• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಮಗಳೂರು; ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಫೆಬ್ರವರಿ 15; ಪ್ರೇಮಿಗಳ ದಿನಾಚರಣೆಯ ದಿನ ಜೋಡಿಯೊಂದು ನಿಶ್ಚಿತಾರ್ಥ ಮಾಡಿಕೊಂಡಿತು. ಚಿಕ್ಕಮಗಳೂರಿನಲ್ಲಿ ನಡೆದ ಈ ನಿಶ್ಚಿತಾರ್ಥ ತುಂಬಾ ವಿಭಿನ್ನವಾಗಿತ್ತು, ಉಂಗುರ ಬದಲಾವಣೆ ಅಲ್ಲಿ ಇರಲಿಲ್ಲ.

ನವಜೀವನಕ್ಕೆ ಕಾಲಿಡುತ್ತಿರುವ ದಂಪತಿಯೊಬ್ಬರು ನಿಶ್ಚಿತಾರ್ಥದ ವೇಳೆ ಉಂಗುರ ಬದಲಿಸಿಕೊಳ್ಳುವ ಬದಲು ಭಾರತಾಂಬೆಯ ಭಾವಚಿತ್ರವನ್ನು ಬದಲಿಸಿಕೊಂಡರು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಎಂಬುವವರ ನಿಶ್ಚಿತಾರ್ಥ ಭಾನುವಾರ ನಡೆಯಿತು.

ಬೆಳಗಾವಿ; ವಾಟ್ಸಪ್‌ ಕಾಲ್‌ನಲ್ಲಿಯೇ ನಡೆಯಿತು ನಿಶ್ಚಿತಾರ್ಥ!

ನಿಶ್ಚತಾರ್ಥದ ದಿನ ಪರಸ್ಪರ ಉಂಗುರದ ಬದಲು ಭಾರತಾಂಬೆಯ ಫೋಟೋವನ್ನು ಬದಲಿಸಿಕೊಂಡು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ. ವಿದ್ಯಾಶ್ರೀ ಮೂಲತಃ ಚಿಕ್ಕಮಗಳೂರಿನ ಹುಡುಗಿ. ಹಿರೇಮಗಳೂರು ಪೈ ಕಲ್ಯಾಣ ಮಂಟದ ಹಿಂಭಾಗದ ವಧುವಿನ ನಿವಾಸದಲ್ಲಿ ಈ ಅಪರೂಪ ಹಾಗೂ ಅರ್ಥಪೂರ್ಣ ನಿಶ್ಚಿತಾರ್ಥ ನಡೆದಿದೆ.

ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ: ಹೊಸ ಟ್ರೆಂಡ್ ಸೃಷ್ಟಿಸಿದ ಜೋಡಿ

ರವೀಶ್ ಹಾಗೂ ವಿದ್ಯಾಶ್ರೀ ಇಬ್ಬರೂ ಬೆಂಗಳೂರಿನಿಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ. ಪ್ರೇಮಿಗಳ ದಿನವನ್ನು ಭಾರತಾಂಬೆಯ ದಿನವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ.

ದಯಾ ಮರಣಕ್ಕೆ ಪತ್ರ ಬರೆದ ಚಿಕ್ಕಮಗಳೂರು ವೃದ್ಧರ ಕಣ್ಣೀರ ಕಥೆ

   ಟಿ.ವಿ,ಫ್ರಿಡ್ಜ್,ಕಾರು ಇದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಕೂಡಲೇ ಕಾರ್ಡ್‌ ಹಿಂತಿರುಗಿಸಿ | Oneindia Kannada

   ಈ ವೇಳೆ ರವೀಶ್ ಹಾಗೂ ವಿದ್ಯಾಶ್ರೀ ಕುಟುಂಬದವರು ಜೊತೆಗಿದ್ದು ಮಕ್ಕಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರೂಪ ಹಾಗೂ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾಗಲಕ್ಷ್ಮಿ, ವೆಂಕಟೇಶ್, ಉಷಾ, ಕೇಶವಮೂರ್ತಿ, ಸ್ನೇಹಿತರು ಹಾಗೂ ಬಂಧುಮಿತ್ರರು ಸಾಕ್ಷಿಯಾಗಿದ್ದರು.

   English summary
   Unique engagement ceremony in Chikkamagaluru. Software engineer exchanged bharat mata photo instead-of engagement ring.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X