ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಅರಳೀಮರದ ಕೆಳಗಿದ್ದ ಪೂಜಾ ಸಾಮಾಗ್ರಿಗಳಿಗೆ ಬೆಂಕಿ, ಸ್ಥಳದಲ್ಲಿ ಬಿಗುವಿನ ವಾತವರಣ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂ. 15: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳನ್ನು ಇರಿಸಲಾಗಿದ್ದ ಅರಳಿಮರದ ಕಟ್ಟೆಬುಡಕ್ಕೆ ದುಷ್ಕರ್ಮಿಗಳು ಸೋಮವಾರ ರಾತ್ರಿ ಬೆಂಕಿ ಹಚ್ಚಿ ಸುಟ್ಟಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದಲ್ಲಿ ಈ ಘಟನೆ ನಡೆದಿದ್ದು, ಮಸೀದಿ ಬಳಿ ಪ್ರತೀ ವರ್ಷ ಮುಸ್ಲಿಂ ಸಮುದಾಯದವರು ಉರುಸ್ ನಡೆಸಿ ನಂತರ ಹಸಿರು ಭಾವುಟಗಳನ್ನು ಅರಳಿ ಕಟ್ಟೆ ಸುತ್ತಕಟ್ಟುವುದು ವಾಡಿಕೆಯಾಗಿತ್ತು. ಸೋಮವಾರ ರಾತ್ರಿ ಯಾರೋ ಅರಳಿಮರದಬುಡಕ್ಕೆ ಬೆಂಕಿ ಹಚ್ಚಿದ್ದು, ಬೆಂಕಿಗೆ ಹಸಿರುಭಾವುಟಗಳು ಸುಟ್ಟು ಹೋಗಿವೆ. ಮಂಗಳವಾರ ಬೆಳಿಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಶ್ಚಿಮಘಟ್ಟದಲ್ಲಿ ಭಾರಿ ಮಳೆ, ದತ್ತಪೀಠ ರಸ್ತೆ ಕುಸಿತ; ವಾಹನ ಸವಾರರು ಆತಂಕದಲ್ಲೇ ಸಂಚಾರಪಶ್ಚಿಮಘಟ್ಟದಲ್ಲಿ ಭಾರಿ ಮಳೆ, ದತ್ತಪೀಠ ರಸ್ತೆ ಕುಸಿತ; ವಾಹನ ಸವಾರರು ಆತಂಕದಲ್ಲೇ ಸಂಚಾರ

ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಾರೀಸಂಖ್ಯೆಯ ಜನರು ಜಮಾಯಿಸಿದ್ದು, ದುಷ್ಕಮಿಗಳ ವಿರುದ್ದ ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಭೇಟಿನೀಡಿ ಪರಿಶೀಲನೆ ನಡೆಸಿದರು.ಅನ್ಯಕೋಮಿನ ಪೂಜಾ ಸ್ಥಳಕ್ಕೆ ಬೆಂಕಿಹಚ್ಚುವ ಮೂಲಕ ಗಲಭೆ ಸೃಷ್ಟಿಸಲು ಕಿಡಿಗೇಡಿಗಳು ಹುನ್ನಾರ ನಡೆಸಿದ್ದುಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರುಆಗ್ರಹಿಸಿದರು.

 ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಲು ಸ್ಥಳೀಯರು ಆಗ್ರಹ

ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಲು ಸ್ಥಳೀಯರು ಆಗ್ರಹ

ಮುಸ್ಲಿಂ ಸಮುದಾಯದ ಹಸಿರುವ ಬಾವುಟಗಳನ್ನು ಇರಿಸಲಾಗಿದ್ದ ಅರಳಿಮರದ ಕಟ್ಟೆಬುಡಕ್ಕೆ ದುಷ್ಕರ್ಮಿಗಳು ಸೋಮವಾರ ರಾತ್ರಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎನ್ನುವುದು ಕಂಡು ಬಂದಿದೆ.

