ ವಾಹನ ನಿಲ್ಲಿಸಿ ಅಪಾಯಕಾರಿ ಜಾಗಗಳಲ್ಲಿ ಜನರು ಓಡಾಡುತ್ತಿರುವುದು ಹೆಚ್ಚಾಗಿರುವ ಕಾರಣ ಮೂಡಿಗೆರೆಯ ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಗೊಳಿಸಲಾಗಿದೆ.

Recommended Video

Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

ಇನ್ನು ಮುಂದೆ ಚಾರ್ಮಾಡಿಯಲ್ಲಿ ವಾಹನ ನಿಲ್ಲಿಸಿದರೆ ಕೇಸ್ ದಾಖಲಿಸಿಕೊಳ್ಳಲಾಗುತ್ತದೆ. ಚಾರ್ಮಾಡಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿರುವ ಕುರಿತು ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಮಾಹಿತಿಯ ನ್ನುನೀಡುತ್ತಿದ್ದಾರೆ. ಈ ಕುರಿತು ಚೆಕ್ ಪೋಸ್ಟ್ ನಲ್ಲಿ ಮಾಹಿತಿ ಫಲಕವನ್ನೂ ಜಿಲ್ಲಾಡಳಿತ ಅಳವಡಿಸಿದೆ.

ಖಂಡಾಲ ಘಾಟ್ ರಸ್ತೆಯಂತೆ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿಖಂಡಾಲ ಘಾಟ್ ರಸ್ತೆಯಂತೆ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿ

Vehicle Parking Prohibited At Charmadi Ghat Of Chikkamagaluru


ಇದೀಗ ಚಿಕ್ಕಮಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಳೆ ಸುರಿಯುವ ಸಮಯ, ಘಾಟ್ ನಲ್ಲಿ ಪ್ರಯಾಣಿಸುವವರು ವಾಹನ ನಿಲ್ಲಿಸಿ ಅಪಾಯಕಾರಿ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಕಳೆದ ವರ್ಷವೂ ಬಂಡೆಗಲ್ಲಿನ ಮೇಲೆ ಸೆಲ್ಫೀ ತೆಗೆದುಕೊಳ್ಳಲು ಹೋದ ಯುವಕನೊಬ್ಬ ಜಾರಿ ಬಿದ್ದಿದ್ದ. ಇಂಥ ಘಟನೆಗಳು ಜರುಗುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ.

English summary
People travelling through charmadi ghat park their vehicles and walk around dangerous places. So District administration has prohibited vehicle parking at charmadi ghat,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X