ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವ ಗುಂಪಿದೆ:ಸಿಎಂ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 07: ನಾವು ನಂಬಿಕೊಂಡಿರುವ ದೇವರು ಶೃಂಗೇರಿ ಶಾರದಾಂಬೆ. ಹಾಗಾಗಿ ತಾಯಿ ಶಾರದಾಂಬೆ ಹಾಗೂ ಶ್ರೀಗಳ ಆಶೀರ್ವಾದ ಪಡೆಯಲು ಮತ್ತು ನಾಡಿನ ಜನತೆಗೆ ಒಳಿತಾಗಲಿ ಎಂದು ಬೇಡಿಕೊಳ್ಳಲು ಶೃಂಗೇರಿಗೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶ್ರೀಗಳ ಜೊತೆ ದೊಡ್ಡವರ ನಂಟು ಹಿಂದಿನಿಂದಲೂ ಇದೆ. ಅವರ ಆಶೀರ್ವಾದ, ತಾಯಿಯ ಆಶೀರ್ವಾದ ಇವತ್ತು ತಂದೆಯವರನ್ನ ಆ ಸ್ಥಾನಕ್ಕೆ ತಂದು ಕುರಿಸಿದೆ ಎಂದರು.

ರಾಜ್ಯದಲ್ಲಿ ಒಳ್ಳೆ ಮಳೆ -ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದ ಸಿಎಂ, ನಿಖಿಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಯಿಸಿ, ನಿಖಿಲ್ ಬರಬೇಕು ಅನ್ನೋರು ಇರ್ತಾರೆ, ಹೋಗ್ಬೇಕು ಅನ್ನೋರು ಇರ್ತಾರೆ, ಇದಕ್ಕೆಲ್ಲ ದೊಡ್ಡ ಮಹತ್ವ ಕೊಡಬೇಕಿಲ್ಲ. ಪೂರ್ವಸಿದ್ಧತೆ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇಂತಹ ಕೆಲಸ ಮಾಡುತ್ತಾರೆ. ವೋಟ್ ಹಾಕುವವರು ಎಲ್ಲೋ ಇರುತ್ತಾರೆ ಎಂದರು.

ದೇವೇಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರೀತಂಗೌಡದೇವೇಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರೀತಂಗೌಡ

ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವ ವಿಂಗ್ ಇದೆ. ನಿಜವಾದ ಪ್ರೀತಿ ವಿಶ್ವಾಸವಿಟ್ಟವರು ವೋಟು ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಬಂದೂಕು ಹಿಡಿದು ಯಾರಾದರೂ ಓಡಾಡುತ್ತಿದ್ದರೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

 ಜೆಡಿಎಸ್, ಕಾಂಗ್ರೆಸ್ ಗೆಲ್ಲುತ್ತದೆ

ಜೆಡಿಎಸ್, ಕಾಂಗ್ರೆಸ್ ಗೆಲ್ಲುತ್ತದೆ

ಜನರನ್ನ ಭಯ ಬೀಳಿಸುವಂತಹ ಪ್ರಯತ್ನ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡುತ್ತಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆಲುತ್ತದೆ ಎಂದು ಶೃಂಗೇರಿ ಪೀಠದಲ್ಲಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

 ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರ ಹಸಿರು ನಿಶಾನೆ? ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರ ಹಸಿರು ನಿಶಾನೆ?

 ಜನತೆಯ ಸೇವೆ ಮಾಡಲು ರೆಡಿ

ಜನತೆಯ ಸೇವೆ ಮಾಡಲು ರೆಡಿ

ಇನ್ನು ಮಂಡ್ಯದಲ್ಲಿ ಲೋಕಸಭಾ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ನಿಖಿಲ್ ಕುಮಾರಸ್ವಾಮಿ, ಇದು ಜೆ.ಡಿ.ಎಸ್ ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರ ನಿರ್ಧಾರ.

