ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮನ ಬೆಟ್ಟಕ್ಕೆ ಸಾವಿರಾರು ಮಂದಿ ಭೇಟಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 27: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ದೇವಿರಮ್ಮ ಬೆಟ್ಟಕ್ಕೆ ಭಾನುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಜಾರುವ ಕಾಲುದಾರಿಯಲ್ಲೇ ಬೆಟ್ಟ ಹತ್ತಿದರು. ಈ ಬೆಟ್ಟವು ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿದ್ದು, ಬರಿಗಾಲಲ್ಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿದರು.

ಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆ

ವರ್ಷಕ್ಕೆ ಒಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನನ್ನು ಕಾಣಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಅಗಮಿಸಿದ್ದರು. ಆದರೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಳೆ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಅಂದ ಹಾಗೆ ಈ ಸ್ಥಳವು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಇದ್ದು, ಬಿಂಡಿಗ ದೇವಿರಮ್ಮ ಬೆಟ್ಟ ಅಂತಲೇ ಹೆಸರಾಗಿದೆ.

Thousands Of Devotees Visits Bindiga Deviramma Hills

ದೇವಿರಮ್ಮ ದರ್ಶನ ಪಡೆಯಲು ಸಚಿವ ಸಿ. ಟಿ. ರವಿ ಅವರು ಜಾರುವ ಕಾಲು ದಾರಿಯಲ್ಲೇ ಬೆಟ್ಟ ಹತ್ತಿದರು. ಸಿ. ಟಿ. ರವಿ ಅವರು ಪ್ರತಿ ವರ್ಷವು ಬಿಂಡಿಗ ದೇವಿರಮ್ಮನ ಬೆಟ್ಟಕ್ಕೆ ಬಂದು, ದೇವಿಯ ದರ್ಶನ ಪಡೆಯುತ್ತಾರೆ. ದೀಪಾವಳಿಯಂದು ದೇವಿಯ ದರ್ಶನ ಪಡೆಯುವುದು ಬಹಳ ವಿಶೇಷವಾದದ್ದು.

Thousands Of Devotees Visits Bindiga Deviramma Hills
English summary
Bindiga Deviramma hills climbed by thousands of devotees on Sunday in Chikkamagaluru taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X