ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಅಶೋಕ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಅಧಿಕಾರಿ ವಜಾ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 09; ಕಂದಾಯ ಸಚಿವ ಆರ್. ಅಶೋಕ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಸರ್ಕಾರಿ ಅಧಿಕಾರಿ ಸೇವೆಯಿಂದ ವಜಾಗೊಂಡಿದ್ದಾರೆ. ಶೃಂಗೇರಿ ಸಬ್ ರಿಜಿಸ್ಟ್ರಾರ್ ಆಗಿದ್ದ ಚೆಲುವರಾಜ್ ವಜಾಗೊಳಿಸಲು ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕತೆಯ ಕಿರೀಟವನ್ನು ಹೊತ್ತಿದ್ದ ಶೃಂಗೇರಿಯ ಉಪ ನೋಂದಣಾಧಿಕಾರಿ ಚಲುವರಾಜು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಮಂಡ್ಯ ಕರ್ತವ್ಯ ನಿರ್ವಹಿಸುವಾಗಿ ನಡೆಸಿರುವ ಆಡಳಿತ ಲೋಪಕ್ಕಾಗಿ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ಅಶೋಕ್ ಪಿಎ ಲಂಚ ಕೇಳಿದ ಆರೋಪ; ಪೊಲೀಸರಿಗೆ ದೂರು ನೀಡುತ್ತೇನೆಂದ ಚೆಲುವರಾಜ್ಅಶೋಕ್ ಪಿಎ ಲಂಚ ಕೇಳಿದ ಆರೋಪ; ಪೊಲೀಸರಿಗೆ ದೂರು ನೀಡುತ್ತೇನೆಂದ ಚೆಲುವರಾಜ್

ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆಯ ಆಯುಕ್ತರ ಕಛೇರಿ ಆದೇಶ ಪತ್ರದಂತೆ ಚಲುವರಾಜು ಸೇರಿದಂತೆ ಮಂಡ್ಯ ಉಪ ನೋಂದಣಾಧಿಕಾರಿ ಕಛೇರಿಗೆ ಸೇರಿದ 4 ಮಂದಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

 12 ಕೋಟಿ ರೂ. ಲಂಚ ಪಡೆದ ಆರೋಪ: ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್ 12 ಕೋಟಿ ರೂ. ಲಂಚ ಪಡೆದ ಆರೋಪ: ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್

Sringeri Sub Registrar Cheluvaraj Dismissed

ಎಲ್ಲರೂ ಮಂಡ್ಯ ಉಪ ನೋಂದಣಿ ಕಛೇರಿಯಲ್ಲಿ 2005-06ರಲ್ಲಿ ಸೇವೆಯಲ್ಲಿರುವಾಗ ಸರ್ಕಾರಕ್ಕೆ ಸೇರಬೇಕಿದ್ದ ಹಣವನ್ನು ಬ್ಯಾಂಕಿಗೆ ಸಂದಾಯವಾದ ನಂತರ ಚಲನ್ ತಿದ್ದಿ ಸರ್ಕಾರಕ್ಕೆ 1.78 ಲಕ್ಷ ರೂ. ವಂಚನೆ ಮಾಡಿರುವ ಕುರಿತು ದೂರು ದಾಖಲಾಗಿತ್ತು.

ದೇಶ ಕಾಯುವ ಯೋಧನಿಂದ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ರೆವಿನ್ಯೂ ಇನ್‌ಸ್ಪೆಕ್ಟರ್ ! ದೇಶ ಕಾಯುವ ಯೋಧನಿಂದ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ರೆವಿನ್ಯೂ ಇನ್‌ಸ್ಪೆಕ್ಟರ್ !

ವಿಚಾರಣಾ ವರದಿಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮತ್ತು ಇದಕ್ಕೆ ಅವರುಗಳು ಕೊಟ್ಟ ಸಮಜಾಯಿಶಿ ತೃಪ್ತಿಕರವಾಗಿ ಇಲ್ಲದಿರುವುದರಿಂದ ಎಲ್ಲರನ್ನು ವಜಾ ಮಾಡುವ ಆದೇಶ ನೀಡಲಾಗುತ್ತಿದೆ. ಆರೋಪಿ ಅಧಿಕಾರಿಯ 1 ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಲು ಇಲಾಖೆಯ ಶಿಸ್ತು ಪ್ರಾಧಿಕಾರಿ ಹಾಗೂ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಕೆ. ಪಿ. ಮೋಹನರಾಜ್ ಆದೇಶಿಸಿದ್ದಾರೆ.

Recommended Video

ಪಾಕಿಸ್ತಾನದ ಉಗ್ರರಿಂದ ಮತ್ತೊಮ್ಮೆ ಗಡಿಯಲ್ಲಿ ಕಿರಿಕ್ | Oneindia Kannada

ಚೆಲುವರಾಜು ಪ್ರಸ್ತುತ ಶೃಂಗೇರಿ ಉಪ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಾಮಾಣಿಕ ಸೇವೆಗಾಗಿ ವಿವಿಧ ಇಲಾಖೆಗಳಿಂದ ಸನ್ಮಾನಗಳನ್ನು ಪಡೆದಿದ್ದರು. ಇತ್ತೀಚೆಗೆ ಇಲ್ಲಿಯೂ ಒಂದು ನೋಂದಣಿ ಪ್ರಕರಣದಲ್ಲಿ ಹಣ ನಾಪತ್ತೆ ಆಗಿರುವುದರ ಬಗ್ಗೆ ವಿವಾದ ಸೃಷ್ಠಿಸಿರುವುದು ಬೆಳಕಿಗೆ ಬಂದಿದೆ.

English summary
Sringeri sub-registrar Cheluvaraj dismissed from government duty. Irregularities found when he working at Mandya in 2005-06. Cheluvaraj who made corruption allegations against revenue minister R. Ashok personal assistant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X