ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ ಅತ್ಯಾಚಾರ ಪ್ರಕರಣ: ತನಿಖಾಧಿಕಾರಿ ಸಿದ್ದರಾಮಯ್ಯ ಅಮಾನತು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 5: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲೆ 17 ಜನರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಸಿದ್ದರಾಮಯ್ಯ ಬಿ.ಎಂ ಅವರನ್ನು ಅಮಾನತು ಮಾಡಲಾಗಿದೆ.

ಶೃಂಗೇರಿ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಮಯ್ಯ ಬಿ.ಎಂ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಎಎಸ್ಪಿ ಶೃತಿ ನೇತೃತ್ವದಲ್ಲಿ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಶೃಂಗೇರಿ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧಿಸುವಂತೆ ಕಾಂಗ್ರೆಸ್ ಧರಣಿಶೃಂಗೇರಿ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧಿಸುವಂತೆ ಕಾಂಗ್ರೆಸ್ ಧರಣಿ

ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಸಿದ್ದರಾಮಯ್ಯ ಬಿ.ಎಂ ಅವರು ಶೃಂಗೇರಿ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಘಟನೆ ನಡೆದು ಎರಡು ದಿನದ ಬಳಿಕ ದೂರು ದಾಖಲಿಸಿದ್ದರಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

 Sringeri Rape Case: Investigation Officer Siddaramaiah BM Suspended

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಅಪ್ರಾಪ್ತ ಮೇಲೆ ಅವಳ ಚಿಕ್ಕಮ್ಮನ ಸಹಕಾರದಿಂದ 17 ಜನರು 5 ತಿಂಗಳುಗಳ ಕಾಲ ಅತ್ಯಾಚಾರ ಮಾಡಿದ್ದರು. ಪ್ರಕರಣದ ಕುರಿತು ಈಗಾಗಲೇ 8 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

 Sringeri Rape Case: Investigation Officer Siddaramaiah BM Suspended

ಅಪ್ರಾಪ್ತ ಬಾಲಕಿ ಮೇಲೆ 17 ಜನರಿಂದ 5 ತಿಂಗಳು ಅತ್ಯಾಚಾರ; 8 ಜನರ ಬಂಧನಅಪ್ರಾಪ್ತ ಬಾಲಕಿ ಮೇಲೆ 17 ಜನರಿಂದ 5 ತಿಂಗಳು ಅತ್ಯಾಚಾರ; 8 ಜನರ ಬಂಧನ

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿ ಸಿದ್ದರಾಮಯ್ಯ ಬಿ.ಎಂ ಅವರ ಮೇಲೆ ಒತ್ತಡಗಳು ಬಂದಿದ್ದವು ಎನ್ನಲಾಗಿದೆ. ಆ ಕಾರಣಕ್ಕೆ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು ಶೃಂಗೇರಿಯ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಮಯ್ಯ ಬಿ.ಎಂ ಅವರನ್ನು ಅಮಾನತುಗೊಳಿಸಿದ್ದಾರೆ.

English summary
Siddaramaiah BM, the investigating officer of the Sringeri rape case, has been suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X