• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲ್ಲತ್ತಗಿರಿಯಲ್ಲಿ ಉಕ್ಕಿ ಹರಿದಿದೆ ನೀರು; ಸಿಲುಕಿಕೊಂಡ ಪ್ರವಾಸಿಗರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 6: ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

 ಸ್ವಲ್ಪ ಯಾಮಾರಿದ್ದರೂ ಇವರು ಭದ್ರಾ ಪಾಲು ಸ್ವಲ್ಪ ಯಾಮಾರಿದ್ದರೂ ಇವರು ಭದ್ರಾ ಪಾಲು

ಕಲ್ಲತ್ತಿ ಜಲಪಾತ ಉಕ್ಕಿ ಹರಿಯುತ್ತಿದೆ. ಜಲಪಾತಕ್ಕೆ ಹೊಂದಿಕೊಂಡಂತೆಯೇ ವೀರಭದ್ರೇಶ್ವರ ದೇವಸ್ಥಾನವೂ ಇರುವುದರಿಂದ ದೇವಸ್ಥಾನಕ್ಕೆ ತೆರಳಿದ್ದ ಪ್ರವಾಸಿಗರು ಮತ್ತೆ ಈ ಬದಿಗೆ ಬರಲಾರದೇ ಅಲ್ಲೇ ನಿಂತಿದ್ದರು.

ನೀರಿನ ಆರ್ಭಟ ಹೆಚ್ಚಾದ್ದರಿಂದ ದೇವಸ್ಥಾನಕ್ಕೆ ತೆರಳಿದ್ದ ಪ್ರವಾಸಿಗರು ಈ ಬದಿಗೆ ಬರಲಾಗದಂತಾಗಿದೆ. ಎಷ್ಟೋ ಗಂಟೆಗಳಿಂದ ನೀರು ಕಡಿಮೆಯಾಗಲೆಂದು ಕಾದು ಅಲ್ಲೇ ನಿಂತಿದ್ದಾರೆ. ಆದರೆ ನೀರು ತಗ್ಗುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಆದ್ದರಿಂದ ಪ್ರವಾಸಿಗರನ್ನು ಕರೆತರಲು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದಾರೆ. ಹಗ್ಗ ಕಟ್ಟಿ ಭಕ್ತಾದಿಗಳನ್ನ ರಕ್ಷಣೆ ಮಾಡುತ್ತಿದ್ದಾರೆ.

English summary
ChikKmagalur is experiencing continuous rainfall and Water level increased in Kallathagiri Falls of Tarikere Taluk. Tourists trapped in the temple of kallathagiri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X