ಆದಿಶಕ್ತಿ ನಗರದ ಮಧ್ಯೆ ಇದ್ದ ಈ ಮರವನ್ನ ಮುಸ್ಲಿಮರು ಭಕ್ತಿ-ಭಾವದಿಂದ ಪೂಜಿಸಿಕೊಂಡು ಬರುತ್ತಿದ್ದರು, ಬಾವುಟಗಳು, ಪುಸ್ತಕ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿಗಳನ್ನಿಟ್ಟು ಭಕ್ತಿಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದ ಸ್ಥಳ ಬೆಂಕಿಯಿಂದ ಸಟ್ಟು ಕರಕಲಾಗಿದೆ. ಬೆಂಕಿ ಇಟ್ಟವರು ಇಂತವರೇ ಅಂತ ಯಾರಿಗೂ ಗೊತ್ತಿಲ್ಲ. ದೂರು ದಾಖಲಿಸುವಂತೆ ತಿಳಿಸಿದ್ದರಿಂದ ಸ್ಥಳಿಯರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ನಂಬಿಕೆ, ಭಕ್ತಿ-ಭಾವದಿಂದ ಪೂಜಿಸುತ್ತಿದ್ದ ಸ್ಥಳದಲ್ಲಿನ ಮರಕ್ಕೆ ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಊರಿನ ಕೆಲ ಸ್ಥಳಿಯರು ಇಲ್ಲಿ ಯಾವುದೇ ಖುರಾನ್ ಇರಲಿಲ್ಲ ಅಂತೇಳಿದ್ರೆ, ಕೆಲವರು ನಾವು ಖುರಾನ್ ಗ್ರಂಥ, ಪೂಜಾ ಸಾಮಾಗ್ರಿಗಳನ್ನಿಟ್ಟು ಪೂಜಿಸ್ತಿದ್ವಿ ಅಂತಿದ್ದಾರೆ.

ಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆ

 ರಾಜ್ಯದಲ್ಲಿ ಧರ್ಮ ದಂಗಲ್

ರಾಜ್ಯದಲ್ಲಿ ಧರ್ಮ ದಂಗಲ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಸ್ಪಿ ಅಕ್ಷಯ್ ಆದಿಶಕ್ತಿ ನಗರದಲ್ಲಿ ಅರಳಿಮರ ಕೆಳಗಡೆ ಇರಿಸಲಾಗಿದ್ದ ಬಾವುಟಗಳು ಬೆಂಕಿಗೆ ಆಹುತಿಯಾಗಿದೆ. ಇದು ಕಿಡಿಗೇಡಿಗಳ ಕೆಲಸವೋ ಅಥವಾ ಆಕಸ್ಮಿಕವೋ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಈಗಾಗಲೇ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಧರ್ಮಗ್ರಂಥ ವಿತ್ತು ಎಂದು ಕೆಲವರು ಸುಳ್ಳುಸುದ್ಧಿ ಹರಡಿದ್ದು,ಇದು ಸುಳ್ಳು ಇದನ್ನು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಗ್ರಾಮಸ್ಥರು ದೂರು ನೀಡಿದ್ದು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

ಒಟ್ಟಾರೆ, ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿದೆ. ಜಾತಿ, ಧರ್ಮ, ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಎಂದು ಸಮಾಜ ಒಡೆಯುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲಾ ಧರ್ಮದಲ್ಲೂ ಸಮಾನತೆ ಸಾರುವವರು ಇದ್ದಾರೆ ಎಂಬುದನ್ನು ಕಾಫಿನಾಡಿಗರು ಸಮಾನತೆ ಸಾರಿದ್ದಾರೆ. ಮಸೀದಿ ಮುಂದೆ ಮಠದ ಕಾರ್ಯಕ್ರಮ ಫೆಕ್ಸ್ ಹಾಕಿ ಸಮಾನತೆ ತೋರಿರುವುದು ನಿಜಕ್ಕೂ ಸಮಾಜ ಮೆಚ್ಚುವಂತಹದ್ದು.

 ಹೊಗೆಯ ಹಗೆ ಒಳಗೇ ಇರುವುದಂತು ಸತ್ಯ

ಹೊಗೆಯ ಹಗೆ ಒಳಗೇ ಇರುವುದಂತು ಸತ್ಯ

ಇನ್ನ ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ಮಾತನಾಡಿ, ಅರಳಿಮರದ ಬುಡದಲ್ಲಿ ಧರ್ಮಗ್ರಂಥ ಇರಲಿಲ್ಲ, ಯಾರೋ ಬೇಕೆಂದೇ ಹೀಗೆ ರೂಮರ್ ಹಬ್ಬಿಸಿದ್ದಾರೆ. ಬೇಕು ಅಂತ ಬೆಂಕಿ ಹಾಕಿದ್ದಾರೋ ಅಥವಾ ಆಕಸ್ಮಿಕವಾಗಿ ಆಗಿದೆಯೋ ಗೊತ್ತಿಲ್ಲ. ಮರದ ಬುಡದಲ್ಲಿ ಬಾವುಟ ಮತ್ತು ಒಂದಷ್ಟು ಪೋಟೋಗಳಿದ್ದವು ಎಂದಿದ್ದಾರೆ.

