ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಡಿಯೋ; ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ತಬ್ಬಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ತಬ್ಬಿ ಕಣ್ಣೀರಿಟ್ಟ ವಿದ್ಯಾರ್ಥಿಗಳು | Oneindia Kannada

ಚಿಕ್ಕಮಗಳೂರು, ಸೆಪ್ಟೆಂಬರ್ 26: ಗುರು ಶಿಷ್ಯ ಸಂಬಂಧ ಪಠ್ಯ, ಶಾಲೆಗಷ್ಟೇ ಸೀಮಿತ ಎನಿಸುತ್ತಿರುವ ಕಾಲವಿದು. ಆದರೆ ಶಿಕ್ಷಕರೆಡೆಗೆ ಈ ಮಕ್ಕಳ ಪ್ರೀತಿಯನ್ನು ನೋಡಿದರೆ ಎಂಥವರಲ್ಲೂ ಅಚ್ಚರಿ ಮೂಡುತ್ತದೆ.

ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತಣಿಗೆಬೈಲು ಸರ್ಕಾರಿ ಪ್ರಾಥಮಿಕ‌ ಶಾಲೆಯಲ್ಲಿ ಶಿಕ್ಷಕರಾಗಿದ್ದ ನಾಗರಾಜಪ್ಪ ಅವರಿಗೆ ಇಲ್ಲಿಂದ ಲಿಂಗದಹಳ್ಳಿ ಶಾಲೆಗೆ ವರ್ಗಾವಣೆಯಾಗಿತ್ತು. ವರ್ಗಾವಣೆಯಾಗಿ ಬೇರೆಡೆಗೆ ಹೋಗುತ್ತಿದ್ದ ಶಿಕ್ಷಕರನ್ನು ಕಳುಹಿಸಿಕೊಡಲು ಮನಸ್ಸಿಲ್ಲದೇ ಮಕ್ಕಳು ಕಣ್ಣೀರಿಟ್ಟಿದ್ದಾರೆ.

Students Sendoff Teacher With Tears In Tarikere School

ಅನೇಕ ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರಾದ ನಾಗರಾಜಪ್ಪ ಅವರನ್ನು ಕಂಡರೆ ಇಲ್ಲಿನ ಮಕ್ಕಳಿಗೆ ಅಚ್ಚುಮೆಚ್ಚು. ಪಾಠದಲ್ಲಾಗಲಿ, ಆಟದಲ್ಲಾಗಲಿ ಮಕ್ಕಳಿಗೆ ಉತ್ಸಾಹದ ಚಿಲುಮೆಯಾಗಿದ್ದರು. ಈ ಶಿಕ್ಷಕರು ಇಂದು ತಮ್ಮ ಶಾಲೆಯಿಂದ ಬೇರೆಡೆಗೆ ಹೋಗುತ್ತಿದ್ದಾರೆ ಎಂದು ಮಕ್ಕಳು ದುಃಖದಿಂದ ಕಣ್ಣೀರಿಟ್ಟರು. ಶಿಕ್ಷಕರಿಗೆ ತಮ್ಮ ಶಾಲೆಯನ್ನು ಬಿಟ್ಟು ಹೋಗದಂತೆ ತಬ್ಬಿಕೊಂಡು ಅತ್ತರು.

ಸಾವಿರಾರು ಮಕ್ಕಳ ಬದುಕು ಕಟ್ಟಿಕೊಟ್ಟ 'ಸಂತ ಶಿಕ್ಷಕ' ಬಿಜಿ ಅಣ್ಣಿಗೇರಿ ಇನ್ನಿಲ್ಲಸಾವಿರಾರು ಮಕ್ಕಳ ಬದುಕು ಕಟ್ಟಿಕೊಟ್ಟ 'ಸಂತ ಶಿಕ್ಷಕ' ಬಿಜಿ ಅಣ್ಣಿಗೇರಿ ಇನ್ನಿಲ್ಲ

ಈ ಪುಟ್ಟ ಮಕ್ಕಳು ಶಿಕ್ಷಕರನ್ಬು ತಬ್ಬಿಕೊಂಡು ಗೋಳಿಡುತ್ತಿರುವುದನ್ನು ಕಂಡ ಎಲ್ಲರಲ್ಲೂ ಕಣ್ಣೀರು ಜಿನುಗಿತ್ತು.

English summary
The children of government school in tanigebailu of tarikere send off their teacher with tears. This video will show the relationship between students and teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X