ಬಹುತೇಕ ಶಾಸಕರ ಜೊತೆಗೆ ಕುಳಿತು ಚರ್ಚೆ ನಡೆಸಿ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜನತೆಯ ನಾಡಿ ಮಿಡಿತ ಅರ್ಥಮಾಡಿಕೊಂಡಿದ್ದಕ್ಕೆ ಪಕ್ಷ ಟಿಕೆಟ್ ನೀಡಿದೆ.ಮಂಡ್ಯ ಜನತೆಯ ಸೇವೆ ಮಾಡಲು ರೆಡಿಯಾಗಿದ್ದೇನೆ ಎಂದರು.

 ಕಾಂಗ್ರೆಸ್ ಈ 3 ಕ್ಷೇತ್ರ ಬಿಟ್ಟು ಕೊಡಲೇಬೇಕೆಂದು ಜೆಡಿಎಸ್ ಹಠವೇಕೆ? ಕಾಂಗ್ರೆಸ್ ಈ 3 ಕ್ಷೇತ್ರ ಬಿಟ್ಟು ಕೊಡಲೇಬೇಕೆಂದು ಜೆಡಿಎಸ್ ಹಠವೇಕೆ?

 ನಾನು ತಲೆ ಕೆಡಿಸಿಕೊಳ್ಳುವುದಿಲ್ಲ

ನಾನು ತಲೆ ಕೆಡಿಸಿಕೊಳ್ಳುವುದಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ನಿಖಿಲ್ ಚಳವಳಿ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್, ಈಗಾಗಲೇ ವರಿಷ್ಠರು ಕಾರ್ಯಕರ್ತರು, ಶಾಸಕರು, ನಾಯಕರ ಜೊತೆ ಚರ್ಚಿಸಿ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. ಜನರ ನಾಡಿ ಮಿಡಿತ ತಿಳಿದುಕೊಂಡು ಟಿಕೆಟ್ ಕೊಡುತ್ತಿದ್ದಾರೆ. ಮಂಡ್ಯ ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದರ್ಶನದ ಬಳಿಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

 ಚಂಡಿಕಾ ಯಾಗದ ಸಂಕಲ್ಪ

ಚಂಡಿಕಾ ಯಾಗದ ಸಂಕಲ್ಪ

ಇಂದು ಗುರುವಾರ ಶೃಂಗೇರಿಯಲ್ಲಿ ದೇವೇಗೌಡರ ಕುಟುಂಬ ಶಾರದಾಂಬೆಗೆ ವಿಶೇಷ ಪೂಜೆ, ಚಂಡಿಕಾಯಾಗ ನಡೆಸಲಿದ್ದು, ಪೂಜೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ, ಪುತ್ರ ಸಿಎಂ ಕುಮಾರಸ್ಚಾಮಿ, ಶಾಸಕಿ ಅನಿತಾ ಹಾಗೂ ಪುತ್ರ ನಿಖಿಲ್ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ನಿಖಿಲ್ ಶೃಂಗೇರಿಗೆ ಬಂದಿರುವುದು ವಿಶೇಷ. ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಕೂಡ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವಾರ ಸಚಿವ ರೇವಣ್ಣ ಚಂಡಿಕಾಯಾಗದ ಸಂಕಲ್ಪ ಮಾಡಿದ್ರು. ಈ ಹಿನ್ನೆಲೆಯಲ್ಲಿ ಇಂದು ಚಂಡಿಕಾ ಯಾಗದ ಪೂರ್ಣಾವತಿಯಲ್ಲಿ ಎಚ್.ಡಿ.ಡಿ ಕುಟುಂಬಸ್ಥರು ಭಾಗಿಯಾಗಿದ್ದಾರೆ.

English summary
HD Deve Gowda's family today visited Sringeri temple. At this time Chief Minister Kumaraswamy said unwanted news promoted in social media.There is a group to promote such news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X