ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡೂರು; ಮಳೆ ಅಬ್ಬರ, ಕೊಚ್ಚಿ ಹೋಯಿತು ರಾಗಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 22: ಬಂಗಾಳಕೊಲ್ಲಿಯಲ್ಲಿ ಮೇಲ್ಮೈಸುಳಿ ಗಾಳಿಯಿಂದ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಭಾನುವಾರ ಸುರಿದ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಧಾರಾಕಾರ ಮಳೆ ಸುಮಾರು ಒಂದು ಗಂಟೆಗಳ ಕಾಲ ಒಂದೇ ಸಮನೆ ಎಡೆಬಿಡದೆ ಸುರಿದಿದೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಕಡೂರು ಪಟ್ಟಣದ ಬಿ. ಎಚ್. ರಸ್ತೆಯಲ್ಲಿರುವ ಮಂಗಲ್ ಜ್ಯೋತಿ ಬಟ್ಟೆ ಅಂಗಡಿಗೆ ನೀರು ನುಗ್ಗಿ ಅಂಗಡಿ ತುಂಬಾ ತುಂಬಿಕೊಂಡಿತ್ತು.

ಭಾರತದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಮುನ್ಸೂಚನೆಭಾರತದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಮುನ್ಸೂಚನೆ

shop

ಕಡೂರು ಪಟ್ಟಣದಲ್ಲಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ದಿಢೀರ್ ಸುರಿದ ಮಳೆಯಿಂದ ಚರಂಡಿ ತುಂಬಿ ನೀರು ಹೋಗಲು ಜಾಗವಿಲ್ಲದ ನೆಲಮಾಳಿಗೆಯೊಳಗಿದ್ದ ಬಟ್ಟೆ ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯೊಳಗೆ ಸುಮಾರು 3-4 ಅಡಿಯಷ್ಟು ನೀರು ನಿಂತಿದ್ದು ಲಕ್ಷಾಂತರ ಮೌಲ್ಯದ ಬಟ್ಟೆಗಳು ಸಂಪೂರ್ಣ ನೀರು ಪಾಲಾಗಿದೆ.

ಚಿಕ್ಕಮಗಳೂರಲ್ಲಿ ಮಳೆ; ಕಾಫಿ ಬೆಳೆಗಾರರಿಗೆ ಸಂಕಷ್ಟ ಚಿಕ್ಕಮಗಳೂರಲ್ಲಿ ಮಳೆ; ಕಾಫಿ ಬೆಳೆಗಾರರಿಗೆ ಸಂಕಷ್ಟ

ಅಂತಿಮವಾಗಿ ಅಂಗಡಿಯೊಳಗೆ ತುಂಬಿದ್ದ ನೀರನ್ನು ಮೋಟರ್ ಇಟ್ಟು ಹೊರಗಡೆ ಹಾಕಲಾಯಿತು. ಸ್ಥಳೀಯರು ಹಾಗೂ ಅಂಗಡಿ ಮಾಲೀಕ ಗುತ್ತಿಗೆದಾರನ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮಳೆ ಹಾಗೂ ನೀರಿನ ರಭಸಕ್ಕೆ ಬಟ್ಟೆ ಅಂಗಡಿ ಪಕ್ಕದಲ್ಲಿದ್ದ ಜ್ಯುವೆಲರಿ ಶಾಪ್ ಒಳಗೂ ನೀರು ನುಗ್ಗಿದೆ. ಇನ್ನು ಕೊಯ್ದು ಒಣಗಲು ಹಾಕಿದ್ದ ರಾಗಿ ಗುಡ್ಡೆ ಕೂಡ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ದಿಢೀರ್ ಸುರಿದ ಮಳೆಯಿಂದ ರಾಗಿ ಕೊಚ್ಚಿಕೊಂಡು ಹೋಯಿತು.

crop

ಮುಳುಗಿದ ಹಿಟಾಚಿ; ಕಡೂರು ತಾಲೂಕಿನ ದೋಗೆಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಕೆಲಸ ಮಾಡುವಾಗ ಕೆರೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೂಡ ಅಪಾಯಕ್ಕೆ ಸಿಲುಕಿಕೊಂಡಿದ್ದರು.

ಉತ್ತರ ಕನ್ನಡದಲ್ಲಿ ಮಳೆ; ಸಮುದ್ರದಲ್ಲಿ ಮುಳುಗಿದ ಬೋಟು ಉತ್ತರ ಕನ್ನಡದಲ್ಲಿ ಮಳೆ; ಸಮುದ್ರದಲ್ಲಿ ಮುಳುಗಿದ ಬೋಟು

ನೋಡ-ನೋಡುತ್ತಿದ್ದಂತೆ ಕೆರೆಗೆ ನೀರು ನುಗ್ಗಿದ್ದರಿಂದ ಜೆಸಿಬಿ ಚಾಲಕ ಜೆಸಿಬಿಯನ್ನು ಕೆರೆ ಏರಿ ಮೇಲೆ ತರಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ, ನೀರು ವೇಗವಾಗ ಬರುತ್ತಿದ್ದ ಕಾರಣ ಭೂಮಿಯ ತೇವಾಂಶ ಹೆಚ್ಚಾಗಿ ಜೆಸಿಬಿ ಕೆಳಭಾಗದಲ್ಲಿ ಇದ್ದ ಕಾರಣ ಮೇಲೆ ಹತ್ತಲು ಸಾಧ್ಯವಾಗಿಲ್ಲ.

jcb

ಜೆಸಿಬಿಯನ್ನ ಮೇಲೆ ತರಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕೆರೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗುತ್ತಲೇ ಇತ್ತು. ಜೆಸಿಬಿ ಕೂಡ ಅರ್ಧ ಮುಳುಗಿತ್ತು. ಆಗ ಚಾಲಕ ಜೆಸಿಬಿಯನ್ನು ಅಲ್ಲೇ ಬಿಟ್ಟು, ಕೆರೆ ಏರಿ ಮೇಲೆ ಬಂದು ಪ್ರಾಣ ಉಳಿಸಿಕೊಂಡು ಅಪಾಯದಿಂದ ಪಾರಾಗಿದ್ದಾನೆ.

English summary
Unexpected rain in Kadur, Chikkamagaluru district on Sunday, February 21.Water logged in roads and crop loss for farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X