ಒಟ್ಟಾರೆ, ರಾಜ್ಯಾದ್ಯಂತ ಈಗಾಗಲೇ ಹಿಜಾಬ್ ಸಂಘರ್ಷ, ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿಷೇಧ, ಜಟ್ಕಾ ಕಟ್-ಹಲಾಲ್ ಕಟ್ ಹೀಗೆ ಒಂದಾದ ಬಳಿಕ ಮತ್ತೊಂದರಂತೆ ಧರ್ಮದ ದಂಗಲ್ ಎರಡು ಸಮುದಾಯದ ಮಧ್ಯೆ ನಡೆಯುತ್ತಲೇ ಇದೆ. ಈ ಮಧ್ಯೆ ಎಲ್ಲವೂ ತಣ್ಣಗಾಯ್ತು ಅನ್ನುವಷ್ಟರಲ್ಲಿ ಇದೀಗ ಮುಸ್ಲಿಮರ ಭಕ್ತಿಯ ಮರಕ್ಕೂ ಬೆಂಕಿ ಬಿದ್ದಿರೋದು ಮತ್ತೊಂದು ಸಂಘರ್ಷ ಎದುರಾಗುತ್ತಾ ಎಂಬ ಆತಂಕ ಎದುರಾಗಿದೆ. ಈ ಮಧ್ಯೆ ಪೊಲೀಸರ ಸಮಯಪ್ರಜ್ಞೆಯಿಂದ ಸಮಸ್ಯೆ ತಣ್ಣಗಾಗಿದ್ರು ಕೂಡ ಮರಕ್ಕೆ ಬಿದ್ದ ಬೆಂಕಿಯ ಹೊಗೆಯ ಹಗೆ ಒಳಗೇ ಇರುವುದಂತು ಸತ್ಯ.

 ಹಿಜಾಬ್ ವಿಚಾರದಿಂದ ಗೊಂದಲದ ಗೂಡಾಗಿದ್ದ ಮಂಗಳೂರು

ಹಿಜಾಬ್ ವಿಚಾರದಿಂದ ಗೊಂದಲದ ಗೂಡಾಗಿದ್ದ ಮಂಗಳೂರು

ಕಾಫಿನಾಡಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳ ಎದುರು ಮತ್ತೊಂದು ಗುಂಪು ನೀಲಿ ಶಾಲು ಧರಿಸಿ ಹಿಜಾಬ್ ಗೆ ಬೆಂಬಲ ನೀಡುವ ಮೂಲಕ ವಿವಾದಕ್ಕೆ ಹೊಸ ತಿರುವು ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ರಾಜ್ಯದಾದ್ಯಂತ ವ್ಯಾಪಿಸಿದೆ. ಕರಾವಳಿ ಮತ್ತು ಮಲೆನಾಡಿನ ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸದ್ದು ಮಾಡುತ್ತಿದೆ. ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಹಿಜಾಬ್ ವಿಚಾರದಿಂದ ಗೊಂದಲದ ಗೂಡಾಗಿದ್ದ ಮಂಗಳೂರಿನ ವಿವಿ ಕಾಲೇಜು ಮತ್ತೆ ಸುದ್ದಿಯಲ್ಲಿದೆ. ಹಿಜಾಬ್ ಗಲಾಟೆಯ ಮುಂದುವರಿದ ಭಾಗವಾಗಿ ಕಾಲೇಜಿನಲ್ಲಿ ಎರಡು ತಂಡದ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆಯಾಗಿದೆ.

Recommended Video

Rahul Gandhi ED ,DK Sureshರನ್ನು ತಳ್ಳಾಡಿದ ಪೊಲೀಸರು | Oneindia Kannada

English summary
Flags and other objects belonging to muslim community were burnt down in a fire incident happened at Chikkamagaluru city. These were kept at the bottome of sacred tree where muslims worship from several years. Were these intentional work or just an accident yet to be confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X