ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆ ಪಿಡಿಒ ವಾಹನಕ್ಕೆ ಬೆಂಕಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 19: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಪಿಡಿಒ ಒಬ್ಬರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಂಭೈನೂರು ಗ್ರಾಮದಲ್ಲಿ ನಡೆದಿದೆ.

ಬಸಾಪುರ ಗ್ರಾಮದದಲ್ಲಿ ಕಲ್ಲೇಶಪ್ಪ ಎಂಬುವವರು ರಾಗಿ ಬೆಳೆದಿದ್ದು, ಅದೇ ಬಗರ್ ಹುಕುಂ ಜಮೀನಿನಲ್ಲಿ ಪಿಡಿಒ ಹನುಮಂತಪ್ಪ ಎಂಬುವವರು ರಾಗಿ ಕಟಾವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಈ ವಿಚಾರವಾಗಿ ಬುಧವಾರ ಸಂಜೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪಿಡಿಒ ಹನುಮಂತಪ್ಪ ನವರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇನ್ನೂ ಬೆಂಕಿ ಹಚ್ಚಿದ ಹಿನ್ನೆಲೆ ಗಂಟೆಗೂ ಹೆಚ್ಚು ಕಾಲ ಓಮ್ನಿ ವಾಹನ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಯಿತು. ಬಸಾಪುರ ಗ್ರಾಮದ ಸರ್ಕಾರಿ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಜಗಳ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಇದು ಬುಧವಾರ ವಿಕೋಪಕ್ಕೆ ತೆರಳಿದ ಪರಿಣಾಮ ಎರಡು ಸಮುದಾಯದ ನಡುವೆ ಮಾತಿನ ಚಕಮಕಿ ನಡೆದು ಬುಧವಾರ ಘಟನೆ ವಿಕೋಪಕ್ಕೆ ತಿರುಗು ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಓಮ್ನಿ ವಾಹನ ಬೆಂಕಿಗೆ ಆಹುತಿಯಾಗಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಸ್ಥಳಕ್ಕೆ ಎಸ್.ಪಿ ಭೇಟಿ ಪರಿಶೀಲನೆ

ಸ್ಥಳಕ್ಕೆ ಎಸ್.ಪಿ ಭೇಟಿ ಪರಿಶೀಲನೆ

ಘಟನೆಯ ಹಿನ್ನೆಲೆ ಗುರುವಾರ ಸ್ಥಳಕ್ಕೆ ಎಸ್.ಪಿ ಅಕ್ಷಯ್ ಎಂ ಹಾಕೆ ಸೇರಿದಂತೆ ಡಿವೈಎಸ್‍ಪಿ ರೇಣುಕಾ ಪ್ರಸಾದ್, ಸರ್ಕಲ್ ಇನ್ಸಪೆಕ್ಟರ್ ಯೋಗಿಶ್. ಪಿಎಸ್‍ಐ ಬಸವರಾಜು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಹಾಗೂ ಕೊಲೆಗೆ ಯತ್ನದ ಪ್ರತಿದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಆದೇಶ ನೀಡಿದ್ದೇನೆ ಎಂದರು

ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ

ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ

ಇದೇ ಘಟನೆಯಲ್ಲಿ ಪಿಡಿಒ ಹನುಮಂತಪ್ಪ ಅವರ ಮೇಲೆ ಶಾಂತಿ ಕದಡಿದ ಆರೋಪದಡಿ ದೂರು ದಾಖಲಾಗಿದೆ. ಹಿಂದೆ ದಾಖಲಾಗಿರುವ ಮೂರು ಪ್ರಕರಣ ಬಾಕಿ ಇವೆ. ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಪಂಚಾಯತ್ ರಾಜ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದರು

ಏನಿದು ಪ್ರಕರಣ

ಏನಿದು ಪ್ರಕರಣ

ಗ್ರಾಮದ ಸರ್ವೆ ನಂಬರ್ 49 ರಲ್ಲಿನ ಮೂರು ಜಮೀನು ಮಂಜೂರಿಗೆ ಗ್ರಾಮದ ಲಂಕೇಶ್ ಅರ್ಜಿ ಸಲ್ಲಿಸಿದ್ದರು. ಅದೇ ಭೂಮಿಗೆ ತಿಪ್ಪೇಶ್ ಕೂಡಾ ಅರ್ಜಿ ಸಲ್ಲಿಸಿದ್ದರು. ಇಬ್ಬರ ಕಡತಗಳು ತಾಲ್ಲೂಕು ಕಚೇರಿಯಿಂದ ವಿಲೇವಾರಿಯಾಗಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಬಾಕಿ ಉಳಿದಿವೆ. ಇದೇ ಭೂಮಿಗಾಗಿ ಕಳೆದ 6 ತಿಂಗಳಿನಲ್ಲಿ ಹಲವು ಬಾರಿ ಘರ್ಷಣೆ ನಡೆದಿದ್ದು, 6 ಪ್ರಕರಣ ದಾಖಲಾಗಿದೆ.

Recommended Video

ಪೊಲೀಸ್ ಅಂದ್ರೆ ಹೀಗಿರಬೇಕು | Oneindia Kannada
ಧಗಧಗ ಉರಿದ ಓಮ್ನಿ ವಾಹನ

ಧಗಧಗ ಉರಿದ ಓಮ್ನಿ ವಾಹನ

ಜಮೀನು ವಿವಾದ ಸಂಬಂಧಿಸಿದಂತ ಬುಧವಾರ ಗಲಾಟೆ ಮೀತಿ ಮೀರಿತ್ತು. ಈ ವೇಳೆ ಅಕಸ್ಮಿಕವಾಗಿ ಇದ್ದಕ್ಕಿದ್ದಂತೆ ಪಿಡಿಒ ಓಮ್ನಿ ವಾಹನ ಧಗಧಗ ಉರಿಯ ತೊಡಗಿತು. ಸುಮಾರು 2 ಗಂಟೆಗೂ ಹೆಚ್ಚು ಕಾಲ ವಾಹನ ಹೊತ್ತಿ ಉರಿದ ಪರಿಣಾಮ ಸಂಪೂರ್ಣ ನಾಶವಾಗಿದೆ. ವಾಹನ ಮಾಲೀಕರು ತಮ್ಮ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಮತ್ತೊಂದು ಗುಂಪು ವಾಹನಕ್ಕೆ ಬೆಂಕಿ ಹಾಕಿದೆ ಎಂದು ಆರೋಪಿಸಿದ್ದಾರೆ. ಆದರೆ ಇನ್ನೊಂದು ಗುಂಪಿನವರು ನಮ್ಮ ಮೇಲೆ ಪ್ರಕರಣ ದಾಖಲಿಸುವ ಸಲುವಾಗಿ ವಾಹನದ ಮಾಲೀಕರೇ ತಮ್ಮ ವಾಹನಕ್ಕೆ ಬೆಂಕಿ ಹಾಕಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

English summary
The incident where set fire to an Omni vehicle took place in the Shambhainoor village of Ajjampura taluk in